ಮೈಸೂರು ಲೋಕಸಭಾ ಕ್ಷೇತ್ರ – ಜಿಟಿ , ಸಾರಾ ನಡುವೆ ಜೆಡಿಎಸ್ ಟಿಕೆಟ್ ಗೆ ಪೈಪೋಟಿ

Team Newsnap
1 Min Read

ಲೋಕಸಭಾ ಚುನಾವಣೆಗೆ ತಯಾರಿಗಾಗಿ ಎಲ್ಲಾ ಪಕ್ಷಗಳೂ ಸಿದ್ದತೆ ನಡೆಸಿದ ಬೆನ್ನಲ್ಲೇ ಜೆಡಿಎಸ್ ನಲ್ಲಿ ಟಿಕೆಟ್ ಪೈಪೋಟಿ ಆರಂಭವಾಗಿದೆ.

ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಾರಾ ಮಹೇಶ್ ಭಾರಿ ಸಿದ್ದತೆ ಮಾಡುತ್ತಿದ್ದಾರೆ . ಆದರೆ , ಪಕ್ಷ ಟಿಕೆಟ್ ನೀಡಿದರೆ ಲೋಕಸಭಾ ಚುನಾವಣೆಗೆ ನಾನೇ ಅಭ್ಯರ್ಥಿ ಅಂತ ಜಿಟಿ ದೇವೇಗೌಡ ಹೇಳಿದ್ದಾರೆ.

ಈ ಮೂಲಕ ಮಹೇಶ್​ಗೆ ಟಿಕೆಟ್ ತಪ್ಪಿಸಲು ಹಿರಿಯ ಶಾಸಕ ಜಿ.ಟಿ ದೇವೇಗೌಡರೂ ಸಹ ತಾವೂ ಆಕಾಂಕ್ಷಿ ಎಂಬ ಅಸ್ತ್ರ ಪ್ರಯೋಗ ಮಾಡಿದ್ದಾರೆ.

ಸದ್ಯ ಹೆಚ್.ಡಿ. ಕುಮಾರಸ್ವಾಮಿ ಜೊತೆ ಸಾರಾ ಮಹೇಶ್ ವಿದೇಶ ಪ್ರವಾಸದಲ್ಲಿದ್ದಾರೆ. ಈ ಮೂಲಕ ಲೋಕಸಭೆ ಟಿಕೆಟ್​ಗಾಗಿ ಮಹೇಶ್ ಅಲ್ಲಿಂದಲೇ ಪ್ರಯತ್ನ ಆರಂಭಿಸಿದ್ದಾರೆ.ಚಿತ್ರದುರ್ಗ ಬಳಿ ಲಾರಿಗೆ ಕಾರು ಡಿಕ್ಕಿ: ಒಂದೇ ಕುಟುಂಬದ ನಾಲ್ವರು ಬಲಿ – ಮೂವರಿಗೆ ಗಾಯ

ಪಕ್ಷದ ನಾಯಕರು ನನ್ನನ್ನು ಲೋಕಸಭಾ ಚುನಾವಣೆಗೆ ನಿಲ್ಲಿಸಬೇಕು ಅಂದರೆ ನಾನೇ ಚುನಾವಣಾ ಕಣಕ್ಕೆ ಇಳಿಯಬೇಕಾಗುತ್ತದೆ. ಪಕ್ಷ ತೀರ್ಮಾನ ತೆಗೆದುಕೊಂಡರೆ ನಾನು ರೆಡಿ ಇರಬೇಕಾಗುತ್ತದೆ. ನಾನು ಎಲ್ಲದಕ್ಕೂ ರೆಡಿ ಇದ್ದೇನೆ ಎಂದು ಜಿಟಿ ದೇವೇಗೌಡ ಸ್ಷಷ್ಟ ಮಾತುಗಳಲ್ಲಿ ಹೇಳಿದ್ದಾರೆ.

Share This Article
Leave a comment