December 28, 2024

Newsnap Kannada

The World at your finger tips!

krishna river

ಬಟ್ಟೆ ತೊಳೆಯಲು ಹೋಗಿ‌ ಕೃಷ್ಣಾ ನದಿಯಲ್ಲಿ ಜಲ ಸಮಾಧಿಯಾದ ನಾಲ್ವರು ಸಹೋದರರು

Spread the love

ಕೃಷ್ಣಾ ನದಿಯಲ್ಲಿ ಹಾಸಿಗೆ, ಬಟ್ಟೆ ತೊಳೆಯಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಸಹೋದರರು ಕೃಷ್ಣಾ ನದಿಯಲ್ಲಿ ಜಲ ಸಮಾಧಿಯಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಬಳಿ ನಡೆದಿದೆ.

ಪರಶುರಾಮ್ ಬನಸೊಡೆ, ಶಂಕರ್ ಬನಸೊಡೆ, ಸದಾಶಿವ ಬನಸೊಡೆ, ಧರೆಪ್ಪ ಬನಸೊಡೆ ಸಾವನ್ನಪ್ಪಿದ ಸಹೋದರರು.ಈ ನಾಲ್ವರೂ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ನೀರಲ್ಲಿ ಕಾಲು ಜಾರಿದ ಒಬ್ಬರನ್ನು ರಕ್ಷಣೆ ಮಾಡಲು ಹೋಗಿ ಉಳಿದ ಸಹೋದರರೂ ಕೂಡ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಕೊಚ್ಚಿಹೋದವರನ್ನ ಪತ್ತೆ ಮಾಡುವ ಕಾರ್ಯವನ್ನು ಸ್ಥಳೀಯರು ಸೇರಿದಂತೆ ರಕ್ಷಣಾ ಸಿಬ್ಬಂದಿ ಮಾಡುತ್ತಿದೆ. ಒಂದೇ ದಿನ ನಾಲ್ವರು ಸಹೋದರರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Copyright © All rights reserved Newsnap | Newsever by AF themes.
error: Content is protected !!