ಟಿ20 ವಿಶ್ವಕಪ್‌ ಪಂದ್ಯಗಳು ಯುಎಇಗೆ ಸ್ಥಳಾಂತರ – ಬಿಸಿಸಿಐ‌

Newsnap Team
1 Min Read

ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಈ ವರ್ಷದ ಟಿ20 ವಿಶ್ವಕಪ್‌ʼನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಗೆ ಸ್ಥಳಾಂತರಿಸಲು ನಿರ್ಧರಿಸಲಾಯಿತು.

ಭಾರತೀಯ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಜೇ ಶಾ, ‘ನಾವು ಟಿ೨೦ ವಿಶ್ವಕಪ್ ಅನ್ನು ಯುಎಇಗೆ ಸ್ಥಳಾಂತರಿಸುತ್ತಿದ್ದೇವೆ. ಇಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ತಿಳಿಸುತ್ತೇವೆ. ದಿನಾಂಕಗಳನ್ನು ಐಸಿಸಿ ನಿರ್ಧರಿಸುತ್ತದೆ’ ಎಂದಿದ್ದಾರೆ.

ಬಿಸಿಸಿಐ ಮಾಹಿತಿ ಆಧರಿಸಿ ಟಿ20 ಕ್ರಿಕೆಟ್‌ನ ದಿನಾಂಕಗಳನ್ನು ಐಸಿಸಿ ನಿರ್ಧರಿಸಲಿದೆ.

ಭಾರತ ಈ ವರ್ಷ ಟಿ೨೦ ಐ ವಿಶ್ವಕಪ್ ಗೆ ಆತಿಥ್ಯ ವಹಿಸಬೇಕಿತ್ತು. ಆದಾಗ್ಯೂ, ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯಿಂದ ದೇಶವು ಹಾನಿಗೊಳಗಾದ ನಂತರ ಭಾರತ ವಿಶ್ವಕಪ್ ಆಯೋಜಿಸುವ ಬಗ್ಗೆ ಪ್ರಶ್ನೆಗಳು ನಡುವೆಯೂ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಕೋವಿಡ್-19 ಹಲವಾರು ತಂಡಗಳ ಬಯೋ ಬಬಲ್ ನಿಯಮಗಳನ್ನ ಉಲ್ಲಂಘಿಸಿದ್ದರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 14ನೇ ಋತುವನ್ನು ಏಪ್ರಿಲ್ʼನಲ್ಲಿ ಮುಂದೂಡಲಾಯ್ತು.

ನಂತರ ಬಿಸಿಸಿಐ 2021ರ ಐಪಿಎಲ್ʼನ ೨ ನೇ ಹಂತವು ಸೆಪ್ಟೆಂಬರ್ 19ರಿಂದ ಅಕ್ಟೋಬರ್ 15 ರವರೆಗೆ ಯುಎಇಯಲ್ಲಿ ನಡೆಯಲಿದೆ ಎಂದು ಘೋಷಿಸಿತು.

Share This Article
Leave a comment