February 9, 2026

Newsnap Kannada

The World at your finger tips!

america,canada,new state

ಅಮೇರಿಕಾ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನಿವಾಸದ ಮೇಲೆ ಎಫ್‍ಬಿಐ ದಾಳಿ

Spread the love

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾರ್ ಎ ಲಾಗೊ ಎಸ್ಟೇಟ್ ನ ನಿವಾಸದ ಮೇಲೆ ಎಫ್‍ಬಿಐ ದಾಳಿ ಮಾಡಿದೆ.

2020ರಲ್ಲಿ ಚುನಾವಣೆಯ ಸೋಲಿನ ಬಳಿಕ ಟ್ರಂಪ್ ಶ್ವೇತಭವನವನ್ನು ತೊರೆದು, ತಮ್ಮ ಫ್ಲೊರಿಡಾ ನಿವಾಸಕ್ಕೆ ವರ್ಗೀಕೃತ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆಯೇ ಎಂಬುದನ್ನು ಅಮೆರಿಕದ ನ್ಯಾಯಾಂಗ ಇಲಾಖೆ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.ಇದನ್ನು ಓದಿ –ರಾಜ್ಯ ಕೃಷಿ ಸಚಿವರು ನಾಪತ್ತೆ : ಹುಡುಕಿಕೊಡುವಂತೆ ಕಾಂಗ್ರೆಸ್ ನಾಯಕರ ಮನವಿ

ಈ ಕುರಿತಂತೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿ, ಇದು ನಮ್ಮ ರಾಷ್ಟ್ರಕ್ಕೆ ಕರಾಳ ಸಮಯವಾಗಿದೆ. ಏಕೆಂದರೆ ಫ್ಲೊರಿಡಾದ ಪಾಮ್ ಬೀಚ್‍ನಲ್ಲಿರುವ ನನ್ನ ಮನೆ ಮೇಲೆ ದಾಳಿ ನಡೆದಿದೆ. ಎಫ್‍ಬಿಐ ಅಧಿಕಾರಿಗಳು ಮನೆಯನ್ನು ಆಕ್ರಮಿಸಿಕೊಂಡಿದ್ದಾರೆ. ಅಮೆರಿಕದ ಅಧ್ಯಕ್ಷ ಹುದ್ದೆಯಲ್ಲಿದ್ದವರಿಗೆ ಈ ಹಿಂದೆ ಇಂತಹ ಪರಿಸ್ಥಿತಿ ಎಂದೂ ಬಂದಿರಲಿಲ್ಲ ಎಂದಿದ್ದಾರೆ.

ಸರ್ಕಾರಿ ತನಿಖಾ ಏಜೆನ್ಸಿಗಳೊಂದಿಗೆ ಸಹಕರಿಸಿದ ನಂತರವೂ, ನನ್ನ ಮನೆಯ ಮೇಲೆ ಈ ಅಘೋಷಿತ ದಾಳಿ ಅಗತ್ಯವಿರಲಿಲ್ಲ. ಹಾಗೂ ಅದು ಸೂಕ್ತ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಎಫ್‍ಬಿಐ ಅಧಿಕಾರಿಗಳು ತಮ್ಮ ಸುರಕ್ಷಿತ ನೆಲೆಯ ಬಾಗಿಲನ್ನು ಒಡೆದು ತೆರೆದಿದ್ದಾರೆ. ಈ ರೀತಿಯ ದಾಳಿ ತೃತೀಯ ಜಗತ್ತಿನ ದೇಶಗಳಲ್ಲಿ ಮಾತ್ರ ನಡೆಯುತ್ತದೆ ಎಂದ ಅವರು, ತಮ್ಮ ಮನೆಗೆ ಎಫ್‍ಬಿಐ ಮುತ್ತಿಗೆ ಹಾಕಿದೆ ಎಂದು ಕಿಡಿಕಾರಿದರು.

error: Content is protected !!