ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾರ್ ಎ ಲಾಗೊ ಎಸ್ಟೇಟ್ ನ ನಿವಾಸದ ಮೇಲೆ ಎಫ್‍ಬಿಐ ದಾಳಿ ಮಾಡಿದೆ.
2020ರಲ್ಲಿ ಚುನಾವಣೆಯ ಸೋಲಿನ ಬಳಿಕ ಟ್ರಂಪ್ ಶ್ವೇತಭವನವನ್ನು ತೊರೆದು, ತಮ್ಮ ಫ್ಲೊರಿಡಾ ನಿವಾಸಕ್ಕೆ ವರ್ಗೀಕೃತ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆಯೇ ಎಂಬುದನ್ನು ಅಮೆರಿಕದ ನ್ಯಾಯಾಂಗ ಇಲಾಖೆ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.ಇದನ್ನು ಓದಿ –ರಾಜ್ಯ ಕೃಷಿ ಸಚಿವರು ನಾಪತ್ತೆ : ಹುಡುಕಿಕೊಡುವಂತೆ ಕಾಂಗ್ರೆಸ್ ನಾಯಕರ ಮನವಿ
ಈ ಕುರಿತಂತೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡಿ, ಇದು ನಮ್ಮ ರಾಷ್ಟ್ರಕ್ಕೆ ಕರಾಳ ಸಮಯವಾಗಿದೆ. ಏಕೆಂದರೆ ಫ್ಲೊರಿಡಾದ ಪಾಮ್ ಬೀಚ್‍ನಲ್ಲಿರುವ ನನ್ನ ಮನೆ ಮೇಲೆ ದಾಳಿ ನಡೆದಿದೆ. ಎಫ್‍ಬಿಐ ಅಧಿಕಾರಿಗಳು ಮನೆಯನ್ನು ಆಕ್ರಮಿಸಿಕೊಂಡಿದ್ದಾರೆ. ಅಮೆರಿಕದ ಅಧ್ಯಕ್ಷ ಹುದ್ದೆಯಲ್ಲಿದ್ದವರಿಗೆ ಈ ಹಿಂದೆ ಇಂತಹ ಪರಿಸ್ಥಿತಿ ಎಂದೂ ಬಂದಿರಲಿಲ್ಲ ಎಂದಿದ್ದಾರೆ.
ಸರ್ಕಾರಿ ತನಿಖಾ ಏಜೆನ್ಸಿಗಳೊಂದಿಗೆ ಸಹಕರಿಸಿದ ನಂತರವೂ, ನನ್ನ ಮನೆಯ ಮೇಲೆ ಈ ಅಘೋಷಿತ ದಾಳಿ ಅಗತ್ಯವಿರಲಿಲ್ಲ. ಹಾಗೂ ಅದು ಸೂಕ್ತ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಎಫ್‍ಬಿಐ ಅಧಿಕಾರಿಗಳು ತಮ್ಮ ಸುರಕ್ಷಿತ ನೆಲೆಯ ಬಾಗಿಲನ್ನು ಒಡೆದು ತೆರೆದಿದ್ದಾರೆ. ಈ ರೀತಿಯ ದಾಳಿ ತೃತೀಯ ಜಗತ್ತಿನ ದೇಶಗಳಲ್ಲಿ ಮಾತ್ರ ನಡೆಯುತ್ತದೆ ಎಂದ ಅವರು, ತಮ್ಮ ಮನೆಗೆ ಎಫ್‍ಬಿಐ ಮುತ್ತಿಗೆ ಹಾಕಿದೆ ಎಂದು ಕಿಡಿಕಾರಿದರು.
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
- ಓದಿನ ಮಹತ್ವ
- ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ