November 23, 2024

Newsnap Kannada

The World at your finger tips!

shivaramegowda

ಮಂಡ್ಯದ ಮಾಜಿ ಸಂಸದ ಎಲ್ ಆರ್ ಎಸ್ ಆಡಿಯೋ ಸ್ಪೋಟ : ಮುಂದಿನ ಚುನಾವಣೆಗೆ 30 ಕೋಟಿ ಖರ್ಚು

Spread the love

ಮಂಡ್ಯ ಲೋಕಸಭಾ ಉಪ ಚುನಾವಣೆಗೆ 30 ಕೋಟಿ ಖರ್ಚು ಮಾಡಿದ್ರಂತೆ. 2023 ವಿಧಾನಸಭಾ ಚುನಾವಣೆಗೆ ನಾಗಮಂಗಲ ಜೆಡಿಎಸ್ ಅಭ್ಯಥಿ೯ಯಾಗಿ ನಾನೇ ಕಣಕ್ಕೆ ಇಳಿಯುತ್ತೇನೆ. 30 ಕೋಟಿ ರು ಖಚು೯ ಮಾಡುವೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಈಗ ವೈರಲ್ ಆಗಿದೆ.


ಕೊಪ್ಪ ಹೋಬಳಿಯ ಪಕ್ಕಾ ಜೆಡಿಎಸ್ ಮಹಿಳೆ ಕಾರ್ಯಕರ್ತೆ ಜತೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ದಲ್ಲಿ MLC ಚುನಾವಣೆಗೆ 27 ಕೋಟಿ‌ ಖರ್ಚು ಮಾಡಿದ್ದೆ.6 ತಿಂಗಳಿಗೆ ಎಂಪಿ ಚುನಾವಣೆಗೆ 30 ಕೋಟಿ ಖರ್ಚು ಮಾಡಿದ್ದೆ ಎಂದು ಶಿವರಾಮೇಗೌಡರು ಹೇಳಿದ್ದಾರೆ.

30 ಕೋಟಿ ಖರ್ಚು ಮಾಡುವೆ !
ಮುಂದಿನ ನಾಗಮಂಗಲ ವಿಧಾನಸಭಾ ಚುನಾವಣೆಗೆ 30 ಕೋಟಿ ಖರ್ಚು ಮಾಡುತ್ತೇನೆ ಎಂದು ಪ್ರಕಟಿಸಿರುವ ಎಲ್ ಆರ್ ಎಸ್ ಆ ಮಹಿಳಾ ಕಾರ್ಯಕತ೯ರ ಜೊತೆ 37‌ ನಿಮಿಷ 54 ಸೆಂಕೆಡ್ ಮಾತನಾಡಿದ ಆಡಿಯೋ ವೈರಲ್ ಆಗಿದೆ.

ನನ್ನದು‌ 8 ಸ್ಕೂಲ್ ಇದೆ ತಿಂಗಳಿಗೆ 3 ಕೋಟಿ‌ ಸಂಬಳ ಕೊಡುತ್ತೇನೆ. ನಾಗಮಂಗಲ ವಿಧಾನಸಭ ಚುನಾವಣೆಗೆ 10 ತಿಂಗಳ ಸಂಬಳದಷ್ಟೆ ಹಣಬೇಕು. ಅಷ್ಟು ಹಣವನ್ನು ಖರ್ಚು ಮಾಡುತ್ತೇನೆ. ತಮಗೆ ಬೆಂಬಲ ನೀಡಬೇಕು ಎಂದು ಮಹಿಳಾ ಕಾರ್ಯಕರ್ತೆ ಜೊತೆ ಮಾತನಾಡಿದ್ದಾರೆ.

ಈ ಆಡಿಯೊ ಕಳೆದ ಮೂರು ದಿನಗಳ ಹಿಂದೆಯಷ್ಟೆ ನಾಗಮಂಗಲ ಕ್ಷೇತ್ರದ ಕೊಪ್ಪಗೆ ಭೇಟಿ ನೀಡಿದ್ದ ಎಲ್.ಆರ್.ಶಿವರಾಮೇಗೌಡ.
ಅಲ್ಲಿನ ಸಭೆಗೆ ಮಹಿಳಾ ಕಾರ್ಯಕರ್ತೆಗೆ ಆಹ್ವಾನಿಸಲು ಕರೆ ಮಾಡಿದ್ದಾರೆ ಎನ್ನಲಾಗಿರುವ ಆಡಿಯೋ.

ಸದ್ಯ ನಾಗಮಂಗಲ JDS ಟಿಕೆಟ್ ಮೇಲೆ ಕಣ್ಣಿಟ್ಟಿರುವ ಶಿವರಾಮೇಗೌಡ.ನಾಗಮಂಗಲದ JDS ಶಾಸಕರ ವಿರುದ್ಧವು ಆಡಿಯೋದಲ್ಲಿ ಚರ್ಚೆ ಮಾಡಿದ್ದಾರೆ. ನಾನು ಎರಡು ಸಲ MLA ಆಗಿದ್ದೇನೆ. ಆತ ಮಾಡಿದ ಕೆಲಸಕ್ಕಿಂತ ತಾತ ನಂತಹ ಕೆಲಸ ಮಾಡಬಹುದು ಎಂದಿದ್ದಾರೆ

ಸುರೇಶ್ ಗೌಡ ನನಗೆ ಕಳೆದ ಲೋಕಸಭೆ ಟಿಕೆಟ್ ತಪ್ಪಿಸಿದ. ನಿಖಿಲ್ ಕುಮಾರ್ ಸ್ವಾಮಿ ಚುನಾವಣೆಗೆ ನಿಲ್ಲಿಸಿ ಅವರ ಮನೆಗೆ ಕಂಟಕ ತಂದ್ರು ನನಗು ಕಂಟಕ ತಂದ್ರು.

ಮುಂದಿನ ಬಾರಿ ಚುನಾವಣೆಗೆ ನಾನು ನಿಂತುಕೊಳ್ಳುತ್ತೇನೆ.
ನನಗೆ ಬೆಂಬಲ‌ಕೊಡಿ ಎಂದು ಆಡಿಯೋದಲ್ಲಿ ಮನವಿ ಮಾಡಿದ್ದಾರೆ

ಐದು ಬಾರಿ ಕಾಂಗ್ರೆಸ್ ನಿಂದ ನಿಂತು ಸೋತಿದ್ದೇನೆ.ಎಲ್ಲವು ಕಡಿಮೆ ಅಂತರದಿಂದ ಸೋತಿದ್ದು ಎಂದಿದ್ದಾರೆ

ಜಿ.ಮಾದೇಗೌಡರಿಗೆ ನಾನೇ ಹೊಡೆದಿದ್ದೆ‌:

ಜಿ.ಮಾದೇಗೌಡರು ಆಗ ಸಂಸದರಾಗಿದ್ದರು.
ಮಾದೇಗೌಡ 20 ವರ್ಷದ ಹಿಂದೆಯೇ ಸಾಯಬೇಕಿತ್ತು, ಮೊನ್ನೆ ಸತ್ತ. ಅದರಿಂದಲೇ ಜಿ.ಮಾದೇಗೌಡರ ವಿರೋಧದಿಂದ ಸೋತೆ. ದಿವಂಗತ ಜಿ.ಮಾದೇಗೌಡ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!