ಲೇಖಕಿ ಹಾಗೂ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಅವರಿಗೆ ಕೊಲೆ ಬೆದರಿಕೆ ಪತ್ರ ಬಂದಿದೆ. ಕೊಲೆ ಬೆದರಿಕೆ ಹಿಟ್ ಲಿಸ್ಟ್‌ನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್.ಡಿ.ಕುಮಾರಸ್ವಾಮಿ ಹೆಸರೂ ಸೇರಿದೆ.
ಬೆಂಗಳೂರಿನ ಸಂಜಯನಗರದಲ್ಲಿರುವ ಲಲಿತಾ ನಾಯಕ್ ಅವರ ನಿವಾಸದ ವಿಳಾಸಕ್ಕೆ ಕಿಡಿಗೇಡಿಗಳು ಪತ್ರ ಬರೆದಿದ್ದಾರೆ. ಕೊಲೆ ಬೆದರಿಕೆ ಪತ್ರದಲ್ಲಿ ಮಾಜಿ ಸಿಎಂಗಳ ಜೊತೆಗೆ ಕೆಲವರು ಸಾಹಿತಿಗಳ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಂಜಯನಗರ ಪೊಲೀಸರಿಗೆ ಲಲಿತಾ ನಾಯಕ್ ಅವರು ದೂರು ನೀಡಿದ್ದಾರೆ.
ಪತ್ರದಲ್ಲಿ ಇರುವುದು ಏನು ?
ಪಿಎಫ್‌ಐ , ಸಿಎಫ್‌ಐ, ಎಸ್‌ಡಿಪಿಐ ಪರ ಮಾತಾಡಬಾರದು. ಅವರ ಸಭೆ-ಸಮಾರಂಭಗಳಲ್ಲಿ ಭಾಗಿವಹಿಸಬಾರದು. ಪಠ್ಯದಲ್ಲಿ ದೇಶಪ್ರೇಮ, ದೇಶ ಭಕ್ತಿ, ದೇಶ ರಕ್ಷಣೆ ಪಾಠ ಸೇರಿಸಿದ್ದಕ್ಕೆ ನಿಮಗೆಲ್ಲಾ ಭಯ. ನೀವು ನಿಜವಾದ ದೇಶದ್ರೋಹಿಗಳು. ನಮ್ಮ ದೇಶವನ್ನು ನಾಶ ಮಾಡಲು ಹೊಂಚು ಹಾಕುತ್ತಿದ್ದೀರಾ? ಭಯೋತ್ಪಾದಕರು, ನಕ್ಸಲೈಟ್‌ಗಳು, ಮಾವೋವಾದಿಗಳು, ದೇಶದ್ರೋಹಿ ಮುಸ್ಲಿಂಮರಿಗೆ ಬೆಂಬಲವಾಗಿ ನಿಂತಿದ್ದೀರಿ. ಪಿಎಫ್‌ಐ ಕಾರ್ಯಕ್ರಮದಲ್ಲಿ ನಮ್ಮ ವೀರ ಸೈನಿಕರ ಬಗ್ಗೆ ಅಗೌರವವಾಗಿ ಮಾತನಾಡಿದ್ದೀರಿ? ನೀವು ಕ್ಷಮೆ ಕೇಳಬೇಕು. ನೀವು ಎಚ್ಚರಿಕೆಯಿಂದ ಇರೀ ಎಂದು ಪತ್ರದಲ್ಲಿ ಬರೆಯಲಾಗಿದೆ.
ಜೈ ಹಿಂದೂರಾಷ್ಟ್ರ ಎಂದು ಹೆಸರು
ಪತ್ರದ ಕೊನೆಯಲ್ಲಿ ʼಜೈಹಿಂದೂ ರಾಷ್ಟ್ರ, ಭಾರತ ಮಾತೆಗೆ ಜೈ, ಜೈ ಕರ್ನಾಟಕ ಮಾತೆ, ಸಹಿಷ್ಣು, ಹಿಂದೂ ಎಂದು ಬರೆದಿದೆ. ಅಲ್ಲದೇ ರಾಜಾಜಿ ನಗರದ ಸೀಲ್ ಇದೆ. ಶ್ರೀರಾಮ್ ಅಂತಾ ಪತ್ರದಲ್ಲಿ ಬರೆದಿದೆ.
ಶನಿವಾರ ಬೆಳಗ್ಗೆ 10 ಗಂಟೆಗೆ ಪತ್ರ ಬಂದಿದೆ. ಸಾಹಿತಿಗಳು, ರಾಜಕೀಯದವರನ್ನು ತುಂಬಾ ಕೆಟ್ಟ ಪದಗಳಿಂದ ಬೈದಿದ್ದಾರೆ. ನಿಮ್ಮೆಲ್ಲರನ್ನೂ ದೇಶಬಿಟ್ಟು ಕಳಿಸಬೇಕು, ನಿಮ್ಮನ್ನೆಲ್ಲಾ ಗುಂಡಿಟ್ಟು ಕೊಲೆ ಮಾಡಬೇಕು. ಪಿಎಫ್‌ಐ, ಎಸ್‌ಡಿಪಿಐ ಸಂಘಟನೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಬಾರದು. ಒಂದು ವೇಳೆ ಮಾತಾಡಿದೆ ಕೊಲೆಯಾಗುವಿರಿ ಎಚ್ಚರಿಕೆ ಅಂತಾ ಬರೆದಿದ್ದಾರೆ.
ಅಂಗಡಿ-ಮುಂಗಟ್ಟುಗಳ ಮೇಲೆ ಕನ್ನಡ ನಾಮಫಲಕ ಕಡ್ಡಾಯ – ತಪ್ಪಿದರೆ ಅಂಗಡಿ ಲೈಸನ್ಸ್ ರದ್ದು
10 ಜನರ ಹೆಸರು ಸೇರಿಸಿ, 61 ಜನ ಅಂತಾ ಹೇಳಿದ್ದಾರೆ. 61 ಜನರಲ್ಲಿ ಯಾರನ್ನು ಬೇಕಾದರೂ ಕೊಲೆ ಮಾಡಬಹುದು. ಇನ್ನೂ ಯಾರ್ಯಾರಿಗೆ ಬಂದಿದೆ ಗೊತ್ತಿಲ್ಲ. ಈ ಬಗ್ಗೆ ಸಂಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಎಂದು ಬಿ.ಟಿ.ಲಲಿತಾ ನಾಯಕ್ ಅವರು ತಿಳಿಸಿದ್ದಾರೆ.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ