ಮಾಜಿ ಸಚಿವ ಆನಂದ್ ಸಿಂಗ್ ಕೂಡ ಕಾಂಗ್ರೆಸ್ ಗೆ ಸೇರ್ಪಡೆ ಸಿದ್ದತೆ ?

Team Newsnap
1 Min Read

ಬೆಂಗಳೂರು : ಮಾಜಿ ಸಚಿವ ಆನಂದ್​ ಸಿಂಗ್​ಗೆ ಡಿಸಿಎಂ ಡಿ.ಕೆ ಶಿವಕುಮಾರ್​ ಕಾಂಗ್ರೆಸ್​ ಪಕ್ಷಕ್ಕೆ ಸೇರುವ ಸಾಧ್ಯತೆ ಹೆಚ್ಚಾಗಿದೆ

ಸಾರ್ವತ್ರಿಕ ಚುನಾವಣೆಯ ಸನೀಹದಲ್ಲೇ ಇರುವಾಗಲೇ ಬಿಜೆಪಿಯಿಂದ ಅಂತರ ಕಾಯ್ದುಕೊಂಡ ಆನಂದ್ ಸಿಂಗ್ ಡಿಸಿಎಂ ಡಿ.ಕೆ ಶಿವಕುಮಾರ್​ ಆಹ್ವಾನ ನಂತರ ಪಕ್ಷ ಸೇರ್ಪಡೆ ಬಗ್ಗೆ ಯಾವುದೇ ಭರವಸೆ ನೀಡದೆ, ಸಮಯಾವಕಾಶ ಕೇಳಿದ್ದಾರೆ ಎನ್ನಲಾಗಿದೆ.

ಬಿಜೆಪಿ ತೊರೆದು, ಮಾತೃಪಕ್ಷಕ್ಕೆ ಮರಳಲು ಸಿಂಗ್ ತಯಾರಿ ನಡೆಸಿರುವುದು ಎಂಬ ಕುತೂಹಲ ಮೂಡಿದೆ.

ಲೋಕಸಭೆ ಚುನಾವಣೆ ಹತ್ತಿರ ಆಗುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ‘ಆಪರೇಷನ್ ಹಸ್ತ’ದ ಬಗ್ಗೆ ಜೋರಾಗಿ ಕೇಳಿಬರುತ್ತಿದೆ. ಈ ಹಿಂದೆ ಕಾಂಗ್ರೆಸ್​ ತೊರೆದು ಹೋಗಿದ್ದ ಎಸ್​ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರು ಕಾಂಗ್ರೆಸ್​ಗೆ ಮರಳುತ್ತಾರೆ ಎನ್ನಲಾಗಿದೆ.ಕೋಲಾರದಲ್ಲಿ ದುರಂತ ಹೆತ್ತ ಮಗಳನ್ನು ಕೊಲೆ ಮಾಡಿದ ತಂದೆ – ಇದೊಂದು ಮರ್ಯಾದಾ ಹತ್ಯೆ

ಇದರ ಜೊತೆ ಬಿಜೆಪಿ ರೇಣುಕಾಚಾರ್ಯಗೂ ಕಾಂಗ್ರೆಸ್ ಗಾಳ ಹಾಕಿದೆ. ಇದೀಗ ಮಾಜಿ ಸಚಿವ ಆನಂದ್ ಸಿಂಗ್ ಹೆಸರು ಮುಂಚೂಣಿಯಲ್ಲಿದೆ.

Share This Article
Leave a comment