ಕೋಲಾರದಲ್ಲಿ ದುರಂತ ಹೆತ್ತ ಮಗಳನ್ನು ಕೊಲೆ ಮಾಡಿದ ತಂದೆ – ಇದೊಂದು ಮರ್ಯಾದಾ ಹತ್ಯೆ

Team Newsnap
1 Min Read

ಕೋಲಾರ : ಅನ್ಯ ಜಾತಿ ಯುವಕನನ್ನು ಪ್ರೀತಿಸಿದ ತಪ್ಪಿಗೆ ತಂದೆಯೇ ಹೆತ್ತ ಮಗಳನ್ನು ಕೊಲೆ ಮಾಡಿರುವ ಪೈಶಾಚಿಕ ಕೃತ್ಯ ಕೋಲಾರದ ತೊಟ್ಲಿ ಗ್ರಾಮದಲ್ಲಿ ನಡೆದಿದೆ.

ತಂದೆ ವೆಂಕಟೇಶ್ ತನ್ನ 19 ವರ್ಷದ ಮಗಳನ್ನು ಬರ್ಬರವಾಗಿ ಕೊಲೆ ಮಾಡಿ, ಸಂಬಂಧಿಕರ ಸಹಾಯದಿಂದ ಅಂತ್ಯ ಸಂಸ್ಕಾರವನ್ನೂ ಕೂಡ ಮಾಡಿದ್ದಾರೆ.

ಮಗಳು ರಮ್ಯಾ ಅನ್ಯಜಾತಿಯ ಯುವಕನನ್ನು ಪ್ರೀತಿಸಿದ ನಂತರ ಮಗಳಿಗೆ ಬುದ್ಧಿ ಹೇಳಿದ್ದಾರೆ.

ರಮ್ಯಾ ಮಾತು ಕೇಳದಿದ್ದರಿಂದ ಮಗಳನ್ನು ಕೊಲೆ ಮಾಡಿ ಹೆತ್ತವರು ಅಂತ್ಯ ಸಂಸ್ಕಾರ ಮಾಡಿದ್ದಾರೆ.ಚಂದ್ರಯಾನ ಮತ್ತು ಭಾರತ

ಬಳಿಕ ಊರಿನಲ್ಲಿ ಕೊಲೆ ಮಾಡಿರುವ ಕುರಿತು ಗುಸುಗುಸು ಶುರುವಾದ ಹಿನ್ನಲೆ ಪೊಲೀಸರು ವೆಂಕಟೇಶ್​ನನ್ನು ವಿಚಾರಣೆ ನಡೆಸಿದಾಗ ಪ್ರಕರಣ ಬಯಲಾಗಿದೆ. ಬಳಿಕ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

Share This Article
Leave a comment