December 23, 2024

Newsnap Kannada

The World at your finger tips!

yuvraj singh

ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಬಂಧನ‌

Spread the love

ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರನ್ನು
ಜಾತಿ ನಿಂದನೆ ಆರೋಪದಡಿಯಲ್ಲಿ
ಹರಿಯಾಣದ ಹಿಸ್ಸಾರ್ ಹಂಸಿ ನಗರದ ಪೊಲೀಸರು ಬಂಧಿಸಿದ್ದಾರೆ.

ಕ್ರಿಕೆಟ್ಟಿಗ ರೋಹಿತ್‌ ಶರ್ಮಾ ಜೊತೆಗೆ ಲೈವ್‌ ಚಾಟ್‌ನಲ್ಲಿ ಭಾಗವಹಿಸಿದ್ದ ಯುವರಾಜ್‌, ತಮ್ಮ ಸಂಭಾಷಣೆ ವೇಳೆ ಯಜುವೇಂದ್ರ ಚಹಲ್‌ ಮತ್ತು ಕುಲ್ ದೀಪ್ ಯಾದವ್ ಬಗ್ಗೆ ಜಾತಿ ಸೂಚಕ ಪದ ಬಳಸಿದ್ದರು.

2020 ರಲ್ಲಿ ರೋಹಿತ್ ಶರ್ಮಾ ಜೊತೆಗಿನ ಸಂವಾದದಲ್ಲಿ ಪರಿಶಿಷ್ಟ ಜಾತಿ ಬಗ್ಗೆ ಯುವಿ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಸಂಬಂಧ ಹಂಸಿ ನಗರ ಪೊಲೀಸ್ ಠಾಣೆಯಲ್ಲಿ ಯುವರಾಜ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ಯುವರಾಜ್ ಸಿಂಗ್ ಅವರನ್ನು ಬಂಧಿಸಿರುವ ಹಂಸಿ ಠಾಣಾ ಪೊಲೀಸರು ಘಟನೆಯ ಬಗ್ಗೆ ವಿಚಾರಣೆ ನಡೆಸಿದರು.

ಆ ಬಳಿಕ ಹೈಕೋರ್ಟ್ ಆದೇಶದ ಮೇರೆಗೆ ಯುವರಾಜ್ ಸಿಂಗ್ ಅವರನ್ನು ಔಪಚಾರಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೆಲವು ದಿನಗಳ ಹಿಂದೆ ಯುವರಾಜ್ ಸಿಂಗ್ ಹೈಕೋರ್ಟ್​​ಗೆ ನಿರೀಕ್ಷಣಾ ಜಾಮೀನಿಗೆ ಮನವಿ ಸಲ್ಲಿಸಿದ್ದರು. ಈ ಕಾರಣದಿಂದಾಗಿ, ಹಂಸಿ ಪೊಲೀಸರು ಆತನನ್ನು ಔಪಚಾರಿಕವಾಗಿ ಬಂಧಿಸಿ 3 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

yv

ಆ ಬಳಿಕ ನಿರೀಕ್ಷಣಾ ಜಾಮೀನು ಪತ್ರಗಳ ಆಧಾರದ ಮೇಲೆ ಬಿಡುಗಡೆ ಮಾಡಿದ್ದಾರೆ.

ಘಟನೆ ಹಿನ್ನೆಲೆ:
2020ರ ಜೂನ್​ನಲ್ಲಿ ರೋಹಿತ್‌ ಶರ್ಮಾ ಜೊತೆಗೆ ಲೈವ್‌ ಚಾಟ್‌ನಲ್ಲಿ ಭಾಗವಹಿಸಿದ್ದ ಯುವರಾಜ್‌, ತಮ್ಮ ಸಂಭಾಷಣೆ ವೇಳೆ ಯಜುವೇಂದ್ರ ಚಹಲ್‌ ಮತ್ತು ಕುಲ್ದೀಪ್‌ ಯಾದವ್ ಬಗ್ಗೆ ಜಾತಿ ಸೂಚಕ ಪದ ಬಳಸಿದ್ದರು.

ಚಹಲ್ ಮಾಡೋ ಟಿಕ್-ಟಾಕ್ ವೀಡಿಯೊ ಬಗ್ಗೆ ಪ್ರಸ್ತಾಪಿಸಿದ್ದ ಯುವಿ , ಈ ಯುಜಿ ಹಾಗೂ ಕುಲ್ದೀಪ್​ಗೆ ಬೇರೆ ಕೆಲಸ ಇಲ್ಲ ಎಂದಿದ್ದರು. ಇದೇ ವೇಳೆ ಜಾತಿಯನ್ನು ಪ್ರಸ್ತಾಪಿಸಿ ಹೀಯಾಳಿಸಿದ್ದರು.

ಈ ವಿಚಾರ ವೈರಲ್ ಆಗುತ್ತಿದ್ದಂತೆ ಯುವರಾಜ್ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದರು.

ಆದರೆ ಈ ಬಗ್ಗೆ ದಲಿತ ಮಾನವ ಹಕ್ಕುಗಳ ವಕೀಲ ಕನ್ವೀನರ್ ರಜತ್ ಕಲ್ಸನ್ ಅವರು ದೂರು ನೀಡಿದ್ದರು. ಅದರಂತೆ ಹರ್ಯಾಣದ ಹಿಸಾರ್‌ನ ಹಂಸಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಯುವರಾಜ್ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್‌ 153, 153 ಎ, 295, 505 ಮತ್ತು ಎಸ್‌ಸಿ / ಎಸ್‌ಟಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್​ಐಆರ್​ ದಾಖಲಾಗಿತ್ತು.

Copyright © All rights reserved Newsnap | Newsever by AF themes.
error: Content is protected !!