ಮಾಜಿ ಸಿಎಂ ದಿ. ಬಂಗಾರಪ್ಪನವರ ಮೊಮ್ಮಗಳು ಲಾವಣ್ಯ – ವಿಕ್ರಮಾದಿತ್ಯ ನಿಶ್ಚಿತಾರ್ಥ

Team Newsnap
1 Min Read

ಮಾಜಿ ಮುಖ್ಯ ಮಂತ್ರಿ ದಿ. ಎಸ್ ಬಂಗಾರಪ್ಪ ನವರ ಮೊಮ್ಮಗಳ ನಿಶ್ಚಿತಾರ್ಥ ನೆರವೇರಿತು. ‌

ಮಾಜಿ ಸಚಿವ, ಸೊರಬ ಕ್ಷೇತ್ರದ ಶಾಸಕರಾದ ಕುಮಾರ ಬಂಗಾರಪ್ಪನವರು ತಮ್ಮ ಮಗಳ ನಿಶ್ಚಿತಾರ್ಥ ಸಮಾರಂಭದ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

bangarappa1

ಲಾವಣ್ಯ ಅವರು ಇತ್ತೀಚಿಗಷ್ಟೇ ವಿಕ್ರಮಾದಿತ್ಯರ ಜೊತೆಗೆ ಉಂಗುರ ಬದಲಾಯಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ನಡೆದ ಅದ್ದೂರಿ ನಿಶ್ಚಿತಾರ್ಥದ ಕೆಲ ಸಂತೋಷದ ಕ್ಷಣದ ಪೋಟೋಗಳನ್ನು ಕುಮಾರ ಬಂಗಾರಪ್ಪ ಅವರು ಪೋಸ್ಟ್ ಮಾಡಿದ್ದಾರೆ.

bangarappa2


ಮುದ್ದಿನ ಮಗಳ ನಿಶ್ವಿತಾರ್ಥದ ಪೋಟೋಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಿಮ್ಮ ಆಶೀರ್ವಾದ ನಮ್ಮ ಕುಟುಂಬದ ಮೇಲಿರುವಂತೆ ನವ ಜೋಡಿಗಳ ಮೇಲೆಯೂ ಇರಲಿ ಎಂದು ಬರೆದುಕೊಂಡಿದ್ದಾರೆ.

ಕುಮಾರ ಬಂಗಾರಪ್ಪ ಪೋಟೋವನ್ನು ಪೋಸ್ಟ್ ಮಾಡುತ್ತಿದ್ದಂತೆಯೇ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ, ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರ

Share This Article
Leave a comment