August 9, 2022

Newsnap Kannada

The World at your finger tips!

sm krishna

ಮೈಸೂರು ದಸರಾ ಉದ್ಘಾಟನೆಗೆ ಮಾಜಿ‌ ಸಿ ಎಂ ಕೃಷ್ಣಗೆ , ಸರ್ಕಾರದ ಅಧೀಕೃತ ಆಹ್ವಾನ

Spread the love

ದಸರಾ ಉದ್ಘಾಟನೆಗಾಗಿ ಬಿಜೆಪಿ ನಾಯಕ, ಮಾಜಿ ಸಿಎಂ ಎಸ್​​​ ಎಂ ಕೃಷ್ಣ ಗೆ ಅಧಿಕೃತವಾಗಿ ಶನಿವಾರ ಸಿಎಂ ಬೊಮ್ಮಾಯಿ ಆಹ್ವಾನ‌ ನೀಡಿದರು.

ಬೆಂಗಳೂರಿನ‌ ಸದಾಶಿವನಗರದಲ್ಲಿ ರುವ .ಎಸ್.ಎಂ.ಕೃಷ್ಣರ ನಿವಾಸಕ್ಕೆ ಆಗಮಿಸಿ ಆಹ್ವಾನ ನೀಡಿ ಬಸವರಾಜ್ ಬೊಮ್ಮಾಯಿಗೆ ಸಚಿವರಾದ ಆರ್.ಅಶೋಕ್, ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ಸಾಥ್ ನೀಡಿದರು.

krishna mysore

ಈ ತುಂಬು ಪ್ರೀತಿ ಯಿಂದ ಆಹ್ವಾನ‌ ಸ್ವೀಕರಿಸಿದ.ಎಸ್.ಎಂ.ಕೃಷ್ಣ ಮಾತನಾಡಿ, ಸರ್ಕಾರ ನನ್ನ ಯೋಗ್ಯತೆಗೂ ಮೀರಿ ಈ ಅವಕಾಶ ಕೊಟ್ಟಿದೆ. ಮೈಸೂರು ಬಹಳ ಅಭಿವೃದ್ಧಿ ಪಥದಲ್ಲಿ ಇರುವಂತಹ ನಗರ. ಇಂದು ಈ ಸುಯೋಗ ದೊರಕಿಸಿಕೊಟ್ಟಿದ್ದಕ್ಕೆ ಸಿಎಂ, ಸಚಿವರಿಗೆ ಹಾಗೂ ಸರ್ಕಾರಕ್ಕೆ ಅಭೂತಪೂರ್ವ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ನಿಮ್ಮ ಆಹ್ವಾನವನ್ನು ಅತ್ಯಂತ ನಮ್ರನಾಗಿ ಸ್ವೀಕರಿಸುತ್ತಿದ್ದೇನೆ ಎಂದಿದ್ದಾರೆ.

error: Content is protected !!