ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಸಚಿವ ಸಿ.ಪಿ.ಯೋಗೇಶ್ವರ್ ನಡುವಿನ ವಾಕ್ ಯುದ್ಧ ಉಲ್ಬಣಗೊಂಡಿದೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಯೋಗೇಶ್ವರ್,
ಇಸ್ಪೀಟು ದುಡ್ಡಿನಲ್ಲಿ ಸಚಿವನಾಗಿದ್ದಾನೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದರು.
ಈ ಕುಮಾರಸ್ವಾಮಿ ಒಂದು ತರಹ ಜೋಕರ್ ಥರ. ಯಾವ ಪಾರ್ಟಿಗಾದರೂ ಅಡ್ಜೆಸ್ಟ್ ಆಗುತ್ತಾರೆ. ವಿಧಾನ ಪರಿಷತ್ನಲ್ಲಿ ನಮ್ಮೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಸವರಾಜ್ ಹೊರಟ್ಟಿ ಅವರನ್ನು ಸ್ಪೀಕರ್ ಮಾಡಿದರು. ಮೈಸೂರಲ್ಲಿ ಕಾಂಗ್ರೆಸ್ನೊಂದಿಗೆ ಸ್ನೇಹ ಬೆಳೆಸಿದ್ದಾರೆ. ಅವರು ಯಾವ ಪಾರ್ಟಿಯಾದರೂ ಅಡ್ಜಸ್ಟ್ ಆಗುತ್ತಾರೆ ಎಂದು ಕಿಡಿಕಾರಿದ್ದಾರೆ.
ಕುಮಾರಸ್ವಾಮಿ ಅವಕಾಶವಾದಿ:
ಕುಮಾರಸ್ವಾಮಿ ಅವಕಾಶವಾದಿ ರಾಜಕಾರಣಿ, ಅವರಿಗೆ ಯಾವುದೇ ನೈತಿಕತೆ, ಸಿದ್ಧಾಂತ ಯಾವುದೂ ಇಲ್ಲ. ಸಿಎಂ ಆಗಿದ್ದಾಗ ಉಡಾಫೆಯಾಗಿ ವರ್ತಿಸಿದ್ದರು. ಅಧಿಕಾರದಲ್ಲಿದ್ದಾಗ ಜನರ ಬಳಿ ಹೋಗಲೇ ಇಲ್ಲ. ಈಗ ಅವರಿಗೆ ಆತಂಕ ಕಾಡುತ್ತಿದೆ ಎಂದರು.
ಈಗ ದಿನ ಬೆಳಗೆದ್ದು ಕುಮಾರಸ್ವಾಮಿ ಜನರ ಕಡೆ ಹೋಗುತ್ತಿದ್ದಾರೆ. ಜೆಡಿಎಸ್ನೊಂದಿಗೆ ಹೊಂದಾಣಿಕೆ ಮಾಡಿಕೊಂಡರೆ ನಮ್ಮ ಪಕ್ಷಕ್ಕೆ ತೊಂದರೆ ಆದೀತು. ಆದ್ದರಿಂದ ಅವರ ಅವಕಾಶವಾದಿ ಮನಸ್ಥಿತಿಯ ಬಗ್ಗೆ ನಮ್ಮ ಪಕ್ಷದ ವರಿಷ್ಠರಿಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದರು.
ನಾನು ರಾಜಕಾರಣದಲ್ಲಿ ಬಚ್ಚಾ ನಿಜ:
ಹೆಚ್ಡಿಕೆ ಹೇಳಿದಂತೆ ರಾಜಕೀಯದಲ್ಲಿ ನಾನು ಬಚ್ಚಾ. ರಾಮನಗರಕ್ಕೆ ಮೊದಲ ಬಾರಿಗೆ ಬಂದಾಗ ಕುಮಾರ್ ಸ್ವಾಮಿ ಕೂಡ ಬಚ್ಚಾ. ಇಸ್ಪೀಟ್ ಆಟದ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಕುಮಾರಸ್ವಾಮಿ ಅವರಿಗೆ ಸರಿಯಾಗಿ ಗೊತ್ತು. ಸಿಂಗಾಪುರದಲ್ಲಿ ಕುಮಾರಸ್ವಾಮಿ ಇಸ್ಪೀಟ್ ಆಡಿರೋದು ಗೊತ್ತಿಲ್ವಾ? ಇದರ ಫೋಟೋಗಳು ನನ್ನ ಬಳಿ ಇದೆ. ಬೇಕಾದರೆ ಬಿಡುಗಡೆ ಮಾಡುತ್ತೇನೆ ಎಂದರು.
- ನ.20ರಂದು ಕರ್ನಾಟಕದಲ್ಲಿ ಬಾರ್ ಬಂದ್
- ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
- ಟಿಪ್ಪು ಸುಲ್ತಾನ್ನ ಖಡ್ಗ 3.4 ಕೋಟಿಗೆ ಹರಾಜು
- ಮುಖ್ಯಮಂತ್ರಿ ವಿರುದ್ಧ ಅಪಪ್ರಚಾರ ಆರೋಪ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್
- ₹5.50 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ, ಇಬ್ಬರು ಬಂಧನ
More Stories
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ
ಮೈಸೂರಿನ ಸರ್ಕಾರಿ ಶಾಲೆಯ ಜಾಗ ವಕ್ಫ್ ಆಸ್ತಿಯಾಯ್ತು – ಸಿಎಂಗೆ ಪ್ರತಾಪ್ ಸಿಂಹ ಟಾಂಗ್