ಬೆಳದಿಂಗಳ ಬಾಲೆಯಿಂದ 35 ಲಕ್ಷ ರು. ಉಂಡೆನಾಮ ಹಾಕಿಸಿಕೊಂಡ ಮ್ಯಾನೇಜರ್

Team Newsnap
1 Min Read
Foreign women conned 35lakhs from manager in Facebook #thenewsnap #con #money #facebook #shockingnews #bengaluru #latestnews

ಫೇಸ್​ಬುಕ್ ಮೂಲಕ ಪರಿಚಯವಾದ ವಿದೇಶಿ ಸುಂದರ ಬಾಲೆಯೊಬ್ಬಳು ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ 35 ಲಕ್ಷ ರು ಉಂಡೆನಾಮ ಹಾಕಿದ್ದಾಳೆ

ಇದನ್ನು ಓದಿ –ಅಗ್ನಿಪಥ್ ಸೇನಾ ನೇಮಕಾತಿ ಹೊಸ ಯೋಜನೆ ಜಾರಿಗೆ ವಿರೋಧ ಬೇಡ – ಎಸ್.ಎಂ. ಕೃಷ್ಣ

ಬೆಂಗಳೂರಿನ ನಿವಾಸಿ ವಿನ್ಸೆಂಟ್ (48) ಎಂಬುವರು ಬಜಾಜ್​ ಫೈನಾನ್ಸ್​ ಯೂನಿಟ್​ನಲ್ಲಿ ಮ್ಯಾನೇಜರ್​ ಆಗಿ ಕೆಲಸ ಮಾಡುತ್ತಿರುವ ಅವರಿಗೆ ಫೇಸ್​ಬುಕ್​ನಲ್ಲಿ ಪರಿಚಯವಾದ ನ್ಯಾನ್ಸಿ ವಿಲಿಯಂ ಎಂಬ ವಿದೇಶಿ ಮಹಿಳೆ 35 ಲಕ್ಷ ಪಡೆದು ವಂಚನೆ ಮಾಡಿದ್ದಾಳೆ.

ನ್ಯಾನ್ಸಿ ವಿಲಿಯಂ ಫೇಸ್​ಬುಕ್​ನಲ್ಲಿ ಮೊದಲಿಗೆ ವಿನ್ಸೆಂಟ್​ಗೆ ಫ್ರೆಂಡ್​ ರಿಕ್ವೆಸ್ಟ್ ಕಳಿಸಿ, ತಾನು ಇಂಗ್ಲೆಂಡಿನವಳು ಎಂದು ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸುತ್ತಾಳೆ. ಈ ಸ್ನೇಹ ಫೋನ್​ ನಂಬರ್​ ಎಕ್ಸ್​ಚೇಂಜ್​ ಮಾಡಿಕೊಳ್ಳುವಲ್ಲಿವರೆಗೂ ಹೋಗುತ್ತೆ. ನಂತರ ವಾಟ್ಸ್​ಆ್ಯಪ್​ನಲ್ಲಿ ಚಾಟಿಂಗ್​, ಕಾಲಿಂಗ್​ ಎಲ್ಲಾ ನಡೆಯುತ್ತೆ. ಹೀಗೆ ಬೆಳೆದ ಸ್ನೇಹ ಮತ್ತಷ್ಟು ಗಾಢವಾಗಿ ಒಟ್ಟಿಗೆ ಸೇರಿ ಬ್ಯುಸಿನೆಸ್​ ಆರಂಭಿಸುವವರೆಗೂ ಹೋಗುತ್ತೆ.

ಇಂಗ್ಲೆಂಡ್​ನಿಂದ ಭಾರತಕ್ಕೆ ಬಂದು ಜ್ಯುವೆಲ್ಲರಿ ಬ್ಯಸಿನೆಸ್​ ಮಾಡೋದಾಗಿ ನಂಬಿಸಿ, ಅದಕ್ಕಾಗಿ ಹಣ ಹೂಡಿಕೆ ಮಾಡುವಂತೆ ಕೇಳುತ್ತಾಳೆ.

ವಿದೇಶದಲ್ಲಿ ಜ್ಯುವೆಲರಿ ಡೀಲರ್​ ಆಗಿರುವ ನ್ಯಾನ್ಸಿ ಮಾತಿಗೆ ಮರುಳಾದ ವಿನ್ಸೆಂಟ್​ ಹಂತ ಹಂತವಾಗಿ 35 ಲಕ್ಷ ಕೊಡುತ್ತಾನೆ. ಆದರೆ ನ್ಯಾನ್ಸಿ ಮಾತ್ರ ಬೆಂಗಳೂರಿಗೆ ಹೋಗಲಿ, ಭಾರತಕ್ಕೂ ಬರೋದಿಲ್ಲ. ಕಡೆಗೆ ಫೇಸ್​ ಬುಕ್​ ಖಾತೆ ಡಿಲೀಟ್​ ಮಾಡಿ ನಾಪತ್ತೆಯಾಗ್ತಾಳೆ.

ಮಹಿಳೆಯ ಬಣ್ಣದ ಮಾತಿಗೆ ಮರುಳಾಗಿದ್ದ ವಿನ್ಸೆಂಟ್​ ಈಗ ವಂಚಕಿಯ ವಿರುದ್ಧ ಪೂರ್ವ ವಿಭಾಗದ ಸೆನ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೂರ್ವ ವಿಭಾಗದ ಸೆನ್​ ಪೊಲೀಸರು ಆರೋಪಿ ನ್ಯಾನ್ಸಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Share This Article
Leave a comment