ಅಗ್ನಿಪಥ್ ಸೇನಾ ನೇಮಕಾತಿ ಹೊಸ ಯೋಜನೆ ಜಾರಿಗೆ ವಿರೋಧ ಬೇಡ – ಎಸ್.ಎಂ. ಕೃಷ್ಣ

Team Newsnap
1 Min Read

ದೇಶದ ಯುವ ಜನರಿಗೆ ಉದ್ಯೋಗ ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರಸರ್ಕಾರ ನೂತನವಾಗಿ ಜಾರಿಗೊಳಿಸಿರುವ ಅಗ್ನಿಪಥ್ ಯೋಜನೆಗೆ ವಿರೋಧ ವ್ಯಕ್ತಪಡಿಸುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸ್ಪಷ್ಟ ಪಡಿಸಿದರು

ಇದನ್ನು ಓದಿ –ರಾಜ್ಯಸಭೆ ಚುನಾವಣೆ ಅಡ್ಡ ಮತದಾನ: ಇಬ್ಬರು ಶಾಸಕರ ಉಚ್ಟಾಟನೆ – ಅನರ್ಹತೆಯ ಶಿಫಾರಸ್ಸಿಗೂ ನಿರ್ಧಾರ

ದ್ದೂರಿನ ಸೋಮನಹಳ್ಳಿಯಲ್ಲಿ ದಿವಂಗತ ಎಸ್.ಎಂ.ಶಂಕರ್ ಮೆಮೋರಿಯಲ್ ಟ್ರಸ್ಟ್‌ಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಅಮೆರಿಕಾ, ಬ್ರಿಟನ್ ಸೇರಿದಂತೆ ಹಲವು ದೇಶಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ.20 ವರ್ಷ ತುಂಬಿದ ಯುವಕರು ಎರಡು ವರ್ಷ ಸೈನಿಕ ಶಿಕ್ಷಣ ಕಲಿಯುವುದು ಕಡ್ಡಾಯವಾಗಿದೆ. ಇಂತಹ ಆದರ್ಶಪ್ರಾಯ ಯೋಜನೆಯನ್ನು ಜಾರಿಗೊಳಿಸಿ ಔನ್ನತ್ಯ ಸಾಧಿಸಿವೆ.

ಕಂಪನಿಗಳಲ್ಲಿ ಉದ್ಯೋಗದ ಭರವಸೆ:

ಅಗ್ನಿವೀರರು ನಾಲ್ಕು ವರ್ಷ ಸೈನ್ಯದಲ್ಲಿ ಕೆಲಸ ನಿರ್ವಹಿಸಿದ ಬಳಿಕ ಬೇರೆ ಕಡೆಗಳಲ್ಲಿ ಉದ್ಯೋಗಗಳನ್ನು ಅವಲಂಬಿಸುವುದಕ್ಕೆ ಅವಕಾಶವಿದೆ. ಮಿಲಿಟರಿಯ ವಿವಿಧ ವಿಭಾಗಗಳು, ಖಾಸಗಿ ಕಂಪನಿಗಳು, ಸರ್ಕಾರಿ ಹುದ್ದೆಗಳಲ್ಲೂ ಮೀಸಲಾತಿ ನೀಡುತ್ತಿರುವುದರಿಂದ ಅಗ್ನಿವೀರರಿಗೆ ಉದ್ಯೋಗದ ವಿಪುಲ ಅವಕಾಶಗಳು ದೊರಕಿದಂತಾಗಿವೆ. ಇದನ್ನು ರಾಜಕೀಯ ಹಿನ್ನೆಲೆಯಿಂದ ನೋಡದೆ ದೇಶದ ಅಭಿವೃದ್ಧಿ ದೃಷ್ಟಿಯಿಂದ ನೋಡುವಂತೆ ಸಲಹೆ ನೀಡಿದರು.

ಅಭಿವೃದ್ಧಿಶೀಲ ರಾಷ್ಟ್ರಗಳು ಇಂತಹ ಯೋಜನೆಗಳಿಂದ ಪ್ರಗತಿಯತ್ತ ದಾಪುಗಾಲಿಟ್ಟಿವೆ. ಭಾರತವೂ ಆ ದಿಸೆಯಲ್ಲಿ ಹೊಸ ಹೆಜ್ಜೆಯನ್ನಿಟ್ಟಿದೆ. ಅದಕ್ಕೆ ಎಲ್ಲರೂ ಸಹಕಾರಿಯಾಗಿ ನಿಲ್ಲಬೇಕು. ಅಗ್ನಿಪಥ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವುದು ನನಗೆ ಅರ್ಥವಾಗುತ್ತಿಲ್ಲ. ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಎಲ್ಲರೂ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

Share This Article
Leave a comment