November 22, 2024

Newsnap Kannada

The World at your finger tips!

WhatsApp Image 2022 10 05 at 7.05.00 PM

Flowers to Chamundeshwari Devi: CM Bommayi launched the Jambu Ride ನಾಡದೇವಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ: ಜಂಬೂ ಸವಾರಿಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ

ನಾಡದೇವಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ: ಜಂಬೂ ಸವಾರಿಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ

Spread the love

ನಾಡಹಬ್ಬ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವು ಬುಧವಾರ ವಿಜೃಂಭಣೆಯಿಂದ ನೆರವೇರಿತು.


ಸಂಜೆ 05:37ಕ್ಕೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಜಂಬೂ ಸವಾರಿ ಮೆರವಣಿಗೆಗೆ ಮುಖ್ಯಮಂತ್ರಿ( Chief Minister) ಬಸವರಾಜ್ ಬೊಮ್ಮಾಯಿ( Basavaraj Bommai ) ಸೇರಿದಂತೆ ಗಣ್ಯರಿಂದ ಅಧಿದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಘಾಟನೆ ಮಾಡಲಾಯಿತು.ಇದನ್ನು ಓದಿ –ರಾಷ್ಟ್ರ ರಾಜಕಾರಣದತ್ತ ಹೆಜ್ಜೆ ಹಾಕಿದ KCR : ‘ಭಾರತ್ ರಾಷ್ಟ್ರ ಸಮಿತಿ’ ಹೊಸ ಪಕ್ಷ

ಪುಷ್ಪಾರ್ಚನೆ ಸಂದರ್ಭ ರಾಷ್ಟ್ರಗೀತೆ ( National Anthem) ನುಡಿಸುವ ಮೂಲಕ ತಾಯಿ ಚಾಮುಂಡೇಶ್ವರಿಗೆ ಗೌರವ ಸೂಚಿಸಲಾಯಿತು.

ಮೈಸೂರಿನ ಅರಮನೆ ( Mysuru Palace ) ಆವರಣದಲ್ಲಿ 750ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತ ಅಭಿಮನ್ಯು ನಾಡದೇವಿ ಚಾಮುಂಡೇಶ್ವರಿ ( Chamundeshwari ) ದೇವಿಯ ಉತ್ಸವ ಮೂರ್ತಿಯ‌ನ್ನು ಹೊತ್ತು ತನ್ನ ಗಜ ಗಾಂಭೀರ್ಯದಿಂದ ಕುಮ್ಕಿ ಆನೆಗಳಾದ ಚೈತ್ರ ಮತ್ತು ಕಾವೇರಿಯೊಂದಿಗೆ ಹೆಜ್ಜೆ ಹಾಕಿತು.

ಇದಕ್ಕೂ ಮುನ್ನ ಮೌಂಟೆಡ್ ಕೆ.ಆರ್.ಪಿ ಕಮಾಂಡೆಂಟ್ ಅವರಾದ ಎಂ.ಜಿ ನಾಗರಾಜ ಮತ್ತು ಎಸ್.ಡಿ.ಸಾಸನೂರು ಅವರ ನೇತೃತ್ವದಲ್ಲಿ 8 ತುಕಡಿಗಳಾದ 2 ಕೆ.ಎಸ್.ಆರ್.ಪಿ, 1 ಸಿ.ಎ.ಆರ್, 1 ಡಿ.ಎ.ಆರ್, 1 ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಹಾಗೂ 1 ಗೃಹದಳದ ಮುಂದಾಳತ್ವದಲ್ಲಿ ಕ್ಯಾಪ್ಟನ್ ಅಭಿಮನ್ಯು ನಾಡದೇವಿ ಉತ್ಸವ ಮೂರ್ತಿಯನ್ನು ಹೊತ್ತು ರಾಜಬೀದಿಗಳಲ್ಲಿ ಸಾಗಿತು.

ಪುಷ್ಪಾರ್ಚನೆ ಸಲ್ಲಿಸುವ ವೇಳೆ ಮಹಾರಾಜ ಯದುವೀರ್ ಶ್ರೀ ಕೃಷ್ಣದತ್ತ ಚಾಮರಾಜ ಒಡೆಯರ್, ಇಂಧನ ಸಚಿವರಾದ ವಿ.ಸುನೀಲ್ ಕುಮಾರ್, ಜಿಲ್ಲಾಧಿಕಾರಿ ಮತ್ತು ದಸರಾ ( Dasara ) ವಿಶೇಷಾಧಿಕಾರಿಯವರಾದ ಡಾ.ಬಗಾದಿ ಗೌತಮ್, ಪೊಲೀಸ್ ಕಮೀಷನರ್ ಡಾ.ಚಂದ್ರಗುಪ್ತ ಅವರು ಪಾಲ್ಗೊಂಡಿದ್ದರು.

Copyright © All rights reserved Newsnap | Newsever by AF themes.
error: Content is protected !!