ಡಿವೋರ್ಸ್​​ನಿಂದ ಹಿಂದೆ ಸರಿದ ಧನುಶ್​​​, ಐಶ್ವರ್ಯಾ- ಮತ್ತೆ ದಾಂಪತ್ಯದತ್ತ ಹೆಜ್ಜೆಗೆ

Team Newsnap
1 Min Read
Dhanush, Aishwarya who withdrew from the divorce - to step towards marriage again ಡಿವೋರ್ಸ್​​ನಿಂದ ಹಿಂದೆ ಸರಿದ ಧನುಶ್​​​, ಐಶ್ವರ್ಯಾ- ಮತ್ತೆ ದಾಂಪತ್ಯದತ್ತ ಹೆಜ್ಜೆಗೆ

18 ವರ್ಷಗಳ ಹಿಂದೆ ಸೂಪರ್ ಸ್ಟಾರ್ ( Super star) ರಜನಿಕಾಂತ್ ( Rajnikanth ) ಪುತ್ರಿ ಐಶ್ವರ್ಯಾರನ್ನು ಪ್ರೀತಿಸಿ ಮದುವೆ ( Marriage ) ಆಗಿದ್ದ ಧನುಶ್ ದಿಢೀರ್​​ ಡಿವೋರ್ಸ್​( Divorce ) ಘೋಷಿಸಿ ಎಲ್ಲರಿಗೂ ಶಾಕ್​​ ನೀಡಿದ್ದರು. ಈಗ ಧನುಶ್​​, ಐಶ್ವರ್ಯಾ ಹಿಂದೆ ಸರಿಯೋಕೆ ಮುಂದಾಗಿದ್ದಾರೆ.

ಇಬ್ಬರೂ ತಮ್ಮ ನಡುವಿನ ಮನಸ್ತಾಪ ಬಗೆಹರಿಸಿಕೊಂಡು ಮತ್ತೆ ಒಂದಾಗಲು ಚಿಂತಿಸಿದ್ದಾರಂತೆ.ಇದನ್ನು ಓದಿ –ನಾಡದೇವಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ: ಜಂಬೂ ಸವಾರಿಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ

ಇತ್ತೀಚೆಗೆ ಧನುಷ್ ( Dhanush ) ಮತ್ತು ಐಶ್ವರ್ಯಾ ( Aishwarya ) ಕುಟುಂಬ ಸದಸ್ಯರು ಮೀಟ್​​ ಮಾಡಿದ್ದಾರೆ. ಸೂಪರ್​ ಸ್ಟಾರ್​​ ರಜನಿಕಾಂತ್​​ ಮನೆಯಲ್ಲಿ ಭೇಟಿಯಾಗಿ ಧನುಶ್​​, ಐಶ್ವರ್ಯಾ ಮತ್ತೆ ಒಂದಾಗಬೇಕು ಎಂದು ಚರ್ಚಿಸಿದ್ದಾರೆ.

ಯಾವುದೇ ಕಾರಣಕ್ಕೂ ವಿವಾದಗಳಿಗೆ ಸಿಲುಕಬೇಡಿ. ಒಟ್ಟಾಗಿ ಮತ್ತೆ ನಿಮ್ಮ ಕೆಲಸದಲ್ಲಿ ಬ್ಯುಸಿಯಾಗಿರಿ ಎಂದು ರಜನಿಕಾಂತ್​ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ರಜನಿಕಾಂತ್​​ ಸಲಹೆ ಮೇರೆಗೆ ತಮ್ಮ ದಾಂಪತ್ಯ ಜೀವನದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಲು ಧನುಶ್​​, ಐಶ್ವರ್ಯಾ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

2004 ರಲ್ಲಿ ಮದುವೆ ಆಗಿದ್ದ ಈ ಜೋಡಿ 18 ವರ್ಷಗಳ ಕಾಲ ಒಟ್ಟಿಗೆ ಕೆಲಸ ಮಾಡಿದ್ದರು. ಇದೇ ವರ್ಷ ಜನವರಿಯಲ್ಲಿ ( January ) ಇಬ್ಬರು ವಿಚ್ಛೇದನ ( Divorce ) ಪಡೆಯುವುದಾಗಿ ಘೋಷಿಸಿದ್ದರು.

Share This Article
Leave a comment