ಭದ್ರತಾ ಪಡೆ ಜೊತೆ ಗುಂಡಿನ ಚಕಮಕಿ; ಇಬ್ಬರು ಉಗ್ರರ ಹತ್ಯೆ

Team Newsnap
1 Min Read

ಕೆಲ ದಿನಗಳ ಹಿಂದಷ್ಟೇ ಕಾಶ್ಮೀರದಲ್ಲಿ‌ ನಡೆದ ಭದ್ರಾತಾ ಪಡೆ-ಉಗ್ರರ ಘರ್ಷಣೆಯಲ್ಲಿ ಇಬ್ಬರು ಉಗ್ರರು ಹತರಾಗಿದ್ದರು. ಮತ್ತೆ ಇಂದು ಮುಂಜಾನೆ ಕಾಶ್ಮೀರದ ಕುಲ್ಗಾಂನಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಇಬ್ಬರು ಅಪರಿಚುತ ಉಗ್ರರು ಅಸುನೀಗಿದ್ದಾರೆ.

ಭದ್ರತಾ ಪಡೆಗಳಿಗೆ ಜಮ್ಮು-ಕಾಶ್ಮೀರದ ಕುಲ್ಗಾಂ ಜಿಲ್ಲೆಯಿಂದ 70 ಕಿಮಿ ದೂರ ಇರುವ ಚಿನಗಾಮ್ ಎಂಬ ಹಳ್ಳಿಯಲ್ಲಿ ಭಯೋತ್ಪಾದಕರು ಇದ್ದಾರೆ ಎಂಬ ಖಚಿತ ಮಾಹಿತಿ ಸಿಕ್ಕಿತ್ತು. ಸಿಕ್ಕ ಮಾಹಿತಿಯ ಆಧಾರಮೇಲೆ ಭದ್ರತಾ ಪಡೆಗಳು ಚಿನಗಾಮ್ ಗ್ರಾಮದಲ್ಲಿ ಜಾಲ ಹೆಣೆದು ಉಗ್ರರಿಗೋಸ್ಕರ ಹುಡುಕುವಾಗ ಹಠಾತ್ತನೆ ಉಗ್ರರು ಭದ್ರತಾ ಪಡೆಗಳ ಮೇಲೆ ದಾಳಿ ಮಾಡಿದ್ದಾರೆನಲ. ಭದ್ರತಾ ಪಡೆಯ ಸಿಬ್ಬಂದಿಗಳು ಪ್ರತಿ ದಾಳಿ ಮಾಡಿ ಇಬ್ಬರನ್ನು ಕೊಂದಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಜಮ್ಮು-ಕಾಶ್ಮೀರದ ಪೋಲೀಸರು ‘ಅಪರಿಚಿತ ಉಗ್ರರನ್ನು ಎನ್‌ಕೌಂಟರ್ ಮಾಡಲಾಗಿದೆ. ಕಾರ್ಯಾಚರಣೆ ಪ್ರಗತಿಯಲ್ಲಿದೆ’ ಎಂದು ಟ್ವೀಟ್ ಮಾಡಿದ್ದಾರೆ.

Share This Article
Leave a comment