ರಾಜ್ಯದಲ್ಲಿ SDA & FDA ಹುದ್ದೆಗಳ ಭರ್ತಿ : ಅರ್ಜಿ ಪ್ರಕ್ರಿಯೆ ಆರಂಭ

Team Newsnap
2 Min Read

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

186 ದ್ವಿತೀಯ ದರ್ಜೆ, ಅಸಿಸ್ಟೆಂಟ್, ಫೀಲ್ಡ್ ಇನ್ಸ್​ಪೆಕ್ಟರ್ ಹುದ್ದೆಗಳು ಖಾಲಿ ಇದೆ . ಆಸಕ್ತರು ಅರ್ಜಿ ಸಲ್ಲಿಸಬಹುದು.

ಜುಲೈ 22, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಕರ್ನಾಟಕ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಜೂನ್ 23ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಹತೆ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹುದ್ದೆ ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್, ಫೀಲ್ಡ್ ಇನ್ಸ್​ಪೆಕ್ಟರ್.

  • ಒಟ್ಟು ಹುದ್ದೆ 186
  • ವೇತನ ಮಾಸಿಕ ₹ 37,900-70,850
  • ಉದ್ಯೋಗದ ಸ್ಥಳ ಕರ್ನಾಟಕ
  • ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 22, 2023

ಹುದ್ದೆಯ ಮಾಹಿತಿ:

  • ವೆಲ್​ಫೇರ್ ಆಫೀಸರ್- 12
  • ಫೀಲ್ಡ್​ ಇನ್ಸ್​ಪೆಕ್ಟರ್- 60
  • ಫಸ್ಟ್​ ಡಿವಿಶನ್ ಅಸಿಸ್ಟೆಂಟ್ (FDA)- 12
  • ಪ್ರೈವೇಟ್ ಕನ್ಸಲ್ಟೆಂಟ್- 2
  • ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್ (SDA)- 10

ವೇತನ:

  • ವೆಲ್​ಫೇರ್ ಆಫೀಸರ್- ಮಾಸಿಕ ₹ 37,900-70,850
  • ಫೀಲ್ಡ್​ ಇನ್ಸ್​ಪೆಕ್ಟರ್- ಮಾಸಿಕ ₹ 33,450-62,600
  • ಫಸ್ಟ್​ ಡಿವಿಶನ್ ಅಸಿಸ್ಟೆಂಟ್ (FDA)- ಮಾಸಿಕ ₹ 27,650-52,650
  • ಪ್ರೈವೇಟ್ ಕನ್ಸಲ್ಟೆಂಟ್- ಮಾಸಿಕ ₹ 27,650-52,650
  • ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್ (SDA)- ಮಾಸಿಕ ₹ 21,400-42,000

ವಿದ್ಯಾರ್ಹತೆ, ವಯೋಮಿತಿ, ವಯೋಮಿತಿ ಸಡಿಲಿಕೆ, ಅರ್ಜಿ ಶುಲ್ಕ ಇತ್ಯಾದಿ ವಿವರಗಳಿಗಾಗಿ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ.ವಿಎಯಿಂದಲೇ 40 ಸಾವಿರ ರು ಲಂಚ ಸ್ವೀಕಾರ : ಪಾಂಡವಪುರ ತಹಶೀಲ್ದಾರ್ ಲೋಕಾ ಬಲೆಗೆ

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಕೊನೆಯ ದಿನ: ಜುಲೈ 22, 2023
  • ಆನ್​ಲೈನ್ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಜುಲೈ 25, 2023
  • ಇ-ಪೋಸ್ಟ್​ ಆಫೀಸ್ ಮೂಲಕ ಅರ್ಜಿ ಶುಲ್ಕ ಕಟ್ಟಲು ಕೊನೆಯ ದಿನ: ಜುಲೈ 26, 2023

Share This Article
Leave a comment