ವಿಎಯಿಂದಲೇ 40 ಸಾವಿರ ರು ಲಂಚ ಸ್ವೀಕಾರ : ಪಾಂಡವಪುರ ತಹಶೀಲ್ದಾರ್ ಲೋಕಾ ಬಲೆಗೆ

Team Newsnap
1 Min Read
ವಿಎಯಿಂದಲೇ 40 ಸಾವಿರ ರು ಲಂಚ ಸ್ವೀಕಾರ : ಪಾಂಡವಪುರ ತಹಶೀಲ್ದಾರ್ ಲೋಕಾ ಬಲೆಗೆ Accepting Rs 40,000 bribe from VA itself: Pandavpur Tehsildar Loka Trapped

ಮಂಡ್ಯ : ಗ್ರಾಮ ಲೆಕ್ಕಾಧಿಕಾರಿಯೊಬ್ಬರಿಂದ ಪಾಂಡವಪುರ ತಹಶೀಲ್ದಾರ್ ಸೌಮ್ಯ 40 ಸಾವಿರ ರು ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಗುರುವಾರ ಜರುಗಿದೆ.

ಗ್ರಾಮ ಲೆಕ್ಕಾಧಿಕಾರಿ ಮರಿಸ್ವಾಮಿ ಎಂಬುವವರಿಂದ 40 ಸಾವಿರ ಲಂಚದ ಹಣ ಸ್ವೀಕಾರ ಮಾಡುವಾಗ ತಹಶೀಲ್ದಾರ್ ರನ್ನು ಬಲೆಗೆ ಬೀಳಿಸಲಾಗಿದೆ.

ಗ್ರಾಮ ಲೆಕ್ಕಾಧಿಕಾರಿ ಮರಿಸ್ವಾಮಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಶಿಸ್ತು ತೋರಿದ ಹಿನ್ನೆಲೆಯಲ್ಲಿ ಅವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗಿತ್ತು ನಂತರ ಬೇರೆ ವೃತ್ತಕ್ಕೆ ವರ್ಗಾವಣೆ ಮಾಡಲಾಗಿತ್ತು.

ಗ್ರಾಮ ಲೆಕ್ಕಾಧಿಕಾರಿ ಮರಿಸ್ವಾಮಿ ಅವರು ತಮ್ಮ ವಿರುದ್ದ ನಡಯುತ್ತಿದ್ದ 124 ಕಲಂ ತನಿಖೆ ಮತ್ತು ಈ ಮೊದಲು ಕರ್ತವ್ಯ ನಿರ್ವಹಿಸುತ್ತಿದ್ದ ಅದೇ ವೃತ್ತಕ್ಕೆ ವರ್ಗಾವಣೆ ಮಾಡಲು 40 ಸಾವಿರ ರೂಪಾಯಿ ಲಂಚ ನೀಡುವಂತೆ ಒತ್ತಡ ಹೇರಿದ್ದಾರೆ.

ಆಗ ಗ್ರಾಮ ಲೆಕ್ಕಾಧಿಕಾರಿ ಮರಿಸ್ವಾಮಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ತಹಶೀಲ್ದಾರ್ ಸೌಮ್ಯ ವಿರುದ್ದ ದೂರು ದಾಖಲಿಸಿದ್ದರು‌.‘ಹೆಚ್-1ಬಿ ವೀಸಾ’ ನಿಯಮ ಸಡಿಲಿಸಿದ ಅಮೆರಿಕ-ಭಾರತಿಯರಿಗೆ ವರದಾನ

ಗುರುವಾರ ಲೋಕಾಯುಕ್ತ ಪೊಲೀಸರು ನೀಡಿದ ಸೂಚನೆಯಂತೆ ತಹಶೀಲ್ದಾರ್ ಸೌಮ್ಯ ಅವರಿಗೆ ರಾಜಸ್ವ ನಿರೀಕ್ಷಕ ಮಾದೇಶ್ ಮೂಲಕ 40 ಸಾವಿರ ರೂಪಾಯಿ ಲಂಚವನ್ನು ನೀಡುವಾಗ ಲೋಕಾಯುಕ್ತ ಅಧಿಕಾರಿಗಳು ಧಿಡೀರ್ ದಾಳಿ ಮಾಡಿ ತಹಶೀಲ್ದಾರ್ ಸೌಮ್ಯ ಮತ್ತು ರಾಜಸ್ವ ನಿರೀಕ್ಷಕ ಮಾದೇಶ್ ಅವರನ್ನು ಲಂಚದ ಹಣದ ಸಮೇತ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಬಂಧನವೂ ಆಗಿದೆ ತನಿಖೆ ನಡೆಯುತ್ತಿದೆ.

Share This Article
Leave a comment