ಕಳೆದ ಬಾರಿ ಮುಂಗಾರಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಚಾಮುಂಡಿಬೆಟ್ಟದ ನಂದಿ ರಸ್ತೆ ಕುಸಿದಿತ್ತು. ಇದರ ದುರಸ್ತಿ ಕಾರ್ಯ ಈವರೆಗೂ ಆರಂಭವಾಗಿಲ್ಲ. ಈಗಾಗಲೇ ಮುಂಗಾರು ರಾಜ್ಯ ಪ್ರವೇಶಿಸಿದೆ. ಹೀಗಾಗಿ ಕುಸಿತ ಉಂಟಾದ ರಸ್ತೆ ಭಾಗ ಮತ್ತಷ್ಟು ಹಾನಿಗೀಡಾಗುವ ಆತಂಕ ಎದುರಾಗಿದೆ.
ಮಳೆಗಾಲ ಆರಂಭವಾಗಿರುವುದರಿಂದ ಭೂ ಕುಸಿತ ಉಂಟಾದ ಜಾಗದಲ್ಲಿ ಮತ್ತೆ ಭೂಮಿ ಬಿರುಕು ಬಿಟ್ಟು ಮಣ್ಣಿನ ಕುಸಿತವಾಗಬಹುದು. ಇದರಿಂದ ರಸ್ತೆ ದುರಸ್ತಿ ಮತ್ತಷ್ಟು ಜಟಿಲವಾಗುವ ಆತಂಕ ಎದುರಾಗಿದೆ.ಇದನ್ನು ಓದಿ –ಕೆ ಆರ್ ಪೇಟೆ ಈಶ್ವರನ ದೇವಸ್ಥಾನದಲ್ಲಿ ಶುದ್ದೀಕರಣ ಆರಂಭ – ನಾಳೆ ಪುನರ್ ಪ್ರತಿಷ್ಠಾಪನೆ
ಮತ್ತಷ್ಟು ಬಿರುಕು
ಕುಸಿತಗೊಂಡಿರುವ ರಸ್ತೆ ಸಮೀಪ ಮತ್ತಷ್ಟು ಕಡೆ ಬಿರುಕು ಕಾಣಿಸಿಕೊಂಡಿದೆ. ಈಗಾಗಲೇ ಎರಡು ಕಡೆ ಭಾರಿ ಪ್ರಮಾಣದ ಭೂ ಕುಸಿತವಾಗಿದೆ.
ಕುಸಿತಗೊಂಡಿರುವ ಜಾಗದಲ್ಲಿ ಶೀಘ್ರ ದುರಸ್ತಿ ಕಾರ್ಯ ಕೈಗೊಳ್ಳದ ಪರಿಣಾಮ ಭಾರಿ ಪ್ರಮಾಣದ ಮಣ್ಣು ಸವೆಯುತ್ತಿದೆ. ಇದರ ಜತೆಗೆ ಕುಸಿದ ಭಾಗದ ಸಮೀಪ ಎರಡು-ಮೂರು ಕಡೆ 50 ಮೀಟರ್‌ಗಳಷ್ಟು ಬಿರುಕು ಬಿಟ್ಟಿದೆ. ಇದು ಈ ಬಾರಿ ಸುರಿಯುವ ಮಳೆಯಲ್ಲಿ ಕುಸಿಯುವ ಎಲ್ಲಾ ಸಾಧ್ಯತೆ ಇದೆ, ಹೀಗಾಗಿ ಬೆಟ್ಟಕ್ಕೆ ಮತ್ತಷ್ಟು ಘಾಸಿಯಾಗುವ ಮುನ್ನ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
- ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ