ಎಫ್ ಡಿ ಎ ಪರೀಕ್ಷಾ ಅಕ್ರಮ: ಮೈಸೂರು ಪಿಎಸ್ ಐ ಅಶ್ವಿನಿ ಅಮಾನತ್ತು

Team Newsnap
1 Min Read

ಎಫ್ ಡಿ ಎ ಪರೀಕ್ಷಾ ಅಕ್ರಮ ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಎನ್.ಆರ್. ಸಂಚಾರ ವಿಭಾಗದ ಪಿಎಸ್ಐ ಅಶ್ವಿನಿ ಅನಂತಪುರ ಅಮಾನತ್ತು ಮಾಡಿ ಕಮೀಷನರ್ ಆದೇಶಿಸಿದ್ದಾರೆ. ಕೆಪಿಎಸ್ಸಿ ನಡೆಸಿದ ಪ್ರಥಮ ದರ್ಜೆ ಸಹಾಯಕರ ಪರೀಕ್ಷೆಗೆ ಅಭ್ಯರ್ಥಿ ಜತೆ ಅಕ್ರಮ ನಡೆಸಿದ ಆರೋಪದ ಹಿನ್ನೆಲೆ ಅಮಾನತ್ತು ಕ್ರಮ ಜರುಗಿಸಿದ್ದಾರೆ.

ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಪರೀಕ್ಷಾ ಅಕ್ರಮ ಕುರಿತಂತೆ ದಾಖಲೆಗಳ ಸಮೇತ ಆರೋಪ ಮಾಡಿದ ಹಿನ್ನೆಲೆ
ಪಿಎಸ್ ಐ ಅಶ್ವಿನಿ ಅನಂತಪುರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಸಸ್ಪೆಂಡ್ ಮಾಡಿದ್ದಾರೆ.

ಅಶ್ವಿನಿ ಯವರು ಬಾಗಲಕೋಟೆಯ ಸಂಗಮೇಶ್ ಝಳಕಿ ಜತೆ ಹಣದ ವ್ಯವಹಾರದ ಬಗ್ಗೆ ಸಂಭಾಷಣೆ ನಡೆಸಿರುವ ಆಡಿಯೋ ಬಯಲಾಗಿದೆ ಅಲ್ಲದೇ ವಾಟ್ಸಪ್ ಸಂದೇಶಗಳು, ಬ್ಯಾಂಕ್ ವಿವರಗಳು ಬಹಿರಂಗವಾಗಿದೆ. ಸಂಸದೆ ಆಣೆ – ಪ್ರಮಾಣದ ಸವಾಲು ಸ್ವೀಕರಿಸಿದ ಶಾಸಕ ಪುಟ್ಟರಾಜು: ದಿನಾಂಕ, ಸಮಯ ನಿಗದಿ ಮಾಡಿ – ಪ್ರತಿ ಸವಾಲು

ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಆಯುಕ್ತರು ವಿಚಾರಣೆ ಬಾಕಿ ಇಟ್ಟು , ತಕ್ಷಣ ಜಾರಿಗೆ ಬರುವಂತೆ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Share This Article
Leave a comment