ಫಾಝಿಲ್ ಹತ್ಯೆ ಪ್ರಕರಣ : 6 ಮಂದಿ ಬಂಧನ – 15 ಸಾವಿರಕ್ಕೆ ಮೂರು ದಿನ ಬಾಡಿಗೆ ಪಡೆದ ಹಂತಕರು

Team Newsnap
2 Min Read

ಸುರತ್ಕಲ್ ನಲ್ಲಿ ಜುಲೈ 28 ರ ರಾತ್ರಿ ನಡೆದ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಈ ಕುರಿತಂತೆ ಮಂಗಳವಾರ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಮಾಲೀಕನ ಹೆಚ್ಚಿನ ವಿಚಾರಣೆ ನಡೆಸಿದಾಗ ಕಾರು ಬಾಡಗೆ ಪಡೆದವರು ಯಾರೆಂದು ಗೊತ್ತಾಯಿತು. ಒಟ್ಟು 6 ಮಂದಿಯನ್ನು ಪ್ರಕರಣದಲ್ಲಿ ಬಂಧಿಸಿದ್ದೇವೆ.

ಬಂಧಿತರನ್ನು ಶ್ರೀನಿವಾಸ ಕಾಟಿಪಳ್ಳ(23), ಅಭಿಷೇಕ್(23) ದೀಕ್ಷಿತ್ ಕಾಟಿಪಳ್ಳ(21), ಸುಹಾಸ್( 29), ಮೋಹನ್(23) ಮತ್ತು ಗಿರೀಶ್(27) ಎಂದು ಗುರುತಿಸಲಾಗಿದೆ.

ಜುಲೈ 26 ರಂದು ರಾತ್ರಿ ಬಜ್ಪೆ ನಿವಾಸಿ ಸುಹಾಸ್, ಅಭಿಷೇಕ್‍ಗೆ ಕರೆ ಮಾಡಿದ್ದಾನೆ. 27 ರಂದು ಮಧ್ಯಾಹ್ನದ ಒಳಗೆ ಯಾರನ್ನಾದರು ಹೊಡಿಬೇಕು ಎಂದು ಪ್ಲ್ಯಾನ್ ಮಾಡಿದ್ದಾನೆ.

ಜು 28 ರಂದು ಸುಹಾಸ್ ಮಾರಕಾಸ್ತ್ರದ ಜೊತೆ ಕಾರಿನಲ್ಲಿ ತೆರಳುತ್ತಾನೆ. ಸುಹಾಸ್, ಅಭಿಷೇಕ್, ಶ್ರೀನಿವಾಸ್ ಹಾಗೂ ದೀಕ್ಷಿತ್ ಪ್ಲ್ಯಾನ್ ಮಾಡುತ್ತಾರೆ. ಮಹಮ್ಮದ್ ಫಾಝಿಲ್ ಹೊಡಿಬೇಕು ಎಂದು ಸ್ಕೆಚ್ ಹಾಕುತ್ತಾರೆ ಎಂದರು.

ಮೂರು ನಾಲ್ಕು ಮಂಕಿ ಕ್ಯಾಪ್ ಖರೀದಿಸುತ್ತಾರೆ. 28ರಂದು ಮಧ್ಯಾಹ್ನ ಬಾರ್ ಒಂದರಲ್ಲಿ ಆರೋಪಿಗಳು ಒಟ್ಟು ಸೇರಿ ಊಟ ಮಾಡುತ್ತಾರೆ. ಆರು ಜನ ಹಂತಕರ ತಂಡ ಕಾರಿನಲ್ಲಿ ತೆರಳುತ್ತಾರೆ. ಹತ್ಯೆಯ ಬಳಿಕ ಪಲಿಮಾರು ರಸ್ತೆಯಲ್ಲಿ ತೆರಳಿ ಇನ್ನಾ ಗ್ರಾಮದಲ್ಲಿ ಕಾರು ಬಿಟ್ಟು ಮತ್ತೊಂದು ಕಾರಿನಲ್ಲಿ ತೆರಳಿದ್ದಾರೆ ಎಂದು ಶಶಿಕುಮಾರ್ ವಿವರಿಸಿದರು.

14 ದಿನಗಳ ಕಾಲ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಕೇಳುತ್ತೇವೆ. ಆರೋಪಿಗಳ ಹಿನ್ನೆಲೆ ಏನು ಎಂಬ ಬಗ್ಗೆ ತನಿಖೆಯಲ್ಲಿ ಪತ್ತೆ ಹಚ್ಚುತ್ತೇವೆ. ಫಾಝಿಲ್ ನನ್ನೇ ಯಾಕೆ ಟಾರ್ಗೆಟ್ ಮಾಡಿದ್ದು ? ವೈಯಕ್ತಿಕ ದ್ವೇಷ ಏನಿತ್ತು. ಎಂಬುದು ನಮಗೂ ಗೊಂದಲವಾಗಿದೆ. ಮುಂದಿನ ತನಿಖೆಯಲ್ಲಿ ಎಲ್ಲಾ ತಿಳಿಯುತ್ತದೆ ಎಂದರು.

ಮಂಗಳಪೇಟೆ ನಿವಾಸಿ ಮಹಮ್ಮದ್ ಫಾಝಿಲ್ (23) ಹತ್ಯೆಯಾದ ಈತ ಬುಲೆಟ್ ಟ್ಯಾಂಕರ್ ನಲ್ಲಿ ಪಾರ್ಟ್ ಟೈಮ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಏಳೆಂಟು ತಂಡಗಳಲ್ಲಿ ಪ್ರಕರಣ ಪತ್ತೆ ಮಾಡಲು ಕಾರ್ಯಾಚರಣೆ ನಡೆಸಲಾಗಿತ್ತು. ಅಜಿತ್ ಕ್ರಾಸ್ತಾ ಎಂಬ ಕಾರಿನ ಮಾಲೀಕ ಹಣದ ಆಸೆಗೆ ಕಾರು ಕೊಟ್ಟಿದ್ದ. ಮೂರು ದಿನಕ್ಕೆ 15 ಸಾವಿರ ಬಾಡಿಗೆ ಕೊಡ್ತೇವೆ ಎಂದು ಹಂತಕರು ಹೇಳಿದ್ದರು ಎಂದು ಶಶಿಕುಮಾರ್ ತಿಳಿಸಿದ್ದಾರೆ.

Share This Article
Leave a comment