March 29, 2023

Newsnap Kannada

The World at your finger tips!

marriage , farmer , bride

farmer prays for bride - A young farmer seeks blessings from Rathotsava ರೈತರಿಗೆ ಕನ್ಯೆ ಕೊಡಲಿ- ರಥೋತ್ಸವದಲ್ಲಿ ಹರಕೆ ತೀರಿಸಿದ ಯುವ ರೈತ

ರೈತರಿಗೆ ಕನ್ಯೆ ಕೊಡಲಿ- ರಥೋತ್ಸವದಲ್ಲಿ ಹರಕೆ ತೀರಿಸಿದ ಯುವ ರೈತ

Spread the love

ಕೃಷಿ ಕೆಲಸ ಮಾಡುವವರಿಗೆ (ಯುವ ರೈತರಿಗೆ) ಹೆಣ್ಣು ಕೊಡಲು ಯಾರು ಮುಂದೆ ಬರಲ್ಲ. ಈ ಹಿನ್ನೆಲೆಯಲ್ಲಿ ಯುವ ರೈತನೊಬ್ಬ, ರೈತರಿಗೆ ಕನ್ಯೆ ಕೊಡಲಿ ಎಂದು ಬಾಳೆ ಹಣ್ಣಿನ ಮೇಲೆ ಬರೆದು ರಥೋತ್ಸವದಲ್ಲಿ ಹರಕೆ ತೀರಿಸಿದ್ದಾರೆ.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವ ನಿನ್ನೆ (ಬುಧವಾರ) ಸಂಜೆ ಈ ಹರಕೆ ತೀರಿಸಲಾಗಿದೆ.

ರಥೋತ್ಸವದಲ್ಲಿ, ಓರ್ವ ಯುವ ರೈತ ಬಾಳೆಹಣ್ಣಿನ ಮೇಲೆ ಬರೆದಿರುವ ಹರಿಕೆಯು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವಾಗಿದೆ.ಗ್ರಾ ಪಂ ಚುನಾವಣೆ: ಚುನಾವಣಾ ಆಯೋಗದಿಂದ ವೇಳಾಪಟ್ಟಿ ಪ್ರಕಟ

ಜನರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯೆ ಕೊಡಲಿ ಎಂದು ಬಾಳೆಹಣ್ಣಿನ ಮೇಲೆ ಬರೆದಿದ್ದಾನೆ. ಇದನ್ನು ನಂತರ ರಥೋತ್ಸವದ ವೇಳೆ ದುರ್ಗಾದೇವಿ ರಥಕ್ಕೆ ಸಮರ್ಪಿಸಿ ತನ್ನ ಹರಕೆಯನ್ನು ಸಮರ್ಪಣೆ ಮಾಡಿದ್ದಾನೆ.

ತಾಯಿ ದುರ್ಗಾಂಬಿಕೆ ಜನರ ಮನಸ್ಸು ಬದಲಾಯಿಸಿ, ರೈತರಿಗೂ ಮದುವೆಯಾಗಲು ಹೆಣ್ಣು ಸಿಗಲಿ. ಎಲ್ಲರಿಗೂ ಈ ರೀತಿಯ ಮನಸ್ಥಿತಿಯನ್ನು ಕರುಣಿಸಲು ಎಂದು ಹರಕೆ ತೀರಿಸಿದ್ದಾರೆ.

error: Content is protected !!