ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಕ್ಕೆ ದೂರು -7 ಕೇಸ್ ದಾಖಲು

Team Newsnap
2 Min Read

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್. ರಮೇಶ್ ಲೋಕಾಯುಕ್ತಕ್ಕೆ ದಾಖಲೆ ಸಮೇತ ದೂರು ನೀಡಿದ್ದಾರೆ.

10 ಬೃಹತ್ ಹಗರಣಗಳ ಬಗ್ಗೆ ಎನ್. ಆರ್.ರಮೇಶ್ ಲೋಕಾಯುಕ್ತಕ್ಕೆ ದೂರ ನೀಡಿದ್ದಾರೆ.ರೈತರಿಗೆ ಕನ್ಯೆ ಕೊಡಲಿ- ರಥೋತ್ಸವದಲ್ಲಿ ಹರಕೆ ತೀರಿಸಿದ ಯುವ ರೈತ 

ದೂರಿನಲ್ಲಿ ಸಿದ್ದರಾಮಯ್ಯ, ರಾಬರ್ಟ್ ವಾದ್ರಾ , ಕೆ. ಜೆ. ಜಾರ್ಜ್ , ಕೃಷ್ಣ ಭೈರೇಗೌಡ, ಯು. ಟಿ. ಖಾದರ್ , ಎಂ.ಬಿ. ಪಾಟೀಲ್, ಜಮೀರ್ ಅಹಮ್ಮದ್, ದಿನೇಶ್ ಗುಂಡೂರಾವ್, ಎಂ.ಕೃಷ್ಣಪ್ಪ, ಎನ್.ಎ. ಹ್ಯಾರೀಸ್ ಹಾಗೂ ಪ್ರಿಯಾ ಕೃಷ್ಣ ವಿರುದ್ಧ ದೂರು ದಾಖಲಾಗಿದೆ.

9 ಮಂದಿ ಹಿರಿಯ ಐಎಎಸ್ ಅಧಿಕಾರಿಗಳು, 5 ಮಂದಿ ಕೆಎಎಸ್ ಅಧಿಕಾರಿಗಳು ಸೇರಿದಂತೆ 21 ಅಧಿಕಾರಿಗಳ ವಿರುದ್ಧ 3,728 ಪುಟಗಳ ಸಂಪೂರ್ಣ ದಾಖಲೆಗಳ ಸಹಿತ 10 ದೂರುಗಳು ಸಲ್ಲಿಕೆಯಾಗಿದೆ.

ಅಲ್ಲದೇ 62 ಗಂಟೆಗಳ ಅವಧಿಯ ವೀಡಿಯೋ ತುಣುಕುಗಳು ಮತ್ತು 900ಕ್ಕೂ ಹೆಚ್ಚು ಛಾಯಾಚಿತ್ರಗಳನ್ನೊಳಗೊಂಡ 2 ಡಿವಿಡಿಗಳು ಬಿಡುಗಡೆಯಾಗಿವೆ.

ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ, ನಕಲಿ ದಾಖಲೆ ತಯಾರಿಕೆ ಮತ್ತು ಸರ್ಕಾರಿ ಭೂಕಬಳಿಕೆ ಪ್ರಕರಣಗಳು ದಾಖಲಾಗಿದೆ. ಅಷ್ಟೇ ಅಲ್ಲದೇ ಸಿದ್ದರಾಮಯ್ಯ ವಿರುದ್ಧವೇ 7 ದೂರುಗಳು ದಾಖಲಾಗಿದೆ.

ಈ ಬಗ್ಗೆ ರಮೇಶ್ ಕುಮಾರ್ ಮಾತನಾಡಿ, ಕರ್ನಾಟಕ ರಾಜಕಾರಣ ಇತಿಹಾಸದಲ್ಲಿ ಒಂದೇ ಬಾರಿಗೆ 10 ಬೃಹತ್ ಹಗರಣ ಇದಾಗಿದೆ, ಬೃಹತ್ ಹಗರಣಗಳ ಲೋಕಾಯುಕ್ತರಿಗೆ ದೂರುಗಳ ಸುರಿಮಳೆ ಆಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಾದ್ರಾ, ದಿನೇಶ್ ಗುಂಡೂರಾವ್, ಕೆ.ಜೆ ಜಾರ್ಜ್ ಸೇರಿದಂತೆ ಅನೇಕರ ವಿರುದ್ಧ ದೂರು ನೀಡಿದ್ದೇವೆ ಎಂದು ತಿಳಿಸಿದರು.

ವಂಚನೆ, ಭ್ರಷ್ಟಾಚಾರ, ಭೂ ಕಬಳಿಕೆ ಆಧಾರದ ಮೇಲೆ ದೂರು ಸಲ್ಲಿಕೆಯಾಗಿದ್ದು, ಕೃಷಿ ಭಾಗ್ಯ ಯೋಜನೆ ಅಡಿ ಸಿದ್ದರಾಮಯ್ಯ ಮತ್ತು ಕೃಷ್ಣ ಭೈರೇಗೌಡರು ಬೃಹತ್ ಹಗರಣ ಮಾಡಿದ್ದಾರೆ. ಯು.ಟಿ ಖಾದರ್ ಮತ್ತು ಸಿದ್ದರಾಮಯ್ಯ ಅವರು ಜೊತೆಗೂಡಿ ಭ್ರಷ್ಟಾಚಾರ ಮಾಡಿ ಹಣ ಕಬಳಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಕೆ.ಜೆ ಜಾರ್ಜ್ ಸೇರಿ 40 ಕೋಟಿ ರೂ. ಬೃಹತ್ ಹಗರಣ ಮಾಡಿದ್ದಾರೆ. ಬಿಬಿಎಂಪಿ ಎಲ್‍ಇಡಿ ಬೀದಿದೀಪ ಅಳವಡಿಕೆಯಲ್ಲಿ 1,600 ಹಗರಣ ಆಗಿದೆ. ಅದರ ವಿರುದ್ಧ ದೂರು ನೀಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

Share This Article
Leave a comment