ಸಮೂಹ ಸನ್ನಿಯಾದ ಎಂಜಿನೀಯರಿಂಗ್ ಪದವಿ- ತಂತ್ರಜ್ಞಾನ, ಕೌಶಲ್ಯತೆ ಕೊರತೆ

Team Newsnap
5 Min Read

ಇಂದು ಸೆಪ್ಟೆಂಬರ್ 15. ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯನವರು ಹುಟ್ಟಿದ ದಿನ. ಭಾರತೀಯರಾದ ನಾವು ಇಂದು ಅವರ ನೆನಪಿನಲ್ಲಿ ಎಂಜಿನೀಯರುಗಳ ದಿನಾಚರಣೆ ಆಚರಿಸುವ ದಿನ. ವಿಶ್ವೇಶ್ವರಯ್ಯನವರು ಇಡೀ ಪ್ರಪಂಚದಲ್ಲಿ ಹೆಸರುವಾಸಿ ಎಂಜಿನೀಯರಾಗಿದ್ದವರು. ಬ್ರಿಟೀಷರಿಂದ "ಸರ್" ಎಂಬ ಬಿರುದನ್ನು ಪಡೆದವರು. ಇಂದಿನ ಎಲ್ಲ ಅಭಿಯಂತರರ ಆದರ್ಶ. ಆದರೆ ಇಂದು ಎಷ್ಟು ಜನ ಎಂಜಿನೀಯರುಗಳು ತಮ್ಮ ಕೆಲಸಕ್ಕೆ ನ್ಯಾಯ ಸಲ್ಲಿಸುತ್ತಿದ್ದಾರೆ? ಎಲ್ಲ ವಿದ್ಯಾರ್ಥಿಗಳು ಇಂದು ಇಂಜಿನಿಯರಿಂಗ್ ಅಥವಾ ಡಾಕ್ಟರ್ ಆಗಬೇಕೆಂದು ಹಂಬಲಪಡುತ್ತಿದ್ದಾರೇನೋ ಹೌದು. ಆದರೆ ಅವರ ಕಲಿಕೆ , ಜ್ಞಾನ, ಕೌಶಲ್ಯ ಎಷ್ಟರ ಮಟ್ಟಿಗೆ ಪ್ರಾಯೋಗಿಕವಾಗಿದೆ? ಎಷ್ಟರ ಮಟ್ಟಿನಲ್ಲಿ ಅವರ ಬುದ್ಧಿಮತ್ತೆ ತಾವು ಮಾಡುವ ಕೆಲಸದಲ್ಲಿ ಪ್ರತಿಫಲನಗೊಳ್ಳುತ್ತಿದೆ? ಎಂಬುದರ ಒಂದು ಅವಲೋಕನವನ್ನು
ಬೆಂಗಳೂರು ವಿ ವಿ ಸಮೂಹ ಸಂವಹನ ವಿದ್ಯಾರ್ಥಿ ಓಂಕಾರೇಶ್ ಮಾಡಿದ್ದಾರೆ

ಪ್ರಸ್ತುತ ಭಾರತದಲ್ಲಿ ಯಾವ ಯಾವ ಎಂಜಿನೀಯರಿಂಗ್ ಕೋರ್ಸ್‍ಗಳು ಲಭ್ಯವಿವೆ ಎಂದು ಒಮ್ಮೆ ನೋಡೋಣ. ಹಾಗೆಯೇ ಮೊದಲು ಎಂಜಿನೀಯರಿಂಗ್ ಪದವಿ ಕಲಿಯಲು ಹಾಗೂ ಈಗ ಎಂಜಿನೀಯರಿಂಗ್ ಕಲಿಯಲಿಕ್ಕೆ ಪ್ರೌಢ ಶಾಲಾ ಹಂತದಲ್ಲಿ ಯಾವ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ನೋಡೋಣ.
19ನೇ ಶತಮಾನದಲ್ಲಿ ಭಾರತದಲ್ಲಿ ಎಂಜಿನೀಯರಿಂಗ್ ಪದವಿಯನ್ನು ಪರಿಚಯಿಸಲಾಯ್ತು. ಆಗ ಬಿಎ ಪದವಿಯನ್ನು ಪೂರೈಸಿದವರು ಇಂಜಿನೀಯರಿಂಗ್ ಪದವಿಯನ್ನು ಆಯ್ಕೆ ಮಾಡಿಕೊಳ್ಳಬಹುದಿತ್ತು. ಬಿಎ ಪದವಿಯನ್ನು ಪೂರೈಸಿದವರು ಸಾಮಾನ್ಯವಾಗಿ ಗಣಿತ, ವಿಜ್ಞಾನ, ಜೀವಶಾಸ್ತ್ರ ಹೀಗೆ ವಿಷಯಗಳನ್ನು ಕಲಿತಿರುತ್ತಿದ್ದರು. ನಂತರದ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಾದ ಬದಲಾವಣೆಗಳಿಂದ ಪಿಯುಸಿಯಲ್ಲಿ ವಿಜ್ಞಾನದ ವಿಷಯವನ್ನು ಆಯ್ಕೆ ಮಾಡಿಕೊಂಡವರು ಇಂಜಿನೀಯರಿಂಗ್ ಪದವಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಎಂಜಿನೀಯರಿಂಗ್ ಕ್ಷೇತ್ರದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ.

ಮೊದಲು ಕೇವಲ ಸಿವಿಲ್ ಎಂಜಿನೀಯರಿಂಗ್ ವಿಷಯದಲ್ಲಿ ಪದವಿಯನ್ನು ನೀಡುತ್ತಿದ್ದರು. ಜಾಗತೀಕರಣದ ನಂತರ ಎಂಜಿನೀಯರಿಂಗ್ ಕ್ಷೇತ್ರದಲ್ಲಿ ಸಹ ಸಾಕಷ್ಟು ಬದಲಾವಣೆಗಳಾದವು. ಮೆಕ್ಯಾನಿಕಲ್ ಎಂಜಿನೀಯರಿಂಗ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಎಂಜಿನೀಯರಿಂಗ್, ಎಲೆಕ್ಟ್ರಿಕಲ್ ಎಂಜಿನೀಯರಿಂಗ್ ಎಂಬುದಾಗಿ ಒಟ್ಟು 7 ವಿಭಾಗಗಳಲ್ಲಿ ಕೋರ್ಸ್ ನೀಡಲು ಪ್ರಾರಂಭಿಸಿಲಾಗಿದೆ.

ಪ್ರಸ್ತುತ ಎಂಜಿನೀರಿಂಗ್ ಹಾಗೂ ಎಮ್‍ಬಿಬಿಎಸ್ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ಹಾಗೆಯೇ ಪದವಿ ಪಡೆದು ತೇರ್ಗಡೆ ಹೊಂದಿದ ಹಲವು ವಿದ್ಯಾರ್ಥಿಗಳಲ್ಲಿ ಅನೇಕ ನ್ಯೂನ್ಯತೆಗಳೂ ಇವೆ.
ಅಂಕಿ ಅಂಶ

2019ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಮಾಹಿತಿ ಹೀಗಿದೆ-

  • ಭಾರತದಿಂದ ಮೆಕ್ಯಾನಿಕಲ್ ವಿಭಾಗದಲ್ಲಿ 7,82,780 ವಿದ್ಯಾರ್ಥಿಗಳು
  • ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ 8,80,350 ವಿದ್ಯಾರ್ಥಿಗಳು
  • ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ 6,31,370 ವಿದ್ಯಾರ್ಥಿಗಳು,
  • ಸಿವಿಲ್ ಇಂಜನೀಯರಿಂಗ್ ವಿಭಾಗದಲ್ಲಿ 5,36,540 ವಿದ್ಯಾರ್ಥಿಗಳು * ಎಲೆಕ್ಟ್ರಿಕಲ್ ವಿಭಾಗದಲ್ಲಿ 3,94,150 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ
    ” ಇವರಲ್ಲಿ ಎಷ್ಟು ಜನ ತಮ್ಮ ಕಲಿಕೆಗೆ ತಕ್ಕುದಾದ ಉದ್ಯೋಗವನ್ನು ಪಡೆದುಕೊಂಡಿದ್ದಾರೆ ಎಂಬುದು ಸಮೀಕ್ಷೆಗೂ ಸಹ ನಿಲುಕದ ವಿಚಾರವಾಗಿದೆ.
  • ಕರೋನಾ ಸಂದರ್ಭದಲ್ಲಂತೂ ಉತ್ತಮ ಕೆಲಸದಲ್ಲಿರುವವರನ್ನೇ ತೆಗೆಯುವ ಪರಿಸ್ಥಿತಿ ಬಂದಿದೆ. ಇನ್ನು ಇಂಥದ್ದರಲ್ಲಿ ಕಂಪನಿಗಳು ಹೊಸಬರನ್ನು ಹೇಗೆ ತಾನೇ ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ?

ಕೋಡಿಂಗ್ ಕೌಶಲ್ಯ ತೀರಾ ಕಡಮೆ

ಪತ್ರಕರ್ತೆ ಕ್ಯಾಥರಿನಾ ಬುಚೋಲ್ಜ್ ಬರೆದಿರುವಂತೆ “ಭಾರತದಲ್ಲಿನ ಎಲ್ಲ ಸಾಫ್ಟ್ ವೇರ್ ಎಂಜಿನಿಯರ್ ಗಳ ಕೋಡಿಂಗ್ ಕೌಶಲ್ಯವನ್ನು ಪರೀಕ್ಷಿಸಿದಾಗ ಕೇವಲ 10%ನಷ್ಟು ಎಂಜಿನೀಯರಿಂಗ್ ಪದವೀಧರರು ಮಾತ್ರ ಕೋಡಿಂಗ್ ಕೌಶಲ್ಯವನ್ನು ಹೊಂದಿದ್ದಾರೆ.

ಅದರಲ್ಲೂ ಸಹ ಕೇವಲ ಶೇ. 3 ರಿಂದ 4 ರಷ್ಟು ಪದವೀಧರರು ಕಂಪನಿಗಳ ಬೇಡಿಕೆಗಳನ್ನು ಪೂರೈಸುವ ಪೂರ್ಣ ಕೌಶಲ್ಯಗಳನ್ನು ಹೊಂದಿದ್ದಾರೆ.” ಈ ಒಂದೇ ಒಂದು ಸಾಲಿನಲ್ಲಿ ಪ್ರಸ್ತುತ ಎಂಜಿನೀಯರುಗಳ ಕೌಶಲ್ಯ ನಮಗೆ ಅರ್ಥವಾಗುತ್ತದೆ. ಕೆಲವು ವರ್ಷಗಳ ಹಿಂದೆ ಅಮೇರಿಕಾದಂಥಹ ದೈತ್ಯ ರಾಷ್ಟ್ರಗಳೂ ಸಹ ಭಾರತೀಯ ಕಂಪ್ಯೂಟರ್ ಸೈನ್ಸ್ ಪದವೀಧರರನ್ನು ಸೆಳೆದುಕೊಳ್ಳುವ ಪ್ರಯಾಸಪಡುತ್ತಿದ್ದವು.

ಒಮ್ಮೆ ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು “ಭಾರತದ ಕಂಪ್ಯೂಟರ್ ಸೈನ್ಸ್ ಪದವೀಧರರು ಅತ್ಯಂತ ಕೌಶಲ್ಯವುಳ್ಳವರು, ಪ್ರತಿಭಾವಂತರು. ನಮ್ಮ ದೇಶದ ಎಂಜಿನೀಯರುಗಳೂ ಸಹ ಹಾಗೆ ಆಗಬೇಕು” ಎಂದು ಅಮೇರಿಕದ ಯುವಕರಿಗೆ ಕರೆ ಕೊಟ್ಟಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಅವರು ಈ ಮಾತನ್ನು ಹೇಳಿ ಸುಮಾರು 12 ವರ್ಷ ಆಗಿದೆ. ಕೇವಲ ಹನ್ನೆರಡೇ ವರ್ಷದಲ್ಲಿ ಎಲ್ಲವೂ ಬದಲಾಗಿ ಹೋಗಿದೆ.

ಕೋಡಿಂಗ್ ಕೊಡುಗೆ ಎಷ್ಟಿದೆ?

Engineer 1
  • ಭಾರತದ ಒಟ್ಟು ಸಾಫ್ಟವೇರ್ ಇಂಜನೀಯರುಗಳಲ್ಲಿ ಕೇವಲ ಶೇ 9.9 ಪ್ರತಿಶತದಷ್ಟು ಉದ್ಯೋಗಿಗಳು ಸರಿಯಾದ ಕೋಡಿಂಗ್ ಭಾಷೆ ಬರೆಯಬಲ್ಲವರಾಗಿದ್ದಾರೆ. ಈ ಪ್ರಮಾಣ ಚೀನಾದಲ್ಲಿ ಶೇ.8.6 ರಷ್ಟು ಪ್ರತಿಶತದಷ್ಟಿದ್ದರೆ, ಅಮೇರಿಕಾದಲ್ಲಿ ಶೇ. 34.1% ಪ್ರತಿಶತದಷ್ಟಿದೆ.
  • ಭಾರತದಲ್ಲಿ 52.5%ನಷ್ಟು ಉದ್ಯೋಗಿಗಳು ಸರಿಯಾದ ಕೋಡ್ ಬರೆಯುವಲ್ಲಿ ವಿಫಲರಾಗಿದ್ದರೆ
  • 37.7% ಪ್ರತಿಶತದಷ್ಟು ಜನರು ಯಾವುದೇ ಸಮಸ್ಯೆಯಿಲ್ಲದೇ ರನ್ ಆಗಬಹುದಾದ ಕೋಡಿಂಗ್ ಬರೆಯುವಲ್ಲಿ ವಿಫಲರಾಗಿದ್ದಾರೆ.
  • ಈ ಪ್ರಮಾಣ ಕ್ರಮವಾಗಿ ಚೀನಾದಲ್ಲಿ ಶೇ 81% ಮತ್ತು ಶೇ 10.4% ರಷ್ಟು ಇದ್ದರೆ ಅಮೇರಿಕಾದಲ್ಲಿ ಶೇ. 61.8% ಮತ್ತು ಶೇ 4.1% ಪ್ರತಿಶತದಷ್ಟಿದೆ. ಉದ್ಯೋಗಕ್ಕೆ ಅರ್ಹರರಲ್ಲ ಟೆಕ್ ಮಹೀಂದ್ರಾದ ಮುಖ್ಯಸ್ಥ ಸಿ.ಪಿ. ಗುರ್ನಾನಿ ಹೇಳುವಂತೆ “ಭಾರತದ ಎಂಜಿನೀಯರಿಂಗ್ ಪದವೀಧರರಲ್ಲಿ 94% ನಷ್ಟು ಪದವೀಧರರು ಕೌಶಲ್ಯ ಕೊರತೆಯ ಕಾರಣದಿಂದ ಉದ್ಯೋಗಕ್ಕೆ ಅರ್ಹರಲ್ಲ” ಎಂದಿದ್ದಾರೆ. ವಿದ್ಯಾರ್ಥಿಗಳೂ ಸಹ ತೇರ್ಗಡೆಯಾಗಿ ಹೊರಬರುತ್ತಿದ್ದಾರೆ ಎಂದೂ ಸಹ ಹೇಳಬಹುದು. ಅಲ್ಲೂ ಸಹ ಇದೇ ಪರಿಸ್ಥತಿ ಇದೆ. ಡಿಜಟಲ್ ಲರ್ನಿಂಗ್ ಆನ್‍ಲೈನ್ ಪೋರ್ಟಲ್ ಹೇಳುವಂತೆ “ಭಾರತದಲ್ಲಿ ಕನ್‍ಸ್ಟ್ರಕ್ಷನ್ ವಲಯ ಬೆಳೆಯಬೇಕಾದರೆ ಅತ್ಯಂತ ಕೌಶಲ್ಯವುಳ್ಳ ಸಿವಿಲ್ ಎಂಜಿನೀಯರ್ ಗಳು ಬೇಕಾಗಿದ್ದಾರೆ” ಎಂದು ಎಕನಾಮಿಕ್ ಟೈಮ್ಸ್ ಹೇಳಿದೆ. (ಕೃಪೆ :ಸ್ಟ್ಯಾಟಿಸ್ಟಾ ಆನ್‌ಲೈನ್ ಪೋರ್ಟಲ್)

ಭಾರತವು ಜಾಗತಿಕವಾಗಿ ಹೆಚ್ಚು ಪರಿಚಿತವಾಗಿರುವುದು ಐಟಿ ಉದ್ಯಮದಿಂದಲೇ ಹೊರತು ಬೇರೆ ಕ್ಷೇತ್ರಗಳಿಂದಲ್ಲ. ಹಾಗೆಯೇ ಬೇರೆ ಕ್ಷೇತ್ರಗಳಿಗೆ ಹೋಲಿಸಿದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಇರುವ ಬೇಡಿಕೆ ಎಲ್ಲೂ ಇಲ್ಲ. ಅದಕ್ಕೆಂದೇ ಅನೇಕ ಲಕ್ಷ ವಿದ್ಯಾರ್ಥಿಗಳು ಐಟಿ ಕ್ಷೇತ್ರವನ್ನು ಆರಿಸಿಕೊಳ್ಳುವುದು. ಈ ಕಾರಣದಿಂದ ಎಂಜಿನೀಯರಿಂಗ್ ಎಂಬ ಪದವಿ ಇದೊಂದು ಸಮೂಹ ಸನ್ನಿಯಂತೆ ಪ್ರತಿಯೊಬ್ಬರನ್ನೂ ಬಿಡದಂತೆ ಕಾಡುತ್ತಿದೆ. ಆದರೆ ಎಲ್ಲ ಎಂಜಿನೀಯರ್ ಕ್ಷೇತ್ರಗಳಲ್ಲಿಯೂ ಕೇಳಿ ಬರುತ್ತಿರುವ ಒಂದೇ ಮಾತು “ಹೆಚ್ಚಿನ ಕೌಶಲ್ಯ ಬೇಕು.” ಹಾಗಾಗಿ ಎಂಜಿನೀಯರಿಂಗ್ ಪದವಿ ಮಾಡಬೇಕೆಂದುಕೊಂಡಿರುವ ವಿದ್ಯಾರ್ಥಿಗಳು ಗಮನಿಸಬೇಕಾದ ಅಂಶವೇನೆಂದರೆ, ಎಂಜನೀಯರಿಂಗ್ ಓದು ಕೇವಲ ಪಠ್ಯಕ್ಕಷ್ಟೇ ಸೀಮಿತವಾಗಿದೆ. ಕೆಲವು ಜನ ಸಾಫ್ಟ್‌ವೇರ್ ಉದ್ಯೋಗಿಗಳು ಎಂಜನೀಯರ್ ಗ ಳೆಂದರೆ ಕೇವಲ ಐಟಿ ಕ್ಷೇತ್ರದವರು ಮಾತ್ರ ಅಲ್ಲವಲ್ಲ. ಬೇರೆ ಕ್ಷೇತ್ರದವರೂ ಇದ್ದಾರೆ ಎಂದು ಹೇಳಬಹುದು. ಪ್ರತಿ ವರ್ಷವೂ ಬೇರೆ ಎಂಜಿನೀಯರಿಂಗ್ ಕ್ಷೇತ್ರದಲ್ಲೇ ಪ್ರಾಯೋಗಿಕವಾಗಿಯೂ ಅದನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ‘ಔಟ್ ಆಫ್ ದ ಬಾಕ್ಸ್’ ಅಂದರೆ ವಿಭಿನ್ನ ರೀತಿಯಲ್ಲಿ ಯೋಚಿಸಿ ಕೌಶಲ್ಯವನ್ನು ಸಂಪಾದಿಸಬೇಕು” ಎನ್ನುತ್ತಾರೆ ಎಂಜಿನೀಯರ್ ಷಡಕ್ಷರಿಯವರು.

ಆದ್ದರಿಂದ ಕೌಶಲ್ಯಪೂರ್ಣವಾದ ಕಲಿಕೆ ಯಾವತ್ತಿಗೂ ನಮ್ಮ ಭವಿಷ್ಯಕ್ಕೆ ಬುನಾದಿಯಾಗಿಯಾಗಿರುತ್ತದೆ. ಕಲಿಯಲು, ಉದ್ಯೋಗ ಸಂಪಾದಿಸಲು ಅನೇಕ ಕ್ಷೇತ್ರಗಳಿವೆ. ಕೇವಲ ಎಂಜಿನೀಯರಿಂಗ್ ಒಂದೇ ಕ್ಷೇತ್ರವಲ್ಲ ಉದ್ಯೋಗ ಸಂಪಾದಿಸಲು ಇರುವ ದಾರಿ. ಕೆಲವು ವಿದ್ಯಾರ್ಥಿಗಳು ಪೋಷಕರ ಒತ್ತಾಯದಿಂದ ಎಂಜಿನೀಯರ್ ಪದವಿಗೆ ಪ್ರವೇಶವನ್ನೂ ತೆಗೆದುಕೊಂಡಿರಬಹುದು. ಆದರೆ ಅಂಥವರು ಭಾವನಾತ್ಮಕವಾಗಿ ಯೋಚಿಸುವದರ ಜೊತೆಗೆ ಭವಿಷ್ಯಾಥ್ಮಕವಾಗಿಯೂ ಯೋಚಿಸಬೇಕಾಗುತ್ತದೆ. ವಿದ್ಯಾರ್ಥಿಗಳೇ ಪೋಷಕರಿಗೆ ತಮ್ಮ ಇಷ್ಟದ ಕ್ಷೇತ್ರದ ಬಗ್ಗೆ ಮನವರಿಕೆ ಮಾಡಿಕೊಟ್ಟು ಅದರಲ್ಲಿ ಸಾಗುವ ಪ್ರಯತ್ನ ಮಾಡಬೇಕು.

ಓಂಕಾರೇಶ್

ಸಮೂಹ ಸಂವಹನ ವಿದ್ಯಾರ್ಥಿ

ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ

Share This Article
6 Comments