ಅಂಬಾನಿ ಮನೆ ಬಳಿ ಸ್ಫೋಟಕ ಇಟ್ಟಿದ್ದು ನಾವೇ- ಕೃತ್ಯದ ಹೊಣೆ ಹೊತ್ತ ಜೈಶ್-​​ಉಲ್ ಹಿಂದ್

Team Newsnap
1 Min Read

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಉದ್ಯಮಿ ಮುಕೇಶ್​ ಅಂಬಾನಿ ನಿವಾಸದ ಬಳಿ ಕಾರಿನಲ್ಲಿ ಪತ್ತೆಯಾಗಿದ್ದ ಸ್ಫೋಟಕಗಳನ್ನು ಇಟ್ಟಿದ್ದು ನಾವೇ ಎಂದು ಜೈಶ್​ ಉಲ್​ ಹಿಂದ್ ಕೃತ್ಯದ ಹೊಣೆ ಹೊತ್ತುಕೊಂಡಿದೆ.

ಟೆಲಿಗ್ರಾಮ್ ಆ್ಯಪ್​​ನಲ್ಲಿ ಸಂದೇಶ ರವಾನಿಸಿರುವ ಈ​​ ಸಂಘಟನೆ, ಇದು ಜಸ್ಟ್​ ಟ್ರೈಲರ್ ಮಾತ್ರ. ಮುಂದಿದೆ ಬಿಗ್​ ಪಿಕ್ಚರ್​ ಎಂದು ಬರೆದುಕೊಂಡಿದೆ. ಪೋಲಿಸರು ಮಾತ್ರ ಏನೂ ಹೇಳಿಲ್ಲ.

ಜೈಶ್​ ಉಲ್​​​ ಹಿಂದ್​ ಸಂಘಟನೆ ಕೃತ್ಯದ ಹೊಣೆ ಹೊತ್ತುಕೊಳ್ಳುವ ಜೊತೆಗೆ ಮಕೇಶ್ ಅಂಬಾನಿ ಬಳಿ ಬಿಟ್​​ಕಾಯಿನ್​ ಮೂಲಕ ಹಣ ನೀಡುವಂತೆ ಬೇಡಿಕೆ ಇಟ್ಟಿದೆ.

ಇಸ್ರೇಲ್​ ರಾಯಭಾರ ಕಚೇರಿ ಬಳಿ ನಡೆದ ಸ್ಫೋಟದ ತನಿಖೆಗೆ ರಾಷ್ಟ್ರೀಯ ತನಿಖಾ ದಳ, ಇಸ್ರೇಲ್​​ನ ಇಂಟೆಲಿಜೆನ್ಸ್​ ಏಜೆನ್ಸಿ ಮೊಸಾದ್​ನೊಂದಿಗೆ ಕೈಜೋಡಿಸಿದ್ದರೂ ಕೂಡ ಪ್ರಕರಣ ಬೇಧಿಸುವಲ್ಲಿ ವಿಫಲವಾಗಿದೆ ಎಂದು ಸವಾಲು ಹಾಕಿದೆ.

ಅಂಬಾನಿ ನಿವಾಸ ಬಳಿ ಪತ್ತೆಯಾಗಿದ್ದ ಸ್ಕಾರ್ಪಿಯೋ ವಾಹನದ ನಂಬರ್​ ಪ್ಲೇಟ್​, ಅವರ ಭದ್ರತಾ ಸಿಬ್ಬಂದಿ ಬಳಸುತ್ತಿದ್ದ ವಾಹನಗಳ ರೆಜಿಸ್ಟ್ರೇಷನ್​ ನಂಬರ್​ಗೆ ಹೋಲಿಕೆ ಹೊಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೊದಲು ಎಸ್​​​ಯುವಿ ವಾಹನವನ್ನು ಮಧ್ಯಾಹ್ನ 3 ಗಂಟೆ ವೇಳೆಗೆ ಗಮನಿಸಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಡೀ ಪ್ರದೇಶನವನ್ನು ಸುತ್ತುವರಿದು ಪಡೆದು ಪರಿಶೀಲನೆ ನಡೆಸಿದ್ದರು.

ಪೊಲೀಸರು ನೀಡಿರೋ ಮಾಹಿತಿ ಅನ್ವಯ ವಾಹನದಲ್ಲಿ ಸುಮಾರು 2.60 ಕೆಜಿಯಷ್ಟು ಸ್ಫೋಟಕಗಳು ಪತ್ತೆಯಾಗಿದೆ. ಅಂಬಾನಿ ನಿವಾಸದ ಎದುರು ಸ್ಕಾರ್ಪಿಯೋ ಕಾರು ನಿಲ್ಲಿಸಿದ ವ್ಯಕ್ತಿ ಮತ್ತೊಂದು ಇನ್ನೋವಾ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿರುವುದು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಇದರ ಅನ್ವಯ ಪೊಲೀಸರು ಇಬ್ಬರು ಶಂಕಿತರ ಬಂಧನಕ್ಕೆ ಬಲೆ ಬೀಸಿದ್ದಾರೆ.

Share This Article
Leave a comment