December 26, 2024

Newsnap Kannada

The World at your finger tips!

2be92adb 3d53 4b4a 86ab 841d2b1ea6bc

ಪಟಾಕಿ ಅಂಗಡಿಯಲ್ಲಿ ಸ್ಫೋಟ- ದೀಪಾವಳಿಗೆ ಖರೀದಿಗೆ ಬಂದಿದ್ದ ಐದು ಮಂದಿ ಸಾವು

Spread the love

ತಮಿಳುನಾಡಿನ ಕಲ್ಲಕುರುಚಿ ಜಿಲ್ಲೆಯ ಶಂಕರಪುರಂನಲ್ಲಿರುವ ಪಟಾಕಿ ಅಂಗಡಿಯೊಂದರಲ್ಲಿ
ಸಂಭವಿಸಿದ ಸ್ಫೋಟದಿಂದಾಗಿ ಐದು ಮಂದಿ ಸಾವನ್ನಪ್ಪಿದ್ದಾರೆ, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮಂಗಳವಾರ ರಾತ್ರಿ ಸಂಭವಿಸಿದ ಈ ಸ್ಫೋಟದಿಂದ ಉಂಟಾದ ಬೆಂಕಿ ಅಕ್ಕಪಕ್ಕದ ಅಂಗಡಿಗಳಿಗೂ ಹೊತ್ತಿಕೊಂಡಿದೆ. ಈ ವೇಳೆ ಸಿಲಿಂಡರ್ ಅಂಗಡಿಯಲ್ಲಿ ಸಿಲಿಂಡರ್ ಗಳೂ ಸ್ಫೋಟಗೊಂಡಿವೆ.

ದೀಪಾವಳಿ ಹಬ್ಬಕ್ಕಾಗಿ ಜನರು ಪಟಾಕಿ ಹಾಗೂ ಅಗತ್ಯ ವಸ್ತುಗಳನ್ನು ಖರೀದಿಸಲು ಅಂಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.

ಘಟನೆಯಲ್ಲಿ ಸುಟ್ಟಗಾಯಗಳಿಂದ ನರಳುತ್ತಿದ್ದ 10ಕ್ಕೂ ಹೆಚ್ಚು ಮಂದಿಯನ್ನು ಕಲ್ಲಕುರುಚಿ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಟಾಕಿ ಅಂಗಡಿ ಹಾಗೂ ಪಕ್ಕದ ಅಂಗಡಿಗಳಲ್ಲಿದ್ದ ಕಾರ್ಮಿಕರು, ಅಂಗಡಿಗಳಿಗೆ ಬಂದಿದ್ದವರು ಎಲ್ಲಿಯವರು ಎಂಬುದು ತಿಳಿದುಬಂದಿಲ್ಲ.

ಪಟಾಕಿ ಸ್ಫೋಟ ದುರಂತಕ್ಕೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೇ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ರು ಪರಿಹಾರವನ್ನು ಘೋಷಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!