ಮಂಡ್ಯ – ಕೆ ಆರ್ ಎಸ್ ಆಣೆಕಟ್ಟೆ ಭರ್ತಿ – ರೈತರಲ್ಲಿ ಹರ್ಷ

Team Newsnap
1 Min Read

ಕೆ.ಆರ್.ಸಾಗರ ಅಣೆಕಟ್ಟೆಯ
ನೀರಿನ ಮಟ್ಟ :124.04
ಒಳಹರಿವು : 13984
ಹೊರಹರಿವು : 3653
ಸಂಗ್ರಹ. : 48.391

ಮಂಡ್ಯ ಜಿಲ್ಲೆಯಲ್ಲಿ ಕೃಷ್ಣರಾಜ ಸಾಗರ ಆಣೆಕಟ್ಟೆ ಬಹುತೇಕ ಭರ್ತಿಯಾಗಿದೆ.

ಇಂದಿನ ನೀರಿನ ಮಟ್ಟವು 124.04 ಅಡಿ ಇದೆ. ಸಂಜೆ ವೇಳೆಗೆ ನೀರು ಗರಿಷ್ಠ ಮಟ್ಟ 124.80 ಅಡಿ ತಲುಪಲಿದೆ.

ಒಳ ಹರವಿನ ಪ್ರಮಾಣ ಬಹುತೇಕ 14000 ಕ್ಯುಸೆಕ್ ಇದೆ. ನೀರಿನ ಸಂಗ್ರಹ 48,391 TMC ಇದೆ.

ಜನರಿಗೆ ಎಚ್ಚರಿಕೆ:

ಕೃಷ್ಣರಾಜಸಾಗರ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಕೃಷ್ಣರಾಜಸಾಗರ ಜಲಾಶಯದಿಂದ ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಬಿಡಲಾಗುವುದು ಎಂದು ನದಿ ತೀರದ ಜನರಿಗೆ ನೀರಾವರಿ ನಿಗಮ ಎಚ್ಚರಿಕೆ ನೀಡಿದೆ

ಕೃಷ್ಣರಾಜಸಾಗರ ಜಲಾಶಯದಿಂದ ಸುಮಾರು 10,000ದಿಂದ 20,000 ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಬಿಡಲಾಗುವುದು. ಈ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದೆ.

ಕಾವೇರಿ ನದಿಯ ತಗ್ಗು ಪ್ರದೇಶದಲ್ಲಿ ಇರುವ ಮತ್ತು ನದಿಯ ಎರಡೂ ದಂಡೆಗಳಲ್ಲಿ ಇರುವ ಸಾರ್ವಜನಿಕರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ವಹಿಸಿ ಸೂಕ್ತ ಮುಂಜಾಗ್ರತೆ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ಹೋಗಲು ಸೂಚನೆ ನೀಡಿದೆ.

Share This Article
Leave a comment