ಇನ್ನೂ 2 ವರ್ಷಗಳ ಕಾಲ ಇಎಂಐ ಮುಂದೂಡಿಕೆಗೆ ಅವಕಾಶ : ಕೇಂದ್ರ

Team Newsnap
1 Min Read
Restrictions on 5 co-operative banks of the country including Maddur's Shimsha: Reserve Bank ಮದ್ದೂರಿನ ಶಿಂಷಾ ಸೇರಿ ದೇಶದ 5 ಸಹಕಾರಿ ಬ್ಯಾಂಕ್‌ಗಳಿಗೆ ನಿರ್ಬಂಧ : ರಿಸರ್ವ ಬ್ಯಾಂಕ್

ನವದೆಹಲಿ
ಸಾಲದ ಮೇಲಿನ ಕಂತು
ಮೊರಾಟೋರಿಯಂ (ಸಾಲದ ಕಂತು ಮುಂದೂಡಿಕೆ) ಯೋಜನೆಯನ್ನು ಇನ್ನೂ ಎರಡು ವರ್ಷಗಳ ಕಾಲ ಮುಂದೂಡಬಹುದು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ
ಸುತ್ತೋಲೆಯಲ್ಲಿ ತಿಳಿಸಿದೆ.

ಈ ಕುರಿತು ಕೇಂದ್ರ ಸರ್ಕಾರವು
ಮಂಗಳವಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.

ಕೊರೊನಾ ಲಾಕ್‌ಡೌನ್ ನಂತರ ಜನಸಾಮಾನ್ಯರ ಆರ್ಥಿಕ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು ರಿಸರ್ವ್‌ ಬ್ಯಾಂಕ್‌ ಮೊರಾಟೋರಿಯಂ ಸ್ಕೀಮ್‌ (ಕಂತುಗಳ ಮುಂದೂಡಿಕೆ) ಅನ್ನು
ಆ.31ರವರೆಗೆ ವಿಸ್ತರಿಸಿತ್ತು.
ಇದೀಗ ಅವಧಿ ಪೂರ್ಣಗೊಂಡಿದೆ ಮೊರಾಟೋರಿಯಂ ಅವಧಿ ವಿಸ್ತರಿಸಬೇಕು ಎಂಬ ಒತ್ತಾಯವೂ ಬಂದ ಹಿನ್ನೆಲೆಯಲ್ಲಿ ಇದೀಗ ಮೊರಾಟೋರಿಯಂ ಸ್ಕೀಂ ಅನ್ನು ಇನ್ನೂ ಎರಡು ವರ್ಷಗಳವರೆಗೆ ಮುಂದೂಡಲು ಅವಕಾಶವಿದೆ ಎಂದು ಕೇಂದ್ರ ತಿಳಿಸಿರುವುದು ಸಾಲಗಾರರಲ್ಲಿ ಸಂತಸ ಮೂಡಿಸಿದೆ.

ಆಗಸ್ಟ್ 31 ರವರೆಗೆ ಅಸ್ತಿತ್ವದಲ್ಲಿರುವ ಎಲ್ಲಾ ವೈಯಕ್ತಿಕ ಮತ್ತು ಕಾರ್ಪೊರೇಟ್ ಅವಧಿಯ ಸಾಲಗಾರರಿಗೆ ಆರು ತಿಂಗಳ ನಿಷೇಧವನ್ನು ನೀಡಲು ಕೇಂದ್ರ ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಗೆ ಅವಕಾಶ ನೀಡಿತ್ತು.

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್‌ನಲ್ಲಿ ಮಾಹಿತಿ ನೀಡಿದರು. ಅಲ್ಲದೆ, ಕೇಂದ್ರ ಸರ್ಕಾರವು ಕೇಂದ್ರ ಬ್ಯಾಂಕ್‌ (ಆರ್‌ಬಿಐ) ಮತ್ತು ಬ್ಯಾಂಕರ್‌ಗಳ ಸಂಘದೊಂದಿಗೆ ಚರ್ಚಿಸಿ ಮೊರಾಟೋರಿಯಂ ಸ್ಕೀಂ ಅವಧಿಯಲ್ಲಿ ಬಡ್ಡಿ ಮನ್ನಾ ಮಾಡುವ ಕುರಿತು ಅವಕಾಶ ನೀಡುವಂತೆ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಪ್ರಸ್ತುತ ಆರ್ಥಿಕತೆಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳಿವೆ, ಜಿಡಿಪಿ ಶೇ. 23 ರಷ್ಟು ಕುಸಿದಿದೆ ಮತ್ತು ದೇಶದ ಆರ್ಥಿಕತೆಯಲ್ಲಿ ಒತ್ತಡದ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರು.

Share This Article
Leave a comment