ಇಂದಿನಿಂದಲೇ ವಿದ್ಯುತ್ ದರ ಏರಿಕೆ : ಮತ್ತೆ ರಾಜ್ಯದ ಜನರಿಗೆ ಬೆಲೆ ಏರಿಕೆ ಶಾಕ್

Team Newsnap
2 Min Read
If the bill is not paid, the electricity will be cut! ಬಿಲ್ ಕಟ್ಟದಿದ್ದರೆ ಕರೆಂಟ್ ಕಟ್ !

ರಾಜ್ಯದಲ್ಲಿ ಬೆಸ್ಕಾಂ ಸೇರಿ 5 ಎಸ್ಕಾಂಗಳ ದರವನ್ನು ಏರಿಕೆ ಮಾಡಲಾಗಿದೆ. ಇಂದಿನಿಂದ ಅನ್ವಯವಾಗುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಇಂಧನ ಹೊಂದಾಣಿಕೆ ಶುಲ್ಕವನ್ನು ಹೆಚ್ಚಳ ಮಾಡಿ ಆದೇಶಿಸಿದೆ.

ಈ ವರ್ಷದಲ್ಲಿ ಮೂರು ಬಾರಿ ವಿದ್ಯುತ್ ದರ ಹೆಚ್ಚಳವಾಗಿದೆ.ಇದನ್ನು ಓದಿ –ಬಿಗ್ ಬಾಸ್ ಮಂಜು ಪಾವಗಡ ಸಹೋದರನಿಂದ ಯುವತಿಗೆ ಬ್ಲಾಕ್ ಮೇಲ್- ಜನರಿಂದ ಧರ್ಮದೇಟು


2013ರ ನಿಯಮದ ಪ್ರಕಾರ ನಿರ್ಧಿಷ್ಟಪಡಿಸಿದ ಸ್ಥಾವರಗಳಿಂದ ವಿದ್ಯುತ್ ಖರೀದಿ ಮಾಡುವಾಗ ಕಲ್ಲಿದ್ದಲು ವೆಚ್ಚ ಹೆಚ್ಚಳ ಅಥವಾ ಇಳಿಕೆ ಕಾಣುವಾಗ ಮೂರು ತಿಂಗಳಿಗೊಮ್ಮೆ ಎಸ್ಕಾಂಗಳ ಬೇಡಿಕೆಯಂತೆ ದರ ಏರಿಕೆ-ಇಳಿಕೆ ಮಾಡಬಹುದು.

ಈ ಬಾರಿ ಆಗಿರುವ ದರ ಏರಿಕೆ ತೀರಾ ಹೆಚ್ಚು ಅನ್ನುವ ಅಭಿಪ್ರಾಯ ಕೇಳಿಬಂದಿದೆ. ಅಲ್ಲದೇ ಎಸ್ಕಾಂಗಳು ಖರೀದಿ ಹೆಚ್ಚಳ ನೆಪ, ನಷ್ಟದ ನೆಪವನ್ನು ಒಡ್ಡುತ್ತಿದೆ. ಅಸಲಿಗೆ ಬೇರೆ ಮಾರ್ಗದಿಂದ ನಷ್ಟವನ್ನು ಸರಿತೂಗಿಸಬಹುದು. ಆದರೆ ಅದರ ಹತ್ತಿರ ಗಮನ ಹರಿಸದೇ ಕೇವಲ ದರ ಏರಿಕೆ ಮಾತ್ರ ಮಾಡಲಾಗುತ್ತಿದೆ ಎಂಬ ಟೀಕೆ ಬಂದಿದೆ.

ಪ್ರತಿ ಯೂನಿಟ್‌ಗೆ ಎಲ್ಲಿ ಎಷ್ಟು ಹೆಚ್ಚಳ?

  • ಬೆಸ್ಕಾಂ – 43 ಪೈಸೆ
  • ಸೆಸ್ಕಾಂ – 35 ಪೈಸೆ
  • ಹೆಸ್ಕಾಂ – 35 ಪೈಸೆ
  • ಜೆಸ್ಕಾಂ – 35 ಪೈಸೆ
  • ಮೆಸ್ಕಾಂ – 24 ಪೈಸೆ
    ಎಷ್ಟು ಏರಿಕೆ?

ಬೆಸ್ಕಾಂ ವ್ಯಾಪ್ತಿ ಒಂದು ಮನೆಗೆ 500 ರೂ. ಬರುತ್ತಿದ್ದರೆ 40 ರೂ. ಹೆಚ್ಚಳವಾಗಲಿದೆ. 1 ಸಾವಿರ ರೂ. ವಿದ್ಯುತ್ ಬಿಲ್ ಬರುತ್ತಿದ್ದರೆ ಇಂದಿನಿಂದ 1,080ರೂ. ಆಗಲಿದೆ.

ಇದನ್ನೂ ಎಷ್ಟು ಏರಿಕೆ?

ಬೆಸ್ಕಾಂ ವ್ಯಾಪ್ತಿ ಒಂದು ಮನೆಗೆ 500 ರೂ. ಬರುತ್ತಿದ್ದರೆ 40 ರೂ. ಹೆಚ್ಚಳವಾಗಲಿದೆ. 1 ಸಾವಿರ ರೂ. ವಿದ್ಯುತ್ ಬಿಲ್ ಬರುತ್ತಿದ್ದರೆ ಇಂದಿನಿಂದ 1,080ರೂ. ಆಗಲಿದೆ.ಮುರುಘಾ ಪೀಠಾಧಿಪತಿ ಸ್ಥಾನ ಶೂದ್ರರಿಗೆ ಬಿಟ್ಟು ಕೊಡಿ: ನಗರಸಭೆ ಮಾಜಿ ಅಧ್ಯಕ್ಷ ಕಾಂತರಾಜ್

ಎಷ್ಟು ಹೆಚ್ಚಳ?


2022 – ಏಪ್ರಿಲ್‌ನಲ್ಲಿ ಪ್ರತಿ ಯೂನಿಟ್‍ಗೆ 33 ಪೈಸೆ ಹೆಚ್ಚಳ ಮಾಡಲಾಗಿತ್ತು. ವಾರ್ಷಿಕವಾಗಿ ವಿದ್ಯುತ್ ದರ ಹೆಚ್ಚಳ ಕಾರಣ ನೀಡಲಾಗಿತ್ತು.

2022 – ಜೂನ್‌ನಲ್ಲಿ ಪ್ರತಿ ಯೂನಿಟ್‍ಗೆ 31 ಪೈಸೆ ಏರಿಕೆ ಮಾಡಲಾಗಿತ್ತು. ಇಂಧನ ಹೊಂದಾಣಿಕೆ ಶುಲ್ಕ ಎಂದು ಕಾರಣವನ್ನು ನೀಡಿತ್ತು.

ಈಗ ಇಂಧನ ಇಲಾಖೆ ನೀಡುತ್ತಿರುವ ಕಾರಣ ಏನು?


ಕಲ್ಲಿದ್ದಲು ಖರೀದಿ ವೆಚ್ಚದಲ್ಲಿ ಗಣನೀಯ ಏರಿಕೆಯಾಗಿದೆ. ಪ್ರತಿ 3 ತಿಂಗಳಿಗೊಮ್ಮೆ ಇಂಧನ ಹೊಂದಾಣಿಕೆ ಶುಲ್ಕ ಪರಿಷ್ಕರಣೆ ಮಾಡಬೇಕು. ಆದರೆ ಗ್ರಾಹಕರಿಗೆ ಹೊರೆ ಬೀಳಬಾರದು ಎಂಬ ಕಾರಣಕ್ಕೆ 6 ತಿಂಗಳಿಗೊಮ್ಮೆ ಶುಲ್ಕ ಹೆಚ್ಚಳ ಮಾಡಲಾಗುತ್ತಿದೆ. 2022 ಏ-ಜೂ.ವರೆಗೆ ಬೆಸ್ಕಾಂ ವ್ಯಾಪ್ತಿಯಲ್ಲಿ 643 ಕೋಟಿ ವಿದ್ಯುತ್ ಖರೀದಿ ಹೆಚ್ಚಳವಾಗಿದೆ.

ನಷ್ಟ ತಗ್ಗಿಸಲು ಏನು ಮಾಡಬೇಕು ?

  • ವಿದ್ಯುತ್ ಸೋರಿಕೆ ತಡೆಗಟ್ಟಬೇಕು. ಜಲವಿದ್ಯುತ್, ಸೌರಶಕ್ತಿ ವಿದ್ಯುತ್, ಪವನ ಶಕ್ತಿ ಬಳಕೆ ಹೆಚ್ಚಿಸಬೇಕು.
  • ಥರ್ಮಲ್ ಪವರ್ ಪ್ಲ್ಯಾಂಟ್‍ಗೆ ಮಾತ್ರ ಇಂಧನ ಇಲಾಖೆ ಅವಲಂಬಿತವಾಗಿದ್ದು ದೀರ್ಘಕಾಲಿಕವಾಗಿ ವಿದ್ಯುತ್ ಖರೀದಿ ಒಪ್ಪಂದ ಕೈಬಿಡಬೇಕು.
  • ರಾಜ್ಯ ಸರ್ಕಾರದ ಇಲಾಖೆ, ಕೇಂದ್ರದ ಇಲಾಖೆಗಳಿಂದ 6,670 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದು ಆ ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡಬೇಕು.
  • ಗುಣಮಟ್ಟದಲ್ಲಿ ವಿದ್ಯುತ್ ಸರಬರಾಜು, ಹೊಸ ಹೊಸ ತಂತ್ರಜ್ಞಾನ ಬಳಕೆ ಮಾಡಬೇಕು.

Share This Article
Leave a comment