- 2023 ಕ್ಕೆ ಪ್ರಯೋಗ ಯಶಸ್ವಿ
- ಸಿಂಧೂಜಾ ಉತ್ಪಾದನಾ ಯಂತ್ರದಿಂದ ಈಗ 100 ಕಿಲೋ ವ್ಯಾಟ್ ಉತ್ಪಾದನೆ
- ಐಐಟಿ ( ಮದ್ರಾಸ್ ) ಪ್ರಾಧ್ಯಾಪಕ ಅಬ್ದಸ್ ಸಮದ್ ನೇತೃತ್ವದ ಸಂಶೋದಕರ ತಂಡ
ಐಐಟಿ ಮದ್ರಾಸ್ ಶಕ್ತಿ ಸಂಚಲನಕ್ಕೆ ಹೊಸ ಸಾಧನವನ್ನ ಆವಿಷ್ಕರಿಸಿದ್ದಾರೆ. ಜಗತ್ತು ಹೈಸ್ಪೀಡ್ ವೇಗದಲ್ಲಿ ಸಾಗುತ್ತಿದೆ. ಈ ವೇಗಕ್ಕೆ ಅತೀ ಮುಖ್ಯವಾಗಿ ಬೇಕಾಗುವ ಶಕ್ತಿ ಅಂದರೆ ವಿದ್ಯುತ್. ಈ ಶಕ್ತಿ ಸಂಚಯನದಲ್ಲಿ ಕಡಿಮೆಯಾದ್ರೆ ದೇಶದ ಅರ್ಥ ವ್ಯವಸ್ಥೆಯೇ ಏರಳಿತವಾಗಬಹುದು. ಹೀಗಾಗೇ ಶಕ್ತಿ ಕ್ರೋಡಿಕರಿಸಲು ಹಲವಾರು ಮಾರ್ಗಗಳನ್ನು ಸಾಧನಗಳನ್ನು ಆವಿಷ್ಕರಿಸಲಾಗುತ್ತಿದೆ.
ಇದರ ಭಾಗವಾಗಿ ಐಐಟಿ ಮದ್ರಾಸ್‌ನ ಸಂಶೋಧಕರು ಮಹತ್ವದ ಸಾಧನೆ ಮಾಡಿದ್ದಾರೆ. ಪವನಶಕ್ತಿ, ಜಲಶಕ್ತಿ, ಸೌರಶಕ್ತಿಯಿಂದ ಕರೆಂಟ್ ಪಡೆದು ಬಳಸುತ್ತಿರುವಾಗ ಹೊಸದಾಗಿ ಶಕ್ತಿ ಪಡೆಯುವ ಸಾಧನವನ್ನ ಐಐಟಿ ಅಭಿವೃದ್ಧಿಪಡಿಸಿದೆ.
2030ರ ವೇಳೆಗೆ 500 GW ವಿದ್ಯುತ್ ಉತ್ಪಾದಿಸಬಹುದು
ಸಮುದ್ರದ ಅಲೆಯಿಂದ ವಿದ್ಯುತ್ ಉತ್ಪಾದನ ಯಂತ್ರ.. ಸಿಂಧೂಜಾ-I ಪ್ರಸ್ತುತ 100 ವ್ಯಾಟ್‌ಗಳಷ್ಟು ಶಕ್ತಿಯನ್ನು ಉತ್ಪಾದಿಸುವ ಶಕ್ತಿ ಹೊಂದಿದೆ. ಮುಂದಿನ ಮೂರು ವರ್ಷಗಳಲ್ಲಿ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೆಚ್ಚಿಸಲಾಗುವುದು. 2030 ರ ವೇಳೆಗೆ 500 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ.
ಐಐಟಿ ಮದ್ರಾಸ್‌ನಿಂದ ‘ಸಿಂಧುಜಾ-I’ ಉಪಕರಣ
ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- ಮದ್ರಾಸ್ ಸಂಶೋಧಕರು ಸಮುದ್ರದ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ ಉಪಕರಣವನ್ನು ಅಭಿವೃದ್ಧಿಪಡಿಸಿದ್ದಾರೆ. ಸಾಗರದ ಅಲೆಗಳನ್ನು ವಿದ್ಯುತ್ ಆಗಿ ಪರಿವರ್ತಿಸುವ ಉಪಕರಣಕ್ಕೆ ‘ಸಿಂಧುಜಾ-ಐ’ ಎಂದು ಹೆಸರಿಟ್ಟಿದ್ದಾರೆ. ಮಾತ್ರವಲ್ಲದೆ ತಮಿಳುನಾಡಿನ ತೂತುಕುಡಿ ಕರಾವಳಿಯ ಸುಮಾರು 6 ಕೀ.ಮೀ. ದೂರದಲ್ಲಿ ಸಾಗರದ 20 ಮೀಟರ್ ಆಳದಲ್ಲಿ ‘ಸಿಂಧುಜಾ–ಐ’ ಉಪಕರಣವನ್ನು ಪ್ರಾಯೋಗಿಕ ಪರೀಕ್ಷೆಗಾಗಿ ಅಳವಡಿಸಿದ್ದಾರೆ.
ಸಮುದ್ರದ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ ಉಪಕರಣ
ಐಐಟಿ ಮದ್ರಾಸ್‌ನ ಸಂಶೋಧಿಸಿದ ‘ಸಿಂಧುಜಾ-I’ ತೂತುಕುಡಿ ಕರಾವಳಿಯ ಸಾಗರದಲ್ಲಿ ಅಳವಡಿಸಿದ್ದಾರೆ. ಮೂರು ವರ್ಷಗಳಲ್ಲಿ ಸಮುದ್ರದ ಅಲೆಗಳಿಂದ ಒಂದು ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಸಂಶೋಧಕರು ಐಐಟಿ ಮದ್ರಾಸ್‌ನ ಸಂಶೋಧಕರು ಹೊಂದಿದ್ದಾರೆ. ಐಐಟಿ–ಎಂ ಪ್ರಾಧ್ಯಾಪಕ ಪ್ರೊ. ಅಬ್ದಸ್ ಸಮದ್ ಅವರ ನೇತೃತ್ವದ ಸಂಶೋಧಕರ ತಂಡವು ಈ ಉಪಕರಣ ಅಭಿವೃದ್ಧಿಪಡಿಸಲು ಒಂದು ದಶಕದಿಂದ ಶ್ರಮಿಸುತ್ತಿದೆ. 33 ವಾರಗಳ ಗರ್ಭಿಣಿಯ ಗರ್ಭಪಾತಕ್ಕೆ ಹೈಕೋರ್ಟ್ ಹಸಿರು ನಿಶಾನೆ : ತಾಯಿಯ ಆಯ್ಕೆಯೇ ಅಂತಿಮ – ಕೋರ್ಟ್ ಪ್ರತಿಪಾದನೆ
ದೇಶ ತನ್ನ ಸುತ್ತಮುತ್ತ 7 ಸಾವಿರದ 500 ಕಿಲೋ ಮೀಟರ್ ಉದ್ದದ ಕರಾವಳಿ ಹೊಂದಿದೆ. ಈ ಪೈಕಿ 54 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 2030ರ ವೇಳೆಗೆ ಹವಾಮಾನ ಬದಲಾವಣೆ ಸಂಬಂಧ ನವೀಕರಿಸಬಹುದಾದ ಇಂಧನ ಮೂಲದಿಂದ 500 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಸಾಧಿಸಲು ಈ ಸಿಂಧೂಜಾ ಐ ದೇಶಕ್ಕೆ ನೆರವಾಗಲಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
- ನವೆಂಬರ್ 11ರಿಂದ ಉಪ ಚುನಾವಣಾ ಕ್ಷೇತ್ರಗಳಲ್ಲಿ ಮದ್ಯ ಮಾರಾಟ ನಿಷೇಧ
- ಮಂಡ್ಯ : ಹಿಂದೂ ಸ್ಮಶಾನವನ್ನು ವಕ್ಫ್ ಆಸ್ತಿಯೆಂದು ಘೋಷಿಸಿದ ಪ್ರಕರಣ
- MUDA ಹಗರಣ: ನಾಳೆ ಬೆಳಿಗ್ಗೆ 10 ಗಂಟೆಗೆ ಲೋಕಾಯುಕ್ತ ವಿಚಾರಣೆಗೆ ಹಾಜರಾಗಲು ಸಿಎಂ ಸಿದ್ದರಾಮಯ್ಯ ನಿರ್ಧಾರ
- HDK – ನಿಖಿಲ್ ವಿರುದ್ಧ ಎಡಿಜಿಪಿ ಚಂದ್ರಶೇಖರ್ ದೂರು ದಾಖಲು
- ಚನ್ನಪಟ್ಟಣ ಉಪಚುನಾವಣೆ: ನಿಖಿಲ್ ಕುಮಾರಸ್ವಾಮಿ ಪರ ಪತ್ನಿ ರೇವತಿ ಪ್ರಚಾರದಲ್ಲಿ ಸಕ್ರಿಯ
More Stories
ಶೀಘ್ರದಲ್ಲೇ ಅಡುಗೆ ಎಣ್ಣೆಗಳ ಬೆಲೆ ಏರಿಕೆ ಸಾಧ್ಯತೆ
ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ
ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಶುದ್ಧೀಕರಣ : ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಉವಾಚ