ತಾಯಿಯ ಆಯ್ಕೆಯೇ ಅಂತಿಮವಾಗಿರುವುದರಿಂದ 33 ವಾರಗಳ ಗರ್ಭಿಣಿಯ ಗರ್ಭಪಾತಕ್ಕೆ ದೆಹಲಿ ಹೈಕೋರ್ಟ್ ಅಸ್ತು ಎಂದು ತೀರ್ಪು ನೀಡಿದೆ.
33 ವಾರಗಳ ಗರ್ಭಿಣಿಯ ಗರ್ಭಪಾತಕ್ಕೆ ದೆಹಲಿ ಹೈಕೋರ್ಟ್ ಅನುಮತಿ ನೀಡಿದ ನ್ಯಾ. ಪ್ರತಿಭಾ ಎಂ. ಸಿಂಗ್ ತಾಯಿಯ ಆಯ್ಕೆಯೇ ಅಂತಿಮವಾಗಿದೆ, ಅದರ ಆಧಾರದ ಮೇಲೆ ಅನುಮತಿ ನೀಡಲಾಗುತ್ತಿದೆ ಎಂದು ತೀರ್ಪಿನಲ್ಲಿ ಹೇಳಿದ್ದಾರೆ.ಕಬಡ್ಡಿಗಾಗಿ ತೊಡೆ ತಟ್ಟಿದ ಶಾಸಕ ಸಿ ಎಸ್ ಪುಟ್ಟರಾಜು!
26 ವರ್ಷದ ಮಹಿಳೆಯೊಬ್ಬರು ತಮ್ಮ ಗರ್ಭಾವಸ್ಥೆಯನ್ನು ವೈದ್ಯಕೀಯವಾಗಿ ಮುಕ್ತಾಯಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಪ್ರತಿಭಾ ಸಿಂಗ್, ಎನ್‌ಎನ್‌ಜೆಪಿ ಆಸ್ಪತ್ರೆ ವೈದ್ಯರ ಸಲಹೆ ಕೇಳಿದ್ದರು. ಆದರೆ ವರದಿಯಲ್ಲಿ ವೈದ್ಯರು ಗರ್ಭಪಾತವನ್ನು ತಿರಸ್ಕರಿಸಿದ್ದರು.
ನಂತರ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಮತ್ತು ಸ್ತ್ರೀರೋಗತಜ್ಞರಿಂದ ವರದಿ ಕೇಳಿದರು. ನರಶಸ್ತ್ರಚಿಕಿತ್ಸಕರು ಮಗುವಿಗೆ ಏನಾದರೂ ನ್ಯೂನತೆ ಇರುವ ಸಾಧ್ಯತೆಯಿದೆ, ಮಗುವಿನ `ಜೀವನದ ಗುಣಮಟ್ಟ’ವನ್ನು ಊಹಿಸಲು ಸಾಧ್ಯವಿಲ್ಲ ಎಂದು ವರದಿ ನೀಡಿದ್ದರು. ಆದರೆ ಮಗುವಿನ ಜನನದ ಬಳಿಕ ಸುಮಾರು 10 ವಾರಗಳ ನಂತರ ಕೆಲವು ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆ ನಡೆಸಬಹುದು ಎಂದು ತಿಳಿಸಿದ್ದರು.
ಈ ವರದಿ ಆಧರಿಸಿ ತೀರ್ಪು ನೀಡಿದ ನ್ಯಾ. ಪ್ರತಿಭಾ ಸಿಂಗ್, ಭಾರತದ ಕಾನೂನಿನಲ್ಲಿ ಮಹಿಳೆ ತಾನು ಗರ್ಭಾವಸ್ಥೆಯಲ್ಲಿ ಮುಂದುವರಿಯಬೇಕೆ ಅಥವಾ ಬೇಡವೇ ಎಂಬುದು ಅಂತಿಮವಾಗಿ ಅವರೇ ನಿರ್ಧರಿಸಬೇಕು. ಈ ರೀತಿಯ ಪ್ರಕರಣಗಳಲ್ಲಿ ಮಹಿಳೆಯ ತೀವ್ರ ಸಂದಿಗ್ಧತೆಯನ್ನು ಎತ್ತಿ ತೋರಿಸುತ್ತವೆ. ಆಧುನಿಕ ತಂತ್ರಜ್ಞಾನದ ಸಹಾಯದಿಂದ ಗರ್ಭಪಾತ ಮಾಡಬಹುದು ಎಂದು ಆದೇಶಿಸಿದರು.
- ಬೆಳ್ಳೂರು ಸಮೀಪ ಸಾರಿಗೆ ಬಸ್ ಗೆ ಕಾರು ಢಿಕ್ಕಿ : ನಾಲ್ವರ ಸಾವು
- 40 ಸಾವಿರ ರು ಲಂಚ ಸ್ವೀಕಾರ : ಲೋಕಾ ಬಲೆಗೆ ಬಿದ್ದ ಅಧಿಕಾರಿ
- ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಿ – ಪೋಲಿಸರಿಗೆ ಸಿಎಂ ಸಿದ್ದು ಕಿವಿಮಾತು
- ನಕಲಿ ಮುಖವಾಡದೊಳಗಿನ ಅಸಲೀ ಮುಖಗಳು..
- ಸೆ.28 ರಿಂದ 18 ದಿನಗಳವರೆಗೆ ತ. ನಾಡಿಗೆ ಮತ್ತೆ ನಿತ್ಯ 3 ಸಾವಿರ ಕ್ಯುಸೆಕ್ ನೀರು ಬಿಡಲು ಆದೇಶ – ರಾಜ್ಯಕ್ಕೆ ಶಾಕ್
- ನಟ ಬ್ಯಾಂಕ್ ಜನಾರ್ಧನ್ ಗೆ ಹೃದಯಾಘಾತ: ಐಸಿಯುನಲ್ಲಿ ಚಿಕಿತ್ಸೆ