ಅಶೋಕಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಕಾರ್ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯಾರೊಬ್ಬರಿಗೂ ಪ್ರಾಣಾಪಾಯವಾಗಿಲ್ಲ.
ಆದರೆ ಅಪಘಾತದ ಬಳಿಕ ಸಹಾಯಕ್ಕೆ ಬಂದ ಕಿರಣ್ ಹಾಗೂ ರವಿಗೆ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಇನ್ನೊಬ್ಬ ಡೆಲಿವರಿ ಬಾಯ್ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಕಾರು ಅಪಘಾತವಾದ ಬಳಿಕ ಅದರಲ್ಲಿದ್ದವರು ಸಹಾಯಕ್ಕೆ ಕೆಲ ಹುಡುಗರನ್ನು ಫೋನ್ ಮಾಡಿ ಕರೆದಿದ್ದರು. ಆದರೆ ಸ್ಥಳದಲ್ಲೇ ವಿದ್ಯುತ್ ತಂತಿಯೊಂದು ತುಂಡಾಗಿದ್ದುದು ಯಾರಿಗೂ ತಿಳಿದಿರಲಿಲ್ಲ. ಯುವಕರು ಸಹಾಯಕ್ಕೆ ಆಗಮಿಸಿ ಕಾರನ್ನು ಎತ್ತಲು ಮುಂದಾದಾಗ ವಿದ್ಯುತ್ ತಂತಿ ತುಳಿದು ನಾಲ್ವರಿಗೆ ವಿದ್ಯುತ್ ಶಾಕ್ ಹೊಡೆದಿತ್ತು.
ಈ ಘಟನೆಯಲ್ಲಿ ಕಿರಣ್ ಹಾಗೂ ರವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಡೆಲಿವರಿ ಬಾಯ್‌ನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಮದ್ದೂರಿನ ಸಾದೊಳಲಿನ ಮನೆಯಲ್ಲಿ ಹಾಡು ಹಗಲೇ ಕಳ್ಳತನ
ಅಶೋಕಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
More Stories
ಸರ್ಕಾರ ಗ್ಯಾರಂಟಿ ಹಣ ಪಾವತಿ ದಿನಾಂಕ ನಿಗದಿ ಮಾಡಲಿ – ನಿಖಿಲ್ ಕುಮಾರಸ್ವಾಮಿ
ಇಡ್ಲಿ ಪ್ರಿಯರಿಗೆ ಶಾಕ್ – ಪ್ಲಾಸ್ಟಿಕ್ ಬಳಕೆಯಿಂದ ಕ್ಯಾನ್ಸರ್ ಅಪಾಯ!
ಮಂಡ್ಯ: KSRTC ಬಸ್ ಚಕ್ರಕ್ಕೆ ತಲೆಕೊಟ್ಟು ಯುವಕ ಆತ್ಮಹತ್ಯೆ ಗೆ ಶರಣು