ವಿಧಾನಸಭಾ ಚುನಾವಣೆ ನಂತರವೇ ‘ BBMP’ ಗೆ ಎಲೆಕ್ಷನ್ ? 3 ತಿಂಗಳು ಕಾಲಾವಕಾಶಕ್ಕೆ ಕೋರ್ಟ್ ಮೊರೆ

Team Newsnap
1 Min Read

ವಿಧಾನಸಭಾ ಚುನಾವಣೆ ಬಳಿಕವೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ( B B M P ) ಚುನಾವಣೆ ನಡೆಯುವ ಸಾಧ್ಯತೆ ಇದೆ, ಸರ್ಕಾರವು ವಾರ್ಡ್ ವಾರು ಮೀಸಲು ನಿಗದಿಗಾಗಿ ಮತ್ತೆ ಸರ್ಕಾರ ಮೂರು ತಿಂಗಳು ಕಾಲಾವಕಾಶ ಕೋರಿ ಹೈಕೋರ್ಟ್ ನಲ್ಲಿ ಹೊಸ ಅರ್ಜಿ ಸಲ್ಲಿಸಿದೆ.

2022 ರ ಡಿಸೆಂಬರ್ ಅಂತ್ಯದೊಳಗೆ ಪಾಲಿಕೆಗೆ ಚುನಾವಣೆ ನಡೆಸಬೇಕೆಂದು ಏಕಸದಸ್ಯ ಪೀಠ ಹೊರಡಿಸಿದ್ದ ಅದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದೆ. ಬಿಬಿಎಂಪಿಯ ವಾರ್ಡ್ ಗಳಿಗೆ ಮೀಸಲಾತಿಯನ್ನು ನಿಗದಿಪಡಿಸಲು ಮೂರು ತಿಂಗಳು ಕಾಲಾವಕಾಶ ನೀಡಬೇಕೆಂದು ರಾಜ್ಯ ಸರ್ಕಾರ ಹೈಕೋರ್ಟ್ ಗೆ ಮಧ್ಯಂತರ ಅರ್ಜಿ ಸಲ್ಲಿಸಿದೆ.

ಡಿಸೆಂಬರ್ 30 ರೊಳಗೆ ಬಿಬಿಎಂಪಿ ಚುನಾವಣೆ ನಡೆಸಬೇಕು ಎಂದು ರಾಜ್ಯ ಚುನಾವಣಾ ಆಯೋಗ ಹೈಕೋರ್ಟ್ ಗೆ ಸೂಚನೆ ನೀಡಿತ್ತು, ಜೊತೆಗೆ ನ.30 ರೊಳಗೆ ಮೀಸಲಾತಿ ಹೊರಡಿಸುವಂತೆ ಸರ್ಕಾರಕ್ಕೆ ಆದೇಶಿಸಿತ್ತು. ಆಸ್ತಿ ಖರೀದಿಸಿದ 7 ದಿನದಲ್ಲೇ ಖಾತೆ ಬದಲಾವಣೆ ಕಡ್ಡಾಯ : ಸಚಿವ ಆರ್ ಅಶೋಕ್

ಈಗ ಸರ್ಕಾರದ ಅಟ್ವೊಕೇಟ್ ಜನರಲ್ ಕಳೆದ ಮಂಗಳವಾರ ಹೈಕೋರ್ಟ್ ಗೆ ಕಾಲಾವಕಾಶ ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.

Share This Article
Leave a comment