ಈ ಸಲ ಕಪ್ ನಮ್ದೇ ನಾ!?

Team Newsnap
2 Min Read
Team RCB


ಆರ್ಸಿಬಿ ಕಳೆದ ಹದಿಮೂರು ಆವೃತ್ತಿಗಳಲ್ಲಿ ಅಭಿಮಾನಿಗಳ‌ ನಿರೀಕ್ಷೆ ಉಳಿಸಿಕೊಳ್ಳುವಲ್ಲಿ ವಿಫಲವಾಗಿತ್ತು‌. ಆದರೆ ಈ ಬಾರಿ ಎಲ್ಲಾ ವಿಭಾಗಗಳಲ್ಲೂ ಸಮತೋಲನ ಕಾಯ್ದುಕೊಂಡ ಸದೃಢ ತಂಡವಾಗಿ ಕಣಕ್ಕಿಳಿಯುತ್ತಿದೆ‌. ಆರ್ಸಿಬಿ ಬಲಹೀನತೆಯಾಗಿದ್ದ ಬೌಲಿಂಗ್ ವಿಭಾಗ ಈ ಬಾರಿ ಚಾಹಲ್ ಜೊತೆಗೆ ಸ್ಟೈನ್, ಮೋರಿಸ್, ಜಂಪಾ ಸೇರ್ಪಡೆಯೊಂದಿಗೆ ಅತ್ಯಂತ ಬಲಿಷ್ಟವಾಗಿದ್ದು, ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಸೆ.21 ರಿಂದ ಕಣಕ್ಕಿಳಿಯುತ್ತಿದೆ.

ಪ್ಲಸ್ ಪಾಯಿಂಟ್‌ಗಳು

  1. ಆರ್ಸಿಬಿ ತಂಡದಲ್ಲಿ ವಿಶ್ವಶ್ರೇಷ್ಟ ಬ್ಯಾಟ್ಸ್ ಮನ್ ಗಳ‌ ದಂಡೇ ಇದೆ. ಕೊಹ್ಲಿ, ಎಬಿಡಿ, ಫಿಂಚ್, ಮೋಯಿನ್ ಅಲಿ ಸಿಡಿದರೆ ಎದುರಾಳಿ ತಂಡಗಳ ಬೌಲಿಂಗ್ ಪಡೆ ಧೂಳೀಪಟವಾಗುವುದು ಖಚಿತ.
  2. ಯುವ ಆಟಗಾರರು ಆರ್ಸಿಬಿ ತಂಡದ ಶಕ್ತಿ. ದೇವದತ್ ಪಡಿಕ್ಕಲ್, ಶಿವಂ ದುಬೆ, ಸುಂದರ್, ಗುರುಕೀರತ್ ಸಿಂಗ್, ಜೊಷುವಾ ಫಿಲಿಪ್ಪೆ ದೇಶಿ, ಅಂತಾರಾಷ್ಟೀಯ ಕ್ರಿಕೆಟ್ ನಲ್ಲಿ ಈಗಾಗಲೇ ಮಿಂಚು ಹರಿಸಿದ್ದು, ಕಪ್ ಕನಸಿಗೆ ಬಲ ತುಂಬಿದ್ದಾರೆ.
  3. ಮೋರಿಸ್ ಮತ್ತು ಸೈನಿ ಡೆತ್ ಓವರ್ ನಲ್ಲಿ ಪಂದ್ಯದ ಫಲಿತಾಂಶ ಬದಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಉಮೇಶ್- ಸ್ಟೈನ್ ಹೊಸ ಬಾಲ್ ಹಂಚಿಕೊಳ್ಳಲಿದ್ದಾರೆ. ಚಾಹಲ್ ಯುಎಇ ಅಂಗಳಲ್ಲಿ ಉತ್ತಮ ಬೌಲಿಂಗ್ ರೆಕಾರ್ಡ್ ಹೊಂದಿದ್ದು, ಆರ್ಸಿಬಿ ಬೌಲಿಂಗ್ ಪಡೆ ಹಿಂದೆಂದಿಗಿಂತಲೂ ಬಲಿಷ್ಟವಾಗಿ ಕಾಣುತ್ತಿದೆ.
  4. ಆಲ್ರೌಂಡರ್ಗಳು ತಂಡದ ಶಕ್ತಿ. ದುಬೆ, ಮೋರಿಸ್, ಸುಂದರ್, ಮೋಯಿನ್ ಅಲಿ, ಶಹಬಾಜ್ ಅಹ್ಮದ್ ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಕೊಡುಗೆ ನೀಡಬಲ್ಲರು‌. 8ನೇ ಕ್ರಮಾಂಕದ ವರೆಗೂ ಬ್ಯಾಟ್ಸ್ ಮನ್ ಗಳನ್ನು ಹೊಂದಿರುವುದು ತಂಡಕ್ಕೆ ವರದಾನವಾಗಲಿದೆ.
  5. ಸೈಮನ್ ಕಾಟಿಚ್, ಮೈಕ್ ಹಸನ್, ಗಾರ್ಡನ್ ಗ್ರಿಫಿತ್ ರಂತಹ ಜವಾಬ್ದಾರಿಯುತ ಕೊಚಿಂಗ್ ಪಡೆ ಹೊಂದಿದೆ.
RCB 1

ಆರ್ಸಿಬಿ ತಂಡದ ದೌರ್ಬಲ್ಯ

  1. ಆರ್ಸಿಬಿ ಒಂದು ತಂಡವಾಗಿ ಕಣಕ್ಕಿಳಿಯುವುದೇ ಇಲ್ಲ. ಪದೇಪದೆ ಪ್ಲೇಯಿಂಗ್ ಇಲವೆನ್ ಬದಲಾವಣೆ, ಕಳಪೆ ಆಟಗಾರರ ಆಯ್ಕೆ ಆರ್ಸಿಬಿ ದೌರ್ಬಲ್ಯ.
  2. ಪಿಚ್, ಆಟಗಾರರ ಸಾಮರ್ಥ್ಯ ಅರಿತು ತಂಡವನ್ನು ಮುನ್ನಡೆಸುವಲ್ಲಿ ಕೊಹ್ಲಿ ವಿಫಲತೆ
  3. ಮೊದಲ 2 ಪಂದ್ಯಗಳಿಗೆ ಇಂಗ್ಲೆಂಡ್ – ಆಸಿಸ್ ಆಟಗಾರರ ಅಲಭ್ಯತೆ
  4. ಬ್ಯಾಟಿಂಗ್ ವಿಭಾಗದಲ್ಲಿ ಕೊಹ್ಲಿ- ಎಬಿಡಿ ಮೇಲೆ ಅತಿಯಾಗಿ ಅವಲಂಬನೆ
  5. ಯುವ ಆಟಗಾರರ ಅನನುಭವ, ಮಿಡ್ಲ್ ಆರ್ಡರ್ ನಲ್ಲಿ ಸೂಕ್ತ ಬಿಗ್ ಹಿಟ್ಟರ್ ಗಳು ಇಲ್ಲದಿರುವುದು ತಂಡಕ್ಕೆ ಹಿನ್ನಡೆಯಾಗಬಹುದು.

Share This Article
Leave a comment