ಶಿವಸೇನಾ ಸಂಸದ ಸಂಜಯ್ ರಾವತ್ ಬಂಧಿಸಿದ ED ಅಧಿಕಾರಿಗಳು

Team Newsnap
1 Min Read
ED officials arrested Shiv Sena MP Sanjay Rawat

ಪತ್ರಾ ಚಾವ್ಲ್ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಭಾನುವಾರ ಶಿವಸೇನಾ ಸಂಸದ ಸಂಜಯ್ ರಾವತ್ ಅವರನ್ನು ಬಂಧಿಸಿದರು

1,034 ಕೋಟಿ ರುಗಳ ಪತ್ರಾ ಚಾವ್ಲ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ರಾವತ್ ಅವರನ್ನು ಈ ಹಿಂದೆ ಎರಡು ಬಾರಿ ವಿಚಾರಣೆ ನಡೆಸಿದ್ದರು.ಇದನ್ನು ಓದಿ -ಮನೆಯಲ್ಲೇ ಕುಳಿತು ಸಮಾವೇಶ ವೀಕ್ಷಿಸಿದ ದೇವೇಗೌಡರು – ಸ್ಕ್ರೀನ್​ ಮೇಲೆ ಅಪ್ಪನ ಕಂಡು ಕಣ್ಣೀರಿಟ್ಟ HDK

ದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಅಧಿವೇಶನವನ್ನು ಉಲ್ಲೇಖಿಸಿ ಹಿಂದಿನ ಸಮನ್ಸ್ ತಪ್ಪಿಸಿದ ನಂತರ ಸಂಜಯ್ ರಾವತ್ ಅವರನ್ನು ಜುಲೈ 27 ರಂದು ತನಿಖಾ ಸಂಸ್ಥೆಯು ಕರೆಸಿತ್ತು.

ಇಂದು ಬೆಳಗ್ಗೆ ಮುಂಬೈನ ಬಂಡಪ್‍ನಲ್ಲಿರುವ ರಾವತ್ ಅವರ ಮನೆಗೆ ತನಿಖಾ ಸಂಸ್ಥೆ ತಂಡವು ಸಿಆರ್‌ಪಿಎಫ್ ಅಧಿಕಾರಿಗಳ ಜೊತೆ ದಾಳಿ ನಡೆಸಿತ್ತು. ಇದೀಗ ರಾವತ್ ಅವರನ್ನು ಇಡಿ ಬಂಧಿಸಿದ್ದು, ಅವರ ನಿವಾಸದಿಂದ ಇಡಿ ಕಚೇರಿಗೆ ಕರೆದುಕೊಂಡು ಹೋಗುವ ನಿರೀಕ್ಷೆಯಿದೆ.

Share This Article
Leave a comment