ಡಿವೈಎಸ್ಪಿ ಲಕ್ಷ್ಮೀ ಆತ್ಮಹತ್ಯೆ ‌ಹಿಂದೆ ಗೆಳೆಯ ಮನೋಹರ್, ಮೂವರ ಕೈವಾಡದ ಶಂಕೆ?

Team Newsnap
2 Min Read
  • ತಂದೆ ವೆಂಕಟೇಶ್ ಅನೇಕ ಅನುಮಾನಗಳನ್ನು ವ್ಯಕ್ತಪಡಿಸಿ, ಲಕ್ಷ್ಮೀಗೆ ಯಾವುದೇ ಸಾಂಸಾರಿಕ ಸಮಸ್ಯೆ ಇರಲಿಲ್ಲ.‌
  • ಆತ್ಮಹತ್ಯೆ ಮಾಡಿಕೊಳ್ಳಲು ಆಕೆಗೆ ಮನೆ ಇದ್ದರೂ ಮನೋಹರ್ ಮನೆಯಲ್ಲಿ ನೇಣು ಹಾಕಿಕೊಳ್ಳಲು ಕಾರಣ ಏನು?
  • ಸಿಐಡಿ ಎಸ್ಪಿ ರಾಹುಲ್ ಸಾಹಪೂರ್ ಎಫ್ ಎಸ್ ಎಲ್ ತಂಡ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.‌
  • ಮರಣೋತ್ತರ ಪರೀಕ್ಷೆ ಹಾಗೂ ಎಫ್ ಎಸ್ ಎಲ್ ತಂಡ ನೀಡುವ ವರದಿಯಿಂದ ಸತ್ಯ ಬಯಲಿಗೆ
  • ಗಂಡ ನವೀನ್ ನಿಂದ ಹಾಗೂ ಪೋಷಕರಿಂದಲೂ ಲಕ್ಷ್ಮೀ ದೂರವಾಗಿ ಉಳಿದಿದ್ದರು ಎಂಬ ಮಾತುಗಳೂ ಕೇಳಿ ಬಂದಿವೆ.
  • ಈ ನಡುವೆ ಮನೋಹರ್, ಪ್ರಜ್ವಲ್ ಹಾಗೂ ಧರ್ಮೇಗೌಡ ನನ್ನು ವಶಕ್ಕೆ ಪಡೆದುಕೊಂಡು ಡ್ರಿಲ್ ಆರಂಭಿಸಿದ್ದಾರೆ.
  • ಲಕ್ಷ್ಮೀ ಕಾಲಿಗೆ ಏಟು ಮಾಡಿಕೊಂಡು ಕಳೆದ ನಾಲ್ಕು ತಿಂಗಳಿನಿಂದ ಆಫೀಸ್ ಗೆ ಹೋಗಿರಲಿಲ್ಲ .
  • ಲಕ್ಷ್ಮೀ ನಿನ್ನೆ ಸಂಜೆಯಿಂದ ಸಾಕಷ್ಟು ಜನರಿಗೆ ಫೋನ್ ಮೆಸೇಜ್ ಮಾಡಿದ್ದ ಲಕ್ಷ್ಮೀ ಫೋನ್ ವಶಕ್ಕೆ ಪಡೆದ ಪೋಲಿಸರು.
  • ಲಕ್ಷ್ಮೀ ಸಾವು ಅಸಹಜ ಎಂದು ಸಧ್ಯಕ್ಕೆ ಐಪಿಸಿ 174 (ಸಿ) ಪ್ರಕಾರ ಕೇಸು ದಾಖಲು.
  • ಮನೋಹರ್, ಪ್ರಜ್ವಲ್ ಸೇರಿದಂತೆ ಆರು ಮಂದಿ ಒಟ್ಟಿಗೆ ಪಾರ್ಟಿ ಮಾಡಿದ್ದರು. ಅಷ್ಟು ಮಂದಿ ಗಂಡಸರ ಜೊತೆ ಲಕ್ಷ್ಮೀ ಒಬ್ಬರೇ ಪಾರ್ಟಿ ನಡೆಸಿದ್ದೇಕೆ?

ಬಿಬಿಎಂಪಿ ಗುತ್ತಿಗೆದಾರ ಮನೋಹರ್ ಡಿವೈಎಸ್ಪಿ ಲಕ್ಷ್ಮೀ ಆತ್ಮಹತ್ಯೆಗೆ ಕಾರಣರಾಗಿದ್ದಾರೆಯೇ ಅಥವಾ ಅದೊಂದು ಕೊಲೆ ಎಂಬ ಅನುಮಾನ ವ್ಯಕ್ತವಾಗಿದೆ.

ಗುತ್ತಿಗೆದಾರ ಮನೋಹರ್, ಪ್ರಜ್ವಲ್, ಧರ್ಮೇಗೌಡ ಸೇರಿದಂತೆ ನಾಲ್ವರ ವಿರುದ್ಧ ಲಕ್ಷ್ಮೀ ತಂದೆ ವೆಂಕಟೇಶ್ ಅನ್ನಪೂರ್ಣೇಶ್ವರಿ ನಗರ ಪೋಲಿಸರಿಗೆ ದೂರು ನೀಡಿದ್ದಾರೆ.

ನಿಗೂಢ ಕಾರಣಗಳನ್ನು ತಮ್ಮ ಒಡಲೊಳಗೆ ಇಟ್ಟುಕೊಂಡು ಡಿವೈಎಸ್ಪಿ ಲಕ್ಷ್ಮೀ ಆತ್ಮಹತ್ಯೆಗೆ ಸಂಸಾರದಲ್ಲಿ ಯಾವುದೇ ತೊಡಕು ಇರಲಿಲ್ಲ. ಆದರೆ ಗೆಳೆಯ ಮನೋಹರ್ ಮೇಲೆ ನನಗೆ ಅನುಮಾನವಿದೆ ಎಂದು ವೆಂಕಟೇಶ್ ಹೇಳಿದ್ದಾರೆ.

ಈ ನಡುವೆ ಲಕ್ಷ್ಮೀ ಗಂಡ ನವೀನ್ ಜೊತೆ ಉತ್ತಮ ಬಾಂಧವ್ಯ ಇತ್ತು. ನನ್ನ ಮಗಳಿಗೆ ಇನ್ನೂ 33 ವರ್ಷ ಅಷ್ಟೆ. ಈ ವಯಸ್ಸಿನ ಅವಳ ಬ್ಯಾಚ್ ಮೆಟ್ ಗಳಿಗೆ ಇನ್ನೂ ಮದುವೆ ಕೂಡ ಆಗಿಲ್ಲ. ಹೀಗಾಗಿ ಆಕೆಗೆ ಮಕ್ಕಳಾಗುವ ಅವಕಾಶಗಳು ಇತ್ತು ಎಂದು ತಂದೆ ವೆಂಕಟೇಶ್ ಹೇಳುತ್ತಾರೆ.

Share This Article
Leave a comment