December 19, 2024

Newsnap Kannada

The World at your finger tips!

WhatsApp Image 2022 09 06 at 12.43.15 PM

ಸೆ.28 ರಿಂದ ಶ್ರೀರಂಗಪಟ್ಟಣದಲ್ಲಿ ವಿಜೃಂಭಣೆಯ ದಸರಾ ಆಚರಣೆ: DC ಅಶ್ವತಿ

Spread the love

ಶ್ರೀರಂಗಪಟ್ಟಣ ದಸರಾ ಉತ್ಸವ ಸೆಪ್ಟೆಂಬರ್ 28 ರಿಂದ ಅಕ್ಟೋಬರ್‌ 2 ರವರೆಗೆ ವಿಜೃಂಭಣೆ, ಪಾರಂಪರಿಕ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ಮಂಗಳವಾರ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಡಿಸಿ ಈ ಬಾರಿ ಐದು ದಿನಗಳ ಕಾರ್ಯಕ್ರಮ ನಡೆಯುತ್ತಿದ್ದು, ಇಲಾಖೆಗಳು ವೈವಿದ್ಯಮಯ, ಆಕರ್ಷಣೀಯ, ಸಾರ್ವಜನಿಕರಿಗೆ ಮಾಹಿತಿ ಹಾಗೂ ಮನರಂಜನೆಯುತವಾಗಿರುವ ಕಾರ್ಯಕ್ರಮವನ್ನು ಆಯೋಜಿಸುವಂತೆ ತಿಳಿಸಿದರು.

ಸೆಪ್ಟೆಂಬರ್ 28 ರಂದು ಜಂಬೂ ಸವಾರಿ ನಡೆಯುವ ಸ್ಥಳದಲ್ಲಿ ಬನ್ನಿಮಂಟಪದ ಸಣ್ಣ ಪುಟ್ಟ ರಿಪೇರಿಗಳಿದ್ದಲ್ಲಿ ಕೈಗೊಳ್ಳಬೇಕು. ಬನ್ನಿಮಂಟಪ, ಕಲ್ಯಾಣಿ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳ ಹಾಗೂ ಮೆರವಣಿಗೆ ಸಾಗುವ ಸ್ಥಳದ ಸ್ವಚ್ಛತೆ ಕೈಗೊಂಡು ಸಿಂಗಾರಗೊಳ್ಳಬೇಕು‌. ವಿವಿಧ ಕಲಾತಂಡಗಳು, ಕೃಷಿ, ತೋಟಗಾರಿಕೆ, ಮಹಿಳಾ ಹಾಗೂ ಇನ್ನಿತರ ಇಲಾಖೆಗಳ ಸ್ಥಬ್ದಚಿತ್ರಗಳು‌ ಮೆರವಣಿಗೆಯಲ್ಲಿ ಸಾಗಲಿದೆ ಎಂದರು.

ಯುವದಸರಾ :

ಯುವದಸರಾದಲ್ಲಿ ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ಉತ್ತಮ ಪ್ರದರ್ಶನ ನೀಡುವ ವಿದ್ಯಾರ್ಥಿಗಳ ತಂಡಗಳನ್ನು ಆಯ್ಕೆ‌ ಮಾಡಿ ಅವರಿಗೆ ಅವಕಾಶ ನೀಡಿದರೆ ಜಿಲ್ಲೆಯ ವಿದ್ಯಾರ್ಥಿಗಳ ಪ್ರತಿಭೆಗಳಿಗೆ‌ ಪ್ರೋತ್ಸಾಹ ನೀಡಬಹುದು. ಕಾರ್ಯಕ್ರಮವು ವಿವಿಧ ನೃತ್ಯ ವೈಖರಿಗಳಿಂದ ಕೂಡಿರಲಿ ಎಂದರು.

ಕ್ರೀಡಾ ದಸರಾ :

ಕ್ರೀಡಾ ದಸರಾದಲ್ಲಿ ಶ್ರೀರಂಗಪಟ್ಟಣ ತಾಲ್ಲೂಕು ಕ್ರೀಡಾಂಗಣದಿಂದ ಕರಿಘಟ್ಟದವರೆಗೆ ಮ್ಯಾರಥಾನ್, ಕರಿಘಟ್ಟ ಬೆಟ್ಟಕ್ಕೆ ಚಾರಣ, ಕೆಸರುಗದ್ದೆ ಓಡುವ ಸ್ಪರ್ಧೆ, ಹಗ್ಗ-ಜಗ್ಗಾಟ, ಕುಸ್ತಿ, ಖೋ-ಖೋ, ವಾಲಿ ಬಾಲ್, ಚೆಸ್ ಪಂದ್ಯಾವಳಿಗಳನ್ನು ಆಯೋಜಿಸಲು ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಳ್ಳಿ. ಶಾಲಾ-ಕಾಲೇಜುಗಳಿಗೆ ಮಾಹಿತಿ ನೀಡಿ, ನೊಂದಣಿ ಮಾಡಿಕೊಂಡು ಹೆಚ್ಚು ಕ್ರೀಡಾಪಟುಗಳು ಭಾಗವಹಿಸುವಂತೆ ಮಾಡಿ. ನಂದಿಬೆಟ್ಟದಲ್ಲಿ ಸುಲ್ತಾನ ಪೇಟೆಯ ಎರಡು ಕಡೆ ಗುಡ್ಡ ಕುಸಿತ : ಪ್ರವಾಸಿಗರಿಗೆ ತೊಂದರೆ ಇಲ್ಲ

ಯೋಗ ದಸರಾ:

ಯೋಗ ಗುಚ್ಛ, ಸರಳ ಯೋಗಾಸನಗಳು, ಯೋಗ ನೃತ್ಯ ರೂಪಕ, ಯೋಗ ನಡಿಗೆ ಸೇರಿದಂತೆ ಕಾರ್ಯಕ್ರಮ ಆಯೋಜಿಸಲು ತರಬೇತಿ ನೀಡುವಂತೆ ತಿಳಿಸಿದರು.

ಈ ಬಾರಿ ಹೊಸದಾಗಿ ಆಹಾರ ಮೇಳ ಆಯೋಜಿಸಬೇಕು. ಇದಕ್ಕಾಗಿ ಉತ್ತಮವಾಗಿ ಆಹಾರ ತಯಾರಕರು, ಚ್ಯಾಟ್ ಸ್ಟಾಲ್ ಗಳನ್ನು ಮಾಡಲು ಯೋಜನೆ ಮಾಡಿ ಎಂದರು.

ರೈತ, ಮಹಿಳಾ, ಉದ್ಯೋಗ ಮೇಳದ ಬಗ್ಗೆ ಚರ್ಚಿಸಲಾಯಿತು. ಕಾರ್ಯಕ್ರಮದ ಸ್ಥಳದಲ್ಲಿ ಸ್ವಚ್ಛತೆ, ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯದ ವ್ಯವಸ್ಥೆಗಳ ಬಗ್ಗೆ ಚರ್ಚಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು, ಜಿ. ಪಂ. ಉಪಕಾರ್ಯದರ್ಶಿ ಸರಸ್ವತಿ, ಉಪವಿಭಾಗಾಧಿಕಾರಿ
ಶಿವಾನಂದಮೂರ್ತಿ, ಆರ್.ಐಶ್ವರ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!