ಮೈಸೂರು ಮೇಯರ್ – ಉಪ ಮೇಯರ್ ಆಗಿ ಬಿಜೆಪಿಯ ಶಿವಕುಮಾರ್ , ರೂಪ ಆಯ್ಕೆ

Team Newsnap
1 Min Read

ಮೈಸೂರು ಮೇಯರ್ ಉಪ ಮೇಯರ್ ಸ್ಥಾನಗಳು ಬಿಜೆಪಿಗೆ ದಕ್ಕಿವೆ. ಮಂಗಳವಾರ ನಡೆದ ಚುನಾವಣೆಯಲ್ಲಿ ಕುತೂಹಲಕಾರಿ ಬೆಳವಣಿಗೆಗಳಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಮೇಯರ್ ಆಗಿ ಹಾಗೂ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರೂ ಜೆಡಿಎಸ್​ಗೆ ಉಪಮೇಯರ್ ವಿಚಾರದಲ್ಲಿ ತೀವ್ರ ಮುಖಭಂಗ ಆಗಿದೆ. ಉಪ ಮೇಯರ್ ಸ್ಥಾನವೂ ಕೂಡ ಬಿಜೆಪಿಗೆ ಸಿಕ್ಕಿದೆ.

ಜೆಡಿಎಸ್​ನಿಂದ ಬೆಂಬಲ ಸಿಕ್ಕಿದ್ದರಿಂದ ಎರಡನೇ ಬಾರಿಗೆ ಬಿಜೆಪಿಗೆ ಮೇಯರ್ ಪಟ್ಟ ಸಿಕ್ಕಿದೆ. ಜೆಡಿಎಸ್ ಸದಸ್ಯೆ ನಿರ್ಮಲಾ ಹರೀಶ್ ಕ್ರಾಸ್ ವೋಟಿಂಗ್ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ಪರ ಜೆಡಿಎಸ್ ಸದಸ್ಯೆ ವೋಟಿಂಗ್ ಮಾಡಿದರು. ಸಯ್ಯದ್ ಹಸ್ರತ್ ವುಲ್ಲಾಗೆ ಕಾಂಗ್ರೆಸ್​ನಿಂದ 26 ವೋಟ್​ಗಳು ಹಾಗೂ ಬಿಎಸ್ ​ಪಿ ಮತ್ತು ಜೆಡಿಎಸ್​ನಿಂದ ತಲಾ ಒಂದು ಮತಗಳು ಸಿಕ್ಕಿವೆ.

ಸೆ.28 ರಿಂದ ಶ್ರೀರಂಗಪಟ್ಟಣದಲ್ಲಿ ವಿಜೃಂಭಣೆಯ ದಸರಾ ಆಚರಣೆ: DC ಅಶ್ವತಿ

ಉಪಮೇಯರ್ ಸ್ಥಾನಕ್ಕೆ ಅರ್ಜಿ ಹಾಕಿದ್ದ ಜೆಡಿಎಸ್​ನ ರೇಷ್ಮಾಭಾನು ಅರ್ಜಿ ತಿರಸ್ಕೃತವಾಗಿದೆ. ನಾಮಪತ್ರ ತಿರಸ್ಕೃತವಾದ ಹಿನ್ನೆಲೆಯಲ್ಲಿ ಉಪಮೇಯರ್ ಸ್ಥಾನವನ್ನು ಜೆಡಿಎಸ್ ಕಳೆದುಕೊಂಡಿದೆ. ಮಾತ್ರವಲ್ಲ, ಬಿಜೆಪಿಗೇ ಉಪಮೇಯರ್ ಪಟ್ಟ ದಕ್ಕಿದೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೂ ಉಪಮೇಯರ್ ಸ್ಥಾನ ಸಿಗದಿರುವುದಕ್ಕೆ ಜೆಡಿಎಸ್​ಗೆ ಭಾರೀ ಮುಖಭಂಗವಾಗಿದೆ.

Share This Article
Leave a comment