ನಂದಿಬೆಟ್ಟದಲ್ಲಿ ಸುಲ್ತಾನ ಪೇಟೆಯ ಎರಡು ಕಡೆ ಗುಡ್ಡ ಕುಸಿತ : ಪ್ರವಾಸಿಗರಿಗೆ ತೊಂದರೆ ಇಲ್ಲ

Team Newsnap
1 Min Read

ಭಾರೀ ಮಳೆಗೆ ಚಿಕ್ಕಬಳ್ಳಾಪುರದ ನಂದಿ ಬೆಟ್ಟದ ಸುಲ್ತಾನಪೇಟೆ ಗ್ರಾಮದ ಕಡೆ ಎರಡು ಕಡೆ ಗುಡ್ಡಗಳು ಕುಸಿದೆ

ಸುಲ್ತಾನಪೇಟೆಯಿಂದ ನಂದಿಬೆಟ್ಟಕ್ಕೆ ತೆರಳುವ ಮೆಟ್ಟಿಲು ಮಾರ್ಗದ ಕಡೆ ವೀರಭದ್ರ ಸ್ವಾಮಿ ದೇಗುಲದ ಭಾಗದಲ್ಲಿ ಭೂ ಕುಸಿತ ಆಗಿದೆ. ಸುಲ್ತಾನಪೇಟೆ ಗ್ರಾಮದ ಕಡೆ ಮತ್ತದು ಭಾಗದಲ್ಲಿ ಭೂ ಕುಸಿತ ಆಗಿದೆ. ಬೃಹತ್ ಗಾತ್ರದ ಕಲ್ಲು ಬಂಡೆಗಳು ಮರಗಳು ಮಣ್ಣು ಸಮೇತ ಕೊಚ್ಚಿಕೊಂಡು ಬಂದಿವೆ.

ಈ ಗುಡ್ಡ ಕುಸಿತ ಉಂಟಾದ ಭಾಗದಿಂದ ಝರಿಯಂತೆ ನೀರು ಹರಿದುಬರುತ್ತಿದೆ. 2 ಕಡೆಗಳಲ್ಲಿ ಗುಡ್ಡ ಕುಸಿತವಾಗಿರುವುದರಿಂದ ಸುಲ್ತಾನಪೇಟೆ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ ಕಲ್ಲು ಬಂಡೆಗಳು ಉರುಳಿ ಗ್ರಾಮಕ್ಕೆ ಬರುವ ಭೀತಿಯಲ್ಲಿದ್ದಾರೆ. ಇದನ್ನು ಓದಿ – BJP ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಪ್ರಕರಣ – ರಾಜ್ಯದ 35 ಕಡೆ NIA ದಾಳಿ

2021ರ ಆಗಸ್ಟ್ 25ರಂದು ಸಹ ಇದೇ ರೀತಿ ಗುಡ್ಡ ಕುಸಿತ ಆಗಿತ್ತು. ಆ ಸಮಯದಲ್ಲಿ ರಸ್ತೆ ಮಾರ್ಗದಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿತ ಆಗಿತ್ತು. ಇದರಿಂದ ಕೆಲವು ತಿಂಗಳವರೆಗೂ ನಂದಿ ಬೆಟ್ಟಕ್ಕೆ ಹೋಗಲು ಪ್ರವಾಸಿಗರಿಗೆ ಅವಕಾಶವನ್ನು ನಿಷೇಧಿಸಲಾಗಿತ್ತು.

ಇದೀಗ ಮತ್ತೆ ಭಾರೀ ಮಳೆಗೆ ಈ ವರ್ಷವೂ ಎರಡು ಕಡೆ ಗುಡ್ಡ ಕುಸಿತವಾಗಿದೆ. ಆದರೆ ರಸ್ತೆ ಮಾರ್ಗದಲ್ಲಿ ಯಾವುದೇ ಭೂ ಕುಸಿತ ಆಗಿಲ್ಲ. ಹೀಗಾಗಿ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ. ಸುಲ್ತಾನಪೇಟೆ ಗ್ರಾಮದ ಕಡೆ ಭೂ ಕುಸಿತ ಆಗಿದೆ ಬೆಟ್ಟದಿಂದ ಹರಿದುಬರುತ್ತಿರುವ ನೀರು ಬೆಟ್ಟದ ಕೆಳಭಾಗದ ಜಮೀನುಗಳಿಗೆ ನುಗ್ಗಿದೆ. ಗ್ರಾಮಸ್ಥರಿಗೂ ಸಹ ಬಂಡೆಗಳು ಉರುಳಿಬರುವ ಆತಂಕ ಕಾಡುತ್ತಿದೆ.

ನಂದಿಬೆಟ್ಟ

Share This Article
Leave a comment