December 9, 2024

Newsnap Kannada

The World at your finger tips!

WhatsApp Image 2023 08 05 at 12.42.16 PM

ದೇವೀರಮ್ಮನ ದೇವಾಲಯಕ್ಕೆ ಡ್ರೆಸ್ ಕೋಡ್ :  ದೇವಸ್ಥಾನ ಆಡಳಿತ ಮಂಡಳಿ ಸೂಚನೆ

Spread the love

ದೇವೀರಮ್ಮನ ದೇವಸ್ಥಾನಕ್ಕೆ Dress Code ಆದೇಶ ಜಾರಿ ಮಾಡಲಾಗಿದೆ. ಸಾಂಪ್ರಾದಾಯಿಕ ಉಡುಗೆಯಲ್ಲಿ ಆಗಮಿಸಲು ಸೂಚನೆ ನೀಡಲಾಗಿದೆ. ದೇವಸ್ಥಾನ ಆಡಳಿತ ಮಂಡಳಿ ಈ ಸೂಚನೆಯನ್ನು ಹೊರಡಿಸಿದೆ.

ಚಿಕ್ಕಮಗಳೂರು ತಾಲೂಕಿನ ಬಿಂಡಿಗ ದೇವೀರಮ್ಮನ ದೇವಾಲಯದಲ್ಲಿ ಡ್ರೆಸ್​ ಕೊಡ್​ ಇದ್ದವರು ಮಾತ್ರ ಆಗಮಿಸಬಹುದು ಎಂದು ಹೇಳಲಾಗಿದೆ.

Dress Code ಕುರಿತು ಮಾಹಿತಿ ಇಲ್ಲಿದೆ ಗಮನಿಸಿ. ಈ ರೀತಿ ಉಡುಪು ಧರಿಸುವಂತಿಲ್ಲ

ಸ್ಕರ್ಟ್, ಮಿಡಿ, ಸ್ಲೀವ್ ಲೆಸ್ ಡ್ರೆಸ್, ಪ್ಯಾಂಟ್, ಸಾಕ್ಸ್ ಹಾಕಿ ದೇವಾಲಯಕ್ಕೆ ಬರುವಂತಿಲ್ಲ ಎಂಬ ಆದೇಶವನ್ನು ಹೊರಡಿಸಲಾಗಿದೆ. ಸಾಂಪ್ರದಾಯಿಕ ಉಡುಗೆಯನ್ನು ಮಾತ್ರ ತೊಟ್ಟು ಆಗಮಿಸಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

ದೇವಾಲಯದ ಆವರಣದೊಳಗೆ ಮೊಬೈಲ್ ಫೋನ್ ಗೂ ನಿಷೇಧ : ದೀಪಾವಳಿ ವೇಳೆ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ, ಆ ಸಂದರ್ಭದಲ್ಲಿ ಹೆಚ್ಚಿನ ಜನರು ಫೋಟೋ ತೆಗೆಯುತ್ತಾರೆ ಅಥವಾ ಮಾತನಾಡುತ್ತಾರೆ. ಇದರಿಂದಾಗಿ ಎಲ್ಲರಿಗೂ ತೊಂದರೆಯಾಗುತ್ತಿತ್ತು. ಅದರ ಸಲುವಾಗಿ ಈಗ ಮೊಬೈಲ್​ ಅನ್ನೂ ಸಹ ನಿಷೇಧ ಮಾಡಲಾಗಿದೆ. ಪ್ರತಿವರ್ಷ ಲಕ್ಷಾಂತರ ಭಕ್ತರು ದೇವೀರಮ್ಮನ ಬೆಟ್ಟ ಹತ್ತುತ್ತಾರೆ.

ಮಕ್ಕಳಿಂದ-ವೃದ್ಧರವರೆಗೂ ಬೆಟ್ಟ ಹತ್ತಿ ಬೆಟ್ಟದ ತಾಯಿಗೆ ಕೈಮುಗಿಯುತ್ತಾರೆ. ಯುವಕ-ಯುವತಿಯರು ಬರ್ತಾರೆ, ಅವರಲ್ಲಿ ಪ್ರೇಮಿಗಳು ಇರ್ತಾರೆ ಇದರಿಂದಾಗಿ ಈಗ ಹೊಸ ನಿಯಮವನ್ನು ಎಲ್ಲರೂ ಪಾಲಿಸುವಂತೆ ಸೂಚನೆ ನೀಡಲಾಗಿದೆ.

ಯಾರೇ ಬಂದರೂ ಸಾಂಪ್ರಾದಾಯಿಕ ಉಡುಗೆಯಲ್ಲೇ ಬರಬೇಕೆಂದು ದೇವಾಲಯ ಸೂಚನೆ ಹೊರಡಿಸಿದೆ. ಸೀರೆ ಲಂಗಾ ದಾವಣಿ ಅಥವಾ ಉದ್ದ ತೋಳಿನ ಚೂಡಿದಾರ್​ ವಿತ್ ಶಾಲ್​ ಅಲ್ಲಿಗೆ ಹೋಗಬಹುದು. ಹೊರತಾಗಿ ಬೇರೆ ರೀತಿಯ ಬಟ್ಟೆ ಧರಿಸುವಂತಿಲ್ಲ.ಗೃಹ ಜ್ಯೋತಿಯ ಉಚಿತ ವಿದ್ಯುತ್‌ ಸೌಲಭ್ಯ ಪಡೆಯಲು ಮೈಸೂರಿನ 7.13 ಲಕ್ಷ ಗ್ರಾಹಕರು ಸಿದ್ದ

ದೇವಾಯದ ಆವರಣದಲ್ಲಿ ಪ್ರೀ ವೆಡ್ಡಿಂಗ್ ಶೂಟ್, ರೀಲ್ಸ್ ಗೆ ಅವಕಾಶವಿಲ್ಲ ಎಂದು ಸಂದೇಶ ರವಾನೆ ಮಾಡಲಾಗಿದೆ. ಚಿಕ್ಕಮಗಳೂರು ತಾಲೂಕಿನ ಇತಿಹಾಸ ಪ್ರಸಿದ್ಧ ದೇವೀರಮ್ಮ ದೇಗುಲ ಈ ನಿಯಮಗಳಿಂದ ಕೂಡಿದೆ.

Copyright © All rights reserved Newsnap | Newsever by AF themes.
error: Content is protected !!