ಮೈಸೂರು : ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಿ ಒಂದು ಗೃಹ ಜ್ಯೋತಿ ಈ ತಿಂಗಳಿನಿಂದ ಅನುಷ್ಠಾನಕ್ಕೆ ಬರುತ್ತಿದ್ದು, ಮೈಸೂರು ಜಿಲ್ಲೆಯಲ್ಲಿ 7.13 ಲಕ್ಷ ಮಂದಿ ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
200ಕ್ಕಿಂತ ಕಡಿಮೆ ಯೂನಿಟ್ ವಿದ್ಯುತ್ ಬಳಸಿರುವ ನೋಂದಾಯಿತ ಫಲಾನುಭವಿಗಳಿಗೆ ಗೃಹಜ್ಯೋತಿ ಯೋಜನೆ ಪ್ರಯೋಜನ ದೊರೆಯಲಿದೆ. ಒಂದು ವರ್ಷದಲ್ಲಿ ಮನೆಯಲ್ಲಿ ಬಳಸಲಾಗಿರುವ ಸರಾಸರಿ ಯೂನಿಟ್ ಲೆಕ್ಕ ಮಾಡಿ ಆ ಸರಾಸರಿಯಲ್ಲಿ ಉಚಿತ ವಿದ್ಯುತ್ ಸೌಲಭ್ಯ ದೊರೆಯಲಿದೆ.
NRR ಮೊಹಲ್ಲಾ, VV ಮೊಹಲ್ಲಾದಲ್ಲಿ, ನಂಜನಗೂಡು, ಹುಣಸೂರು, KR.ನಗರ ವಿಭಾಗಗಳ ವ್ಯಾಪ್ತಿಯಲ್ಲಿ ಒಟ್ಟು 9,78,857 ಮನೆ ಬಳಕೆಯ ವಿದ್ಯುತ್ ಸ್ಥಾವರಗಳು (ಮೀಟರ್‌ಗಳು) ಇವೆ. ಇದರಲ್ಲಿ ಈವರೆಗೆ ಒಟ್ಟು 7,13,631 ಮೀಟರ್‌ಗಳ ಮಾಲೀಕರು ತಮ್ಮ ಹೆಸರನ್ನು ಗೃಹಜ್ಯೋತಿ ಯೋಜನೆಗಾಗಿ ನೋಂದಾಯಿಸಿಕೊಂಡಿದ್ದಾರೆ. ಹೀಗೆ ನೋಂದಾಯಿಸಿಕೊಂಡಿರುವವರ ಮೀಟರ್ ಕಳೆದ ಒಂದು ವರ್ಷದಲ್ಲಿ ಸರಾಸರಿಯಾಗಿ 200 ಮೀಟರ್ ಒಳಗೇ ಓಡಿದ್ದರೆ ಅವರೆಲ್ಲರೂ ಯೋಜನೆಯ ಸೌಲಭ್ಯ ಪಡೆಯಲಿದ್ದಾರೆ. ಒಂದು ವೇಳೆ ಮನೆಯ ಮೀಟರ್ ವರ್ಷದಲ್ಲಿ ಸರಾಸರಿ 200 ಯೂನಿಟ್ ಮೀರಿದ್ದರೆ ಅಂಥವರಿಗೆ ಯೋಜನೆ ಉಚಿತ ಸೌಲಭ್ಯ ದೊರೆಯಲಾರದು.
ಮೈಸೂರು ಮೀಟರ್ ನೋಂದಣಿ ವಿವರ
- ಮೈಸೂರು ತಾಲೂಕು – 5,05,841 ಮೀಟರ್
- ಮೀಟರ್ ನೋಂದಣಿ – 3,60,061
- ಶೇ.71.18ರಷ್ಟು ಮಂದಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ.
- ನಂಜನಗೂಡು ತಾಲೂಕು – 1,07,093 ಮೀಟರ್
- ಮೀಟರ್ ನೋಂದಣಿ – 81,860
- ಶೇ.76.44 ರಷ್ಟು ಮಂದಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ.
- ತಿ.ನರಸೀಪುರದಲ್ಲಿ 77,072 ಮೀಟರ್
- ಮೀಟರ್ ನೋಂದಣಿ – 59,768
- ಶೇ.77.55ರಷ್ಟು ಮಂದಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ.
- H.D.ಕೋಟೆ – 36,350 ಮೀಟರ್
- ಮೀಟರ್ ನೋಂದಣಿ – 26,606
- ಶೇ.73.19ರಷ್ಟು ಮಂದಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ.
- ಸರಗೂರಿನಲ್ಲಿ 31,737 ಮೀಟರ್
- ಮೀಟರ್ ನೋಂದಣಿ – 22,900
- ಶೇ.72.16 ರಷ್ಟು ಗು ಮಂದಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ.
- ಹುಣಸೂರು ತಾಲೂಕು – 83,779 ಮೀಟರ್
- ಮೀಟರ್ ನೋಂದಣಿ – 59,483
- ಶೇ.71ರಷ್ಟು ಮಂದಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ.
- K.R..ನಗರ – 41,917 ಮೀಟರ್
- ಮೀಟರ್ ನೋಂದಣಿ – 34,117
- ಶೇ.81.38ರಷ್ಟು ಮಂದಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ.
- ಸಾಲಿಗ್ರಾಮ – 28,003 ಮೀಟರ್
- ಮೀಟರ್ ನೋಂದಣಿ – 21642
- ಶೇ. 77.28ರಷ್ಟು ಮಂದಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ.
- ಪಿರಿಯಾಪಟ್ಟಣದಲ್ಲಿ 67065 ಮೀಟರ್
- ಮೀಟರ್ ನೋಂದಣಿ – 47194
- ಶೇ.70.37ರಷ್ಟು ಮಂದಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ.
ಹೆಚ್.ವಿಶ್ವನಾಥ ಪುತ್ರ ಅಮಿತ್ ಗೆ 1.99 ಲಕ್ಷ ಹಣ ವಂಚನೆ
ಒಟ್ಟಾರೆ ಜಿಲ್ಲೆಯಲ್ಲಿ ಶೇ.72.90ರಷ್ಟು ಮಂದಿ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ.
ಜೂನ್ 25ರೊಳಗೆ ಗೃಹಜ್ಯೋತಿ ಯೋಜನೆ ಸೌಲಭ್ಯ ಪಡೆಯಲು ಹೆಸರು ನೋಂದಾಯಿಸಿಕೊಂಡಿದ್ದರೆ ಆಗಸ್ಟ್ ತಿಂಗಳಲ್ಲಿ ಉಚಿತ ವಿದ್ಯುತ್ ಲಭಿಸಲಿದೆ. ಈ ತಿಂಗಳಿನಿಂದ ವಿದ್ಯುತ್ ಬಿಲ್ ಶೂನ್ಯವಾಗಿರಲಿದೆ. ಒಂದು ವೇಳೆ ಈ ಹಿಂದಿನ ಬಾಕಿ ಬಿಲ್ ಉಳಿಸಿಕೊಂಡಿದ್ದರಷ್ಟೇ ಶುಲ್ಕ ಪಾವತಿಸಬೇಕಾಗುತ್ತದೆ.
#electricbill #karnataka #newsnap #kannadanews #mandyanews #mysorenews #india #bestkannadanews
ಗೃಹ ಜ್ಯೋತಿ #ಗೃಹ ಜ್ಯೋತಿ
More Stories
ಧಾರವಾಡದ ಖಾಸಗಿ ಬಸ್ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 98 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಜಪ್ತಿ
ಕರ್ನಾಟಕ ಸರ್ಕಾರದಲ್ಲಿ ಐಎಎಸ್ ಅಧಿಕಾರಿಗಳ ವರ್ಗಾವಣೆ
ನವೆಂಬರ್ನಲ್ಲಿ KSRTC ಬಸ್ಗಳಲ್ಲಿ ‘ಕ್ಯಾಶ್ಲೆಸ್ ವ್ಯವಸ್ಥೆ’ ಜಾರಿ