ದ್ರೌಪದಿ ಮುರ್ಮು ರಾಷ್ಟ್ರದ ಶ್ರೇಷ್ಠ ರಾಷ್ಟ್ರಪತಿಯಾಗುತ್ತಾರೆ – ಪ್ರಧಾನಿ ಮೋದಿ ವಿಶ್ವಾಸ

Team Newsnap
3 Min Read

ದ್ರೌಪದಿ ಮುರ್ಮು ಶ್ರೇಷ್ಠ ರಾಷ್ಟ್ರಪತಿಯಾಗಿರುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ಅಧಿಕೃತವಾಗಿ ತನ್ನ ಅಭ್ಯರ್ಥಿ ಘೋಷಣೆ ಮಾಡಿದ್ದು, ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಜಾರ್ಖಂಡ್ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಲಾಗಿದೆ.

ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರು, ‘ಶ್ರೀಮತಿ ದ್ರೌಪದಿ ಮುರ್ಮು ಅವರು ಸಮಾಜ ಸೇವೆಗೆ ಮತ್ತು ಬಡವರು, ದೀನದಲಿತರು ಮತ್ತು ಅಂಚಿನಲ್ಲಿರುವವರ ಸಬಲೀಕರಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಅವರು ಶ್ರೀಮಂತ ಆಡಳಿತಾತ್ಮಕ ಅನುಭವವನ್ನು ಹೊಂದಿದ್ದಾರೆ ಮತ್ತು ಅತ್ಯುತ್ತಮ ಗವರ್ನಟೋರಿಯಲ್ ಅಧಿಕಾರವನ್ನು ಹೊಂದಿದ್ದರು. ಅವರು ನಮ್ಮ ರಾಷ್ಟ್ರದ ಶ್ರೇಷ್ಠ ರಾಷ್ಟ್ರಪತಿಯಾಗುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಅಂತೆಯೇ ಲಕ್ಷಾಂತರ ಜನರು, ವಿಶೇಷವಾಗಿ ಬಡತನವನ್ನು ಅನುಭವಿಸಿದ ಮತ್ತು ಕಷ್ಟಗಳನ್ನು ಎದುರಿಸಿದವರು.. ಅವರ ಜೀವನದಿಂದ ಹೆಚ್ಚಿನ ಶಕ್ತಿಯನ್ನು ಪಡೆಯುತ್ತಾರೆ. ದ್ರೌಪದಿ ಮುರ್ಮು ಅವರು ನೀತಿ ವಿಷಯಗಳ ಬಗ್ಗೆ ಅವರ ತಿಳುವಳಿಕೆ ಮತ್ತು ಸಹಾನುಭೂತಿಯ ಸ್ವಭಾವವು ನಮ್ಮ ದೇಶಕ್ಕೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

ದ್ರೌಪದಿ ಮುರ್ಮು ಯಾರು? ರಾಜಕೀಯ ಹಿನ್ನೆಲೆ ಏನು? ಇಲ್ಲಿದೆ ಸಂಕ್ಷಿಪ್ತ ಮಾಹಿತಿ :

ಬಿ.ಎ ಪದವೀಧರೆ ದ್ರೌಪದಿ ಮುರ್ಮು

20 ಜೂನ್ 1958 ರಂದು ಒಡಿಶಾ ದಲ್ಲಿ ಜನನ, ಬಿ.ಎ ಪದವೀಧರರಾದ ದ್ರೌಪದಿ, ರಾಯ್ ರಂಗಪುರ್ ದಲ್ಲಿರುವ ಶ್ರೀಅರಬಿಂದೋ ಕಾಲೇಜಿನಲ್ಲಿ ಗೌರವಾನ್ವಿತ ಸಹಾಯಕ ಪ್ರಾಧ್ಯಾಪಕಿಯಾಗಿದ್ದರು. ಒಡಿಶಾದ ನೀರಾವರಿ ಇಲಾಖೆಯಲ್ಲಿ ಜ್ಯೂನಿಯರ್ ಸಹಾಯಕ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿದರು. 1997ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.

ಪತಿ ಶ್ಯಾಮ್ ಚರಣ ಮುರ್ಮು ದಿವಂಗತರಾಗಿದ್ದು, ಇಬ್ಬರು ಪುತ್ರರು ದ್ರೌಪದಿ ಅವರನ್ನು ಅಗಲಿದ್ದಾರೆ. ಪುತ್ರಿ ಇತಿಶ್ರೀ ಮುರ್ಮು ಮಾತ್ರ ಜೊತೆಗಿದ್ದಾರೆ. 2017ರಲ್ಲಿ ದ್ರೌಪದಿ ವೈಯಕ್ತಿಕ 9. 5 ಲಕ್ಷ ರು ಆಸ್ತಿ ಘೋಷಿಸಿಕೊಂಡಿದ್ದರು.

ಒಡಿಶಾ ಮೂಲದ ದ್ರೌಪದಿ ಮುರ್ಮು ತಂದೆ ಬಿರಂಚಿ ನಾರಾಯಣ್ ಟುಡು. ದ್ರೌಪದಿ ಒಡಿಶಾದ ಮಾಜಿ ಸಚಿವೆ ಜಾರ್ಖಂಡ್ ರಾಜ್ಯದ ಮಾಜಿ ರಾಜ್ಯಪಾಲರಾಗಿದ್ದವರು. ಕೇಂದ್ರ ಸಚಿವೆಯಾಗಿದ್ದವರು. ಉತ್ತಮ ಶಾಸಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಪ್ರತಿಭಾ ಪಾಟೀಲ್ ನಂತರ ಎರಡನೇ ಮಹಿಳಾ ರಾಷ್ಟ್ರಪತಿ ಎನಿಸಲಿದ್ದಾರೆ. ಬುಡಕಟ್ಟು ಜನಾಂಗದ ಮಹಿಳೆ, ಒಡಿಶಾ/ಜಾರ್ಖಂಡ್ ಮೂಲದಿಂದ ಉನ್ನತ ಹುದ್ದೆಗೆ ಅಲಂಕರಿಸುವ ಮೊದಲ ಮಹಿಳೆ ಎನಿಸಿಕೊಳ್ಳಲಿದ್ದಾರೆ.

2007 ರಲ್ಲಿ ನೀಲಕಂಠ ಪ್ರಶಸ್ತಿ

ದ್ರೌಪದಿ ಮುರ್ಮು ತಮ್ಮ ನಿಸ್ವಾರ್ಥ ಜನಸೇವೆಯಿಂದಾಗಿ ಉತ್ತಮ ಶಾಸಕಿ ಎಂಬ ಪ್ರಶಸ್ತಿಯನ್ನೂ ಪಡೆದಿದ್ದರು.1997 ರಲ್ಲಿ ಅವರನ್ನು ಕೌನ್ಸಿಲರ್ ಆಗಿ ಆರಿಸಲಾಯಿತು. ನಂತರ ರಾಷ್ಟ್ರೀಯ ಸಲಹಾ ಸಮಿತಿಯ ಉಪಾಧ್ಯಕ್ಷರಾಗಿಯೂ ನೇಮಕಗೊಂಡರು. ಒಡಿಶಾದ ಶಾಸಕಿಯಾಗಿ ಆಯ್ಕೆಯಾಗಿದ್ದಲ್ಲದೆ, ಸಚಿವರಾಗಿಯೂ ಕರ್ತವ್ಯ ನಿಭಾಯಿಸಿದ್ದರು. 2002 ರಿಂದ 2009ರವರೆಗೆ ಬಿಜೆಪಿ ಪರಿಶಿಷ್ಟ ಪಂಗಡ ಮೋರ್ಚಾದ ರಾಷ್ಟ್ರೀಯ ಕಾರ್ಯನಿರ್ವಾಹಕ ಸದಸ್ಯರಾಗಿ ನೇಮಕಗೊಂಡರು.2007 ರಲ್ಲಿ ನೀಲಕಂಠ ಎಂಬ ಪ್ರಶಸ್ತಿಯನ್ನೂ ಪಡೆದರು.

16 ನೇ ರಾಷ್ಟ್ರಪತಿ ಚುನಾವಣೆ

16ನೇ ರಾಷ್ಟ್ರಪತಿ ಚುನಾವಣೆ ಜುಲೈ 18ರಂದು ನಡೆಯಲಿದ್ದು, ಜುಲೈ 21ರಂದು ಮತ ಎಣಿಕೆ ನಡೆಯಲಿದೆ. ನಾಮಪತ್ರಗಳ ಪರಿಶೀಲನೆಗೆ ಜೂನ್ 30 ಮತ್ತು ಉಮೇದುವಾರಿಕೆ ಹಿಂಪಡೆಯಲು ಜುಲೈ 2 ಕೊನೆಯ ದಿನಾಂಕವಾಗಿದೆ. ಭಾರತದ 15 ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸುತ್ತಿರುವ ರಾಮನಾಥ್ ಕೋವಿಂದ್ ಜುಲೈ 25, 2017 ರಂದು ಅಧಿಕಾರ ವಹಿಸಿಕೊಂಡಿದ್ದು, ಅವರ ಅವಧಿಯು ಜುಲೈ 24, 2022 ರಂದು ಕೊನೆಗೊಳ್ಳುತ್ತದೆ. NDA ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಹಾಗೂ ವಿಪಕ್ಷದ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಅಧಿಕೃತ ಅಭ್ಯರ್ಥಿಗಳಾಗಿದ್ದಾರೆ.

NDA ಅಧಿಕೃತ ಅಭ್ಯರ್ಥಿ ರಾಜಕೀಯ ಹಿನ್ನೆಲೆ

  • 1997ರಲ್ಲಿ ರಾಯ್ ರಂಗಪುರ್ ಜಿಲ್ಲೆಯ ಕೌನ್ಸಿಲರ್ ಆಗಿ ಆಯ್ಕೆ, ಉಪಾಧ್ಯಕ್ಷ ಸ್ಥಾನಕ್ಕೆ ಅದೇ ವರ್ಷ ಅಯ್ಕೆ
  • 2000ರ ಒಡಿಶಾ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾಗಿ ಸಾರಿಗೆ ಹಾಗೂ ವಾಣಿಜ್ಯ ಖಾತೆ ಸಚಿವೆಯಾಗಿದ್ದರು
  • ಒಡಿಶಾದ ಮೀನುಗಾರಿಕೆ ಸಚಿವೆಯಾಗಿ 2004ರ ತನಕ ಕಾರ್ಯ ನಿರ್ವಹಿಸಿದರು
  • ಮಯೂರ್ ಭಂಜ್ ಜಿಲ್ಲಾ ಬಿಜೆಪಿ ಅಧ್ಯಕ್ಷೆಯಾಗಿ 2002ರಿಂದ 2009ರ ತನಕ ಹುದ್ದೆ ನಿಭಾಯಿಸಿದರು.
  • 2004 ರಿಂದ 2009 ರ ತನಕ ರಾಯ್ ರಂಗಪುರ್ ಶಾಸಕಿಯಾಗಿದ್ದರು.
  • 2006ರಿಂದ 2009 ತನಕ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಅಧ್ಯಕ್ಷೆಯಾಗಿದ್ದರು.
  • 2015ರಲ್ಲಿ ಜಾರ್ಖಂಡ್ ರಾಜ್ಯಪಾಲರಾಗಿ ನಿಯುಕ್ತಿಗೊಂಡರು.
  • 2017ರಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಹೆಸರು ಪರಿಗಣಿಸಲಾಗಿತ್ತು.
  • 2022ರಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ NDA ಅಧಿಕೃತ ಅಭ್ಯರ್ಥಿ.

Share This Article
Leave a comment