ಅಕ್ಟೋಬರ್‌ ನಲ್ಲಿ ತಾ ಪಂ ‌, ಜಿ ಪಂ ‌ಚುನಾವಣೆಗೆ ಸಿದ್ದತೆ ?ಮೀಸಲಾತಿ, ಮತದಾರರ ಪಟ್ಟಿ ತಯಾರಿಗೆ ಸೂಚನೆ

Team Newsnap
1 Min Read
Election to Tripura Legislative Assembly today - 13 percent voting ತ್ರಿಪುರಾ ವಿಧಾನ ಸಭೆಗೆ ಇಂದು ಚುನಾವಣೆ - ಶೇ 13 ರಷ್ಟು ಮತದಾನ

ರಾಜ್ಯದ ತಾಲೂಕು ಪಂಚಾಯತ್‌ ಹಾಗೂ ಜಿಲ್ಲಾ ಪಂಚಾಯತ್‌ಗಳಿಗೆ ಅಕ್ಟೋಬರ್‌ ವೇಳೆಗೆ ಚುನಾವಣೆ ನಡೆಸುವ ಸಾಧ್ಯತೆಗಳು ಇವೆ ತಾ.ಪಂ-ಜಿ.ಪಂ ಸದಸ್ಯ ಕ್ಷೇತ್ರಗಳ ಗಡಿಗಳನ್ನು ನಿರ್ಣಯಿಸುವ ಕಾರ್ಯಕ್ಕೆ ನೇಮಿಸಲಾದ ಸೀಮಾ ನಿರ್ಣಯ ಆಯೋಗ 2021ರ ಅಕ್ಟೋಬರ್ ನಿಂದಲೇ ಕಾರ್ಯಾರಂಭ ಮಾಡಿದೆ.

ಕ್ಷೇತ್ರ ಮರುವಿಂಗಡಣೆ ಹಾಗೂ ಮೀಸಲಾತಿ ನಿಗದಿಗೆ ಹೈಕೋರ್ಟ್‌ 12 ವಾರಗಳ ಗಡುವು ನೀಡಿರುವ ಹಿನ್ನೆಲೆಯಲ್ಲಿ ಈ ಕೆಲಸಕ್ಕೆ ಮತ್ತಷ್ಟು ವೇಗ ನೀಡಲಾಗಿದೆ, ಹೊಸ ಮಾರ್ಗಸೂಚಿಗಳ ಪ್ರಕಾರ ಜಿಲ್ಲೆಗಳಿಂದ ಕರಡು ಪ್ರಸ್ತಾವನೆಗಳನ್ನು ತರಿಸಿಕೊಳ್ಳುತ್ತಿದೆ.

ಈಗಾಗಲೇ 20ಕ್ಕೂ ಹೆಚ್ಚು ಜಿಲ್ಲೆಗಳಿಂದ ತಾ.ಪಂ. ಜಿ.ಪಂ. ಕ್ಷೇತ್ರಗಳ ಗಡಿ ನಿರ್ಣಯಕ್ಕೆ ಸಂಬಂಧಿಸಿದ ಕರಡು ಪ್ರಸ್ತಾವನೆಗಳು ಸೀಮಾ ನಿರ್ಣಯ ಆಯೋಗಕ್ಕೆ ಜಿಲ್ಲಾಧಿಕಾರಿಗಳಿಂದ ಸಲ್ಲಿಕೆಯಾಗಿದೆ. ಇನ್ನೂ 10 ಜಿಲ್ಲೆಗಳಿಂದ ಕರಡು ಪ್ರಸ್ತಾವನೆ ಬರಬೇಕಿದೆ. , ಈ ತಿಂಗಳಾಂತ್ಯಕ್ಕೆ ಕ್ಷೇತ್ರಗಳ ಗಡಿಗಳ ಕರಡು ಪ್ರಕಟಿಸಲು ಸಿದ್ದತೆ ಮಾಡಲಾಗುತ್ತಿದೆ ಆಕ್ಷೇಪಣೆಗೆ 10 ದಿನ ಕಾಲಾವಕಾಶ ನೀಡಿದ ನಂತರ ಸಾರ್ವಜಕರ ಆಕ್ಷೇಪಣೆಗಳನ್ನು ಪರಿಶೀಲಿಸಿ ಲೋಪಗಳಿದ್ದರೆ ಸರಿಪಡಿಸುವ ಸಲುವಾಗಿ ಸೀಮಾ ನಿರ್ಣಯ ಆಯೋಗ ಎಲ್ಲಾ ಜಿಲ್ಲೆಗಳ ಪ್ರವಾಸ ಕೈಗೊಳ್ಳಲಿದೆ.

ಇದನ್ನು ಓದಿ – BJP – NDA ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಕಣಕ್ಕೆ ಜೆಪಿ ನಡ್ಡಾ ಘೋಷಣೆ

ಜುಲೈ ಅಂತ್ಯದ ವೇಳೆಗೆ ತಾ.ಪಂ-ಜಿ.ಪಂ ಕ್ಷೇತ್ರಗಳ ವ್ಯಾಪ್ತಿ ಅಂತಿಮಗೊಳ್ಳಲಿವೆ ಎಂದು ಹೇಳಲಾಗಿದೆ, ಈ ಕ್ಷೇತ್ರಗಳ ಮೀಸಲಾತಿಯನ್ನು ಸರ್ಕಾರ ನಿಗದಿಪಡಿಸಬಹುದು. ಇಲ್ಲವೆ ಸೀಮಾ ನಿರ್ಣಯ ಆಯೋಗಕ್ಕೆ ಅದನ್ನು ವಹಿಸಬಹುದು. ಕರಡು ಮೀಸಲಾತಿ ಪ್ರಕಟಿಸಿ ಆಕ್ಷೇಪಣೆಗಳಿಗೆ ಕನಿಷ್ಠ 15 ದಿನ ಕಾಲಾವಕಾಶ ನೀಡಿ ಆಕ್ಷೇಪಣೆಗಳು ಆಲಿಸಿದ ಬಳಿಕ ಅಂತಿಮ ಮೀಸಲಾತಿ ಪಟ್ಟಿ ಪ್ರಕಟವಾಗಲಿದೆ.

ಮೀಸಲಾತಿ ನಿಗದಿ ಕಾರ್ಯ ಅಂತಿಮಗೊಳ್ಳುವುದರೊಳಗೆ ಮತದಾರರ ಪಟ್ಟಿ ಸಿದ್ದಪಡಿಸುವ ಕೆಲಸ ಮುಗಿಯಲಿದೆ. ಮೀಸಲಾತಿ ಅಂತಿಮವಾದ ಬಳಿಕ ತಾ.ಪಂ. ಜಿ.ಪಂ.ಗಳಿಗೆ ಚುನಾವಣೆ ನಡೆಸಲು ಕನಿಷ್ಠ 45 ದಿನ ಬೇಕು. ಎಲ್ಲ ಜಿ.ಪಂ.-ತಾ.ಪಂ.ಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯಬೇಕಿದೆ. ಬಹುತೇಕ ಎರಡು ಹಂತಗಳಲ್ಲಿ ಚುನಾವಣೆಯನ್ನು ನಡೆಸುವ ಸಾಧ್ಯತೆ ಇದೆ.

Share This Article
Leave a comment