ಕರ್ನಾಟಕದ ಅಭಿವೃದ್ದಿಗೆ ‘ಡಬಲ್ ಎಂಜಿನ್ ಸರ್ಕಾರ’ ಮುಖ್ಯ ಎಂದ ಮೋದಿ

Team Newsnap
4 Min Read

50 ಲಕ್ಷ ಕಾರ್ಯಕರ್ತರ ಜೋತೆ ಮೋದಿ ವರ್ಚುವಲ್ ಕಾನ್ಫರೆನ್ಸ್‌

ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗುರುವಾರ ವರ್ಚುವಲ್ ಸಭೆ ನಡೆಸಿದ್ದಾರು ಬರೋಬ್ಬರಿ 50 ಲಕ್ಷ ಕಾರ್ಯಕರ್ತರು ಪಲುಗೊಂಡು, ಈ ಮೂಲಕ ತಮ್ಮ ಕಾರ್ಯಕರ್ತರಲ್ಲಿ ಮತ್ತಷ್ಟು ಉತ್ಸಾಹ ಹೆಚ್ಚಿಸಲು ಬಿಜೆಪಿ ಪ್ಲಾನ್.

50 ಲಕ್ಷ ಕಾರ್ಯಕರ್ತರ ಸಮ್ಮುಖದಲ್ಲಿ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಮೋದಿ, ಕರ್ನಾಟಕದಲ್ಲಿ ಲೋಕತಂತ್ರದ ಉತ್ಸವ ನಡೆಯುತ್ತಿದೆ. ಬಿಜೆಪಿ ಸದಾ ಚುನಾವಣೆಗಳನ್ನು ಲೋಕ ತಂತ್ರದ ಮಹೋತ್ಸವದಂತೆ ಆಚರಿಸುತ್ತದೆ. ರಾಜ್ಯದ ಸಮೃದ್ಧ ಪರಂಪರೆಯ ಪ್ರತಿನಿಧಿಗಳಾಗಿದ್ದಾರೆ. ನಮ್ಮ ಕಾರ್ಯಕರ್ತರು ಬಿಜೆಪಿಯನ್ನು ದಾಖಲೆಯ ಸ್ಥಾನಗಳಲ್ಲಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ನುಡಿದರು. ಸಿದ್ದರಾಮಯ್ಯ ಪರ ಸೊಸೆ ಮನೆ ಮನೆಗೆ ತೆರಳಿ ಮತಯಾಚನೆ

2 ದಿನಗಳ ನಂತರ ನಾನೂ ರಾಜ್ಯದ ಜನರ ದರ್ಶನಕ್ಕೆ, ಆಶೀರ್ವಾದಕ್ಕೆ ಬರುತ್ತಿದ್ದೇನೆ. ರಾಜ್ಯದಲ್ಲಿ ಎಲ್ಲೇ ಹೋದರೂ ಅಲ್ಲಿನ ಜನ ಹೃದಯ ಪೂರ್ವಕ ಆಶೀರ್ವಾದ ಮಾಡಿದ್ದಾರೆ. ಕರ್ನಾಟಕದ ಜನರ ವಿಶ್ವಾಸ ಬಿಜೆಪಿ ಮೇಲೆ ಎಷ್ಟಿದೆ ಎಂಬುದು ಎಲ್ಲರಿಗೂ ಗೊತ್ತು. ರಾಜ್ಯ ಬಿಜೆಪಿ ಘಟಕ ಇಷ್ಟೊಂದು ದೊಡ್ಡ ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನಾರ್ಹ ಎಂದು ಹಾಡಿ ಹೊಗಳಿದರು.

ಶಿವಮೊಗ್ಗದ ವಿರೂಪಾಕ್ಷಪ್ಪ ಅವರ ಕಾರ್ಯಕರ್ತರಿಗೆ ನಿಮ್ಮ ಸಲಹೆಗಳೇನು ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, ತಲಾ 10 ಮಹಿಳೆಯರು, 20 ಪುರುಷರ ತಂಡ ರಚಿಸಿ ಬೂತ್ ಮಟ್ಟದಲ್ಲಿ ಡಬಲ್ ಎಂಜಿನ್ ಸರ್ಕಾರದ ಸಾಧನೆ ತಿಳಿಸಿ. ಜನರ ಜೊತೆ ಒಡನಾಡಿಯಾಗಿ, ಕಷ್ಟ ಸುಖ ಕೇಳಿ, ಆತ್ಮೀಯವಾಗಿ ಮಾತನಾಡಿಸಿ. ಕೇಂದ್ರ, ರಾಜ್ಯ ಸರ್ಕಾರಗಳ ಯೋಜನೆಗಳ ಬಗ್ಗೆ ತಿಳಿಸಿ. ಅದರ ಫಲ ಸಿಕ್ಕಿದೆಯಾ ಅಂತ ಅಭಿಪ್ರಾಯ ಕೇಳಿ. ಬಿಜೆಪಿಗೆ ಮತ ಹಾಕುವಂತೆ ಪ್ರೇರೇಪಿಸಿ. ವಿರೋಧ ಪಕ್ಷದವರ ಅಜೆಂಡಾ ಅರ್ಥ ಮಾಡಿಕೊಂಡು ಕೆಲಸ ಮಾಡಿ. ಪೂರ್ಣಬಹುಮತ ಬಗ್ಗೆ ಜನರನ್ನು ಮನವರಿಕೆ ಮಾಡಿಸಿ. ಒಂದೇ ಸರ್ಕಾರದ ಮಹತ್ವ ಬಗ್ಗೆ ಅರ್ಥ ಮಾಡಿಸಿ ಎಂದು ಹೇಳಿದರು.

ಟ್ರ‍್ಯಾಕ್ಟರ್‌ಗೆ ಮಾರುತಿ ಕಾರು ಚಕ್ರ ಹಾಕಿದರೆ ಆ ಟ್ರ್ಯಾಕ್ಟರ್ ಸರಿಯಾಗಿ ಓಡುತ್ತಾ? ಇಲ್ಲ. ಒಂದೇ ತರಹದ ಚಕ್ರ ಇದ್ದರೆ ಮಾತ್ರ ಓಡುತ್ತದೆ. ಹಾಗೇಯೇ ಡಬಲ್ ಎಂಜಿನ್ ಸರ್ಕಾರ ಕೂಡಾ. ವಿಕಾಸದ ವೇಗ ಡಬಲ್ ಎಂಜಿನ್ ಸರ್ಕಾರದಲ್ಲಿ ಹೆಚ್ಚಾಗಿರುತ್ತದೆ ಎಂದು ಬಿಡಿಸಿ ಹೇಳಿದರು. KSRTC ಹಾಗೂ BMTC ಬಸ್ ಸಂಚಾರದಲ್ಲಿ ಮೇ 5 ರಿಂದ 13 ರವರೆಗೆ ವ್ಯತ್ಯಯ ಸಾಧ್ಯತೆ

ಬಿಜೆಪಿ ಯುವ ತಂಡ

ಬಿಜೆಪಿ ಯುವ ತಂಡ ರಚನೆಗೆ ಪ್ರಯತ್ನ ಮಾಡುತ್ತಿದೆ. ಕರ್ನಾಟಕಕ್ಕೆ, ಬೆಂಗಳೂರಿಗೆ ವಿಶ್ವದಲ್ಲಿ ಉತ್ತಮ ಹೆಸರಿದೆ. 2014 ರವರೆಗೆ ಏಮ್ಸ್ ಸಂಸ್ಥೆಗಳ ಸಂಖ್ಯೆ 7 ಇದ್ದವು. ನಾವು ಬಂದ ಮೇಲೆ 3 ಪಟ್ಟು ಏಮ್ಸ್ ಸಂಸ್ಥೆಗಳ ನಿರ್ಮಾಣ ಆಗಿದೆ. ಈಗ 20 ಏಮ್ಸ್ ಸಂಸ್ಥೆಗಳು ಇವೆ. ಆಗ ಫಲಾನುಭವಿಗಳ ಬಗ್ಗೆ ಯೋಚನೆ ಮಾಡುತ್ತಿರಲಿಲ್ಲ. ನಾವು ಫಲಾನುಭವಿಗಳ ಇಚ್ಚೆಗನುಸಾರ ಮನೆ ಕಟ್ಟಿಸಿಕೊಡುತ್ತಿದ್ದೇವೆ. ನೀರು, ವಿದ್ಯುತ್, ಅಡುಗೆ ಅನಿಲ ಎಲ್ಲವೂ ಸಿಗುತ್ತಿದೆ. ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಮೊದಲಿಗಿಂತ ಈಗ ಹೆಚ್ಚು ಸುಧಾರಣೆ ಆಗಿದೆ. ಕಾಂಗ್ರೆಸ್ ಖುದ್ದು ಭ್ರಷ್ಟಾಚಾರಿ ಪಕ್ಷ. 2014ರ ಬಳಿಕ ಭ್ರಷ್ಟಾಚಾರ ನಿಯಂತ್ರಣದಲ್ಲಿ ವೇಗ ವೃದ್ಧಿಸಿದೆ ಎಂದು ಹೇಳಿದರು.

modi

ಕಳೆದ 25 ವರ್ಷದಲ್ಲೇ ಮೆಡಿಕಲ್, ನರ್ಸಿಂಗ್ ಕಾಲೇಜುಗಳನ್ನು ನಿರ್ಮಿಸಿದ್ದರೆ ನಮಗೆ ಈಗ ವೈದ್ಯರ, ವೈದ್ಯ ಸಿಬ್ಬಂದಿಯ ಕೊರತೆ ಕಾಣಿಸುತ್ತಿರಲಿಲ್ಲ. ಉಚಿತ ಘೋಷಣೆಗಳ ಮೂಲಕ ಜನರನ್ನು ಮೂರ್ಖರನ್ನಾಗಿಸಲು ಕಾಂಗ್ರೆಸ್ ಹೊರಟಿದೆ. ಕಾಂಗ್ರೆಸ್ ಎಂದರೆ ಸುಳ್ಳಿನ ಗ್ಯಾರಂಟಿ. ಕಾಂಗ್ರೆಸ್ ಎಂದರೆ ಭ್ರಷ್ಟಾಚಾರದ ಗ್ಯಾರಂಟಿ. ಕಾಂಗ್ರೆಸ್ ವಾರಂಟಿ ಈ ಮೊದಲೇ ಮುಗಿದಿದೆ. ವಾರಂಟಿಯೇ ಇಲ್ಲದ ಪಕ್ಷದ ಗ್ಯಾರಂಟಿ ಏನು? ಎಂದು ಲೇವಡಿ ಮಾಡಿದರು. ತ್ರಿಕೋನ ಸ್ಪರ್ಧೆಯಲ್ಲಿ ಮದ್ದೂರು ವಿಧಾನಸಭಾ ಕ್ಷೇತ್ರ

ಕಾರ್ಯಕರ್ತರ ಪ್ರಶ್ನೆಗಳಿಗೆ ಮೋದಿ ಉತ್ತರ:

ಡಬಲ್ ಎಂಜಿನ್ (Double Engine) ಸರ್ಕಾರದ ಪ್ರಯೋಜನಗಳೇನು?

ಮೊಳಕಾಲ್ಮೂರು ಕಾರ್ಯಕರ್ತ ಫಕೀರಪ್ಪ ಅವರ ಡಬಲ್ ಎಂಜಿನ್ ಸರ್ಕಾರದ ಪ್ರಯೋಜನಗಳೇನು? ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, ಎರಡೂ ಕಡೆ ಒಂದೇ ಪಕ್ಷದ ಸರ್ಕಾರ ಇದ್ದರೆ ಅಭಿವೃದ್ಧಿಗೆ ಪೂರಕವಾಗುತ್ತದೆ. ಕಿಸಾನ್ ಸಮ್ಮಾನ್ ನಿಧಿಯಡಿ ಡಬಲ್ ಎಂಜಿನ್ ಸರ್ಕಾರಗಳಿಂದ ನೆರವು ಸಿಗುತ್ತಿದೆ. ಕೇಂದ್ರ, ರಾಜ್ಯ ಸರ್ಕಾರಗಳು ರೈತರಿಗೆ ಆರ್ಥಿಕ ನೆರವು ಕೊಡುತ್ತಿವೆ. ಒಂದು ವೇಳೆ ಇಲ್ಲಿ ಪಕ್ಷದ ಬೇರೆ ಸರ್ಕಾರ ಬಂದರೆ ಸದಾ ಜಗಳ ಆಡುತ್ತದೆ. ಇದರಿಂದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ತಿಳಿಸಿದರು.

ಆಜಾದಿ ಕಾ ಅಮೃತ ಕಾಲ ಅಂದರೇನು ?

ಬೆಂಗಳೂರಿನ ಕಾರ್ಯಕರ್ತ ಯೋಗೇಶ್ ಅವರ ಆಜಾದಿ ಕಾ ಅಮೃತ ಕಾಲ ಅಂದರೇನು ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, ” ಗಾಂಧೀಜಿ ಕ್ವಿಟ್ ಇಂಡಿಯಾ ಚಳವಳಿ ಶುರುಮಾಡಿದರು. ನಂತರ 1947 ರಲ್ಲಿ ನಮಗೆ ಸ್ವಾತಂತ್ರ ಸಿಕ್ಕಿತು. ಅದೇ ಪ್ರೇರಣೆಯಿಂದ ನಾವು ಆಜಾದಿ ಕಾ ಅಮೃತ ಮಹೋತ್ಸವ ಮಾಡುತ್ತಿದ್ದೇವೆ.” ಅಭಿವೃದ್ಧಿ ಹೊಂದಿದ ಭಾರತ ರೂಪಿಸುವ ಖಾತ್ರಿ ಕೊಡುತ್ತೇವೆ ಎಂದರು.

ಕರ್ನಾಟಕದ ಜನ ಕೋಡಿಂಗ್ ಸಹ ಮಾಡುತ್ತಾರೆ, ಕುವೆಂಪು ಸಾಹಿತ್ಯವನ್ನೂ ಓದುತ್ತಾರೆ

ವಿಜಯನಗರ ಕಾರ್ಯಕರ್ತ ಚಂದ್ರಶೇಖರ್ ಪ್ರಶ್ನೆಗೆ – ಉತ್ತರಿಸಿದ ಮೋದಿ, ಇತಿಹಾಸ, ಸಂಸ್ಕೃತಿ, ಆಧ್ಯಾತ್ಮಿಕತೆ, ಆಚಾರ ವಿಚಾರಗಳಲ್ಲಿ ಕರ್ನಾಟಕ ಸಮೃದ್ಧವಾಗಿದೆ. ಕರ್ನಾಟಕದ ಜನ ಭಕ್ತಿಯ ಶಕ್ತಿಯಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಕನ್ನಡ ಸಾಹಿತ್ಯ ಸಂಸ್ಕೃತಿ ಓದುವ ಪಾಲಿಸುವ ಸಂಸ್ಕೃತಿ ಇಲ್ಲಿದೆ. ಕರ್ನಾಟಕದ ಜನ ತಂತ್ರಜ್ಞಾನದ ಕೋಡಿಂಗ್ ಸಹ ಮಾಡುತ್ತಾರೆ, ಕುವೆಂಪು ಸಾಹಿತ್ಯವನ್ನೂ ಓದುತ್ತಾರೆ ಎಂದರು. ಶಿಂಷಾನದಿ ಪಾತ್ರದಲ್ಲಿ ಮರಳು ದಂಧೆ

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಮುಂದಿನ ಪೀಳಿಗೆಗೆ ಮಾರಕ

ದಕ್ಷಿಣ ಕನ್ನಡದ ಅರುಣ್ ಸೇಠ್ – ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ದೇಶದ ಭವಿಷ್ಯ, ಮುಂದಿನ ಪೀಳಿಗೆಗೆ ಮಾರಕ. ರಾಜನೀತಿಯನ್ನು ಕೆಲವರು ಭ್ರಷ್ಟಾಚಾರದ ಮಾರ್ಗ ಮಾಡಿಕೊಂಡಿದ್ದಾರೆ. ಉಚಿತ ಯೋಜನೆಗಳ ರಾಜಕಾರಣ ಭ್ರಷ್ಟಾಚಾರಕ್ಕೆ ದಾರಿಯಾಗಿದೆ. ಉಚಿತ ಯೋಜನೆಗಳ ಮೂಲಕ ದೇಶ, ಯುವ ಸಮೂಹದ ಭವಿಷ್ಯದ ಬಗ್ಗೆ ಚಿಂತೆ ಇಲ್ಲ. ಅವರಿಗೆ ಉಚಿತ ಘೋಷಣೆಗಳಿಂದ ಸರ್ಕಾರ ನಡೆಯಲ್ಲ ಎಂದರು.

ಡಬಲ್ ಎಂಜಿನ್ (Double Engine) ಸರ್ಕಾರ ಮತ್ತೆ ಬರಬೇಕು. ಬಹುಮತದ ಸರ್ಕಾರ ಕರ್ನಾಟಕದಲ್ಲಿ ಬರಬೇಕು. ಮುಂದಿನ 5 ವರ್ಷ ಸಶಕ್ತ ಕರ್ನಾಟಕ ಮಾಡುತ್ತೇವೆ. ಆದಿವಾಸಿ, ರೈತರು, ಎಲ್ಲ ದುರ್ಬಲ ವರ್ಗದವರೂ ಸಶಕ್ತರಾಗಬೇಕು. ಕರ್ನಾಟಕದ ವಿಕಾಸ ದೇಶದ ವಿಕಾಸ ಎಂದು ಮೋದಿ ನುಡಿದರು. 

Share This Article
Leave a comment