ಮಹಿಳೆಯರ ಮೇಲಿನ ಅಪರಾಧಗಳಿಗೆ ಕುರುಡಾಗದಿರಿ, ದನಿ ಎತ್ತಿ – ಮಾಜಿ ಸಂಸದೆ ರಮ್ಯಾ

Team Newsnap
1 Min Read
Apple Box Studios: A new film production company from actress Ramya ಆಪಲ್ ಬಾಕ್ಸ್ ಸ್ಟುಡಿಯೋಸ್ : ನಟಿ ರಮ್ಯಾರಿಂದ ಹೊಸ ಚಿತ್ರ ನಿರ್ಮಾಣ ಸಂಸ್ಥೆ

ಮೈಸೂರಿನಲ್ಲಿ ಕಳೆದ ಮಂಗಳವಾರ ರಾತ್ರಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ವನ್ನು ಮಾಜಿ ಸಂಸದೆ ರಮ್ಯಾ ಉಗ್ರವಾಗಿ ಖಂಡಿಸಿ ಟ್ವಿಟರ್ ನಲ್ಲಿ ತಮ್ಮ ಹೆಣ್ಣುತನದ ನಿಲುವುಗಳನ್ನು ಅಭಿವ್ಯಕ್ತಪಡಿಸಿದ್ದಾರೆ.

ramya1

ಪುರುಷನೊಬ್ಬ ಮಹಿಳೆಯ ಮೇಲೆ ಎಸಗುವ ಅಪರಾಧಕ್ಕೆ ಯಾವಾಗಲೂ ಮಹಿಳೆಯಾಗಿ ನಾವೇ ನಿಂದನೆ ಅನುಭವಿಸಬೇಕಾಗಿದೆ.
ಅದು ಅತ್ಯಾಚಾರವಾಗಿರಲಿ, ಅಥವಾ ದೈಹಿಕ, ಮಾನಸಿಕ ಕಿರುಕುಳ, ಬೈಗುಳವೆ ಆಗಿರಲಿ..

ನಾವು ಯಾವಾಗಲೂ ಕೇಳುವ ಪದ ಅದು ನಿನ್ನ ತಪ್ಪು, ನೀನು ಹಾಗೆ ಹೇಳಬಾರದಿತ್ತು, ನೀನು ಹಾಗೆ ಮಾಡಬಾರದಿತ್ತು, ಅದನ್ನು ಧರಿಸಬಾರದಿತ್ತು, ತುಂಬಾ ಟೈಟ್, ತುಂಬಾ ಚಿಕ್ಕದು, ತುಂಬಾ ಆಕರ್ಷಕ, ತುಂಬಾ ಉದ್ದದ್ದು, ಸಂಜೆ ನಂತರ ನೀನು ಹೊರಹೋಗ ಬಾರದು, ನೀನು ಯಾವಾಗಲೂ ಹೊರಗೆ ಹೋಗಲೇಬಾರದು, ಮೇಕಪ್ ಮಾಡಿಕೊಳ್ಳಬಾರದು, ಕೆಂಪು ಲಿಪ್ ಸ್ಟಿಕ್ ಏಕೆ? ಮುಖದಲ್ಲಿ ಮಿಂಚು ಏಕೆ? ನೀನು ಕಣ್ಣು ಮಿಟುಕಿಸಬಾರದು(?!) ನೀನು ಅದನ್ನು ಇಟ್ಕೊಬಾರದು, ಇದನ್ನು ಇಟ್ಕೊಬಾರದು… ಏಕೆ? ಏಕೆಂದರೆ ಪುರುಷರು ಏನು ಮಾಡಿದರೂ ನಡೆಯುತ್ತದೆ. ನಾವು ಮಹಿಳೆಯರು ಹೊಂದಾಣಿಕೆ ಮಾಡಿಕೊಳ್ಳಬೇಕು, ನಾವು ಬದಲಾಗಬೇಕು, ನಾವು ಅಡ್ಜೆಸ್ಟ್ ಮಾಡಿಕೊಳ್ಳಬೇಕು, ನಾವು ಸುಮ್ಮನಿರಬೇಕು.. ಇಲ್ಲ, ಇಲ್ಲ!
ಈ ನಾನ್ ಸೆನ್ಸ್ ಗೆ ಕೊನೆಹಾಡಿ.

ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಇದನ್ನು ಮಾಡಿದ್ದೇನೆ, ನನ್ನ ಸ್ನೇಹಿತರು ಕೂಡ. ನಿಂದನೆ ಅನುಭವಿಸಿದ್ದೇನೆ. ಆದರೆ ನಿಮಗೆ ಗೊತ್ತಾ? ಇನ್ನು ಮುಂದೆ ಸಾಧ್ಯವಿಲ್ಲ.

ಮಹಿಳೆಯರ ಮೇಲಿನ ಅಪರಾಧಗಳಿಗೆ ಕುರುಡಾಗದಿರಿ, ದನಿ ಎತ್ತಿ ಎಂದು ರಮ್ಯಾ (ದಿವ್ಯಸ್ಪಂದನ) ಕರೆ ನೀಡಿದ್ದಾರೆ.

Share This Article
Leave a comment