ದಾನಿ, ಬಾಲಿವುಡ್ ನಟ ಸೋನು ನಿವಾಸ, ಕಚೇರಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ ?

Team Newsnap
1 Min Read

ಬಾಲಿವುಡ್ ನಟ, ಬಡವರ ಕಷ್ಟ ಗಳಿಗೆ ಸ್ಪಂದಿಸುವ ಸೋನು​ ಸೂದ್​ಗೆ ಸೇರಿದ ನಿವಾಸ, ಕಚೇರಿ ಸೇರಿ 6 ಜಾಗಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆಂದು ಮೂಲಗಳಿಂದ ಗೊತ್ತಾಗಿದೆ.

ದೆಹಲಿ ರಾಜ್ಯ ಸರ್ಕಾರದ ಮೆಂಟರ್​ಷಿಪ್​ ಪ್ರೋಗ್ರಾಮ್ ಫಾರ್ ಸ್ಕೂಲ್ ಸ್ಟೂಡೆಂಟ್ಸ್​ ಕಾರ್ಯಕ್ರಮಕ್ಕೆ ಸೋನು ಸೂದ್ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾದ ನಂತರ ಈ ಬೆಳವಣಿಗೆ ಆಗಿದೆ.

ನಟ ಸೋನುಸೂದ್ ಇತ್ತೀಚೆಗೆ ಆಮ್ ಆದ್ಮಿ ಪಾರ್ಟಿ ಸೇರಲಿದ್ದಾರೆಂಬ ಚರ್ಚೆಯಾಗಿತ್ತು. ಈ ಕುರಿತಂತೆ ಮಾಧ್ಯಮ ಪ್ರಶ್ನೆಗೆ ಉತ್ತರಿಸಲು ಸೋನುಸೂದ್ ಕೂಡ ನಿರಾಕರಿಸಿದ್ದರು.

ಸೋನು ಸೂದ್ ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಮತ್ತು ನಂತರ ಅಸಹಾಯಕರಿಗೆ ಸಹಾಯ ಮಾಡುವ ಮೂಲಕ ಜನಪ್ರಿಯತೆ ಗಳಿಸಿದ್ದಾರೆ.

ವಲಸಿಗ ಕಾರ್ಮಿಕರ ಪ್ರಯಾಣಕ್ಕಾಗಿ ವಿಶೇಷ ವಿಮಾನ ವ್ಯವಸ್ಥೆಯನ್ನೂ ಮಾಡಿದ್ದ ಸೋನುಸೂದ್​ ಬಗ್ಗೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದ್ದವು.

Share This Article
Leave a comment