September 29, 2022

Newsnap Kannada

The World at your finger tips!

politics,book,kuvempu

Chalukarayaswamy calls for cancellation of text book revision committee

ಡಿಕೆಶಿ – ಜಮೀರ್ ಕಿತ್ತಾಟ: ಒಕ್ಕಲಿಗರನ್ನು ಟಚ್ ಮಾಡಬೇಡ – ಚಲುವರಾಯಸ್ವಾಮಿ ಸಂಧಾನಕಾರ

Spread the love

ಕಾಂಗ್ರೆಸ್ ಶಾಸಕನ ಜಮೀರ್ ಖಾನ್ ನ ಅತಿಯಾದ ಸ್ವಾಮಿ ನಿಷ್ಠೆಗೆ ಕಡಿವ ಹಾಕಲು ಮಾಜಿ ಸಚಿವ ಚಲುವರಾಯಸ್ವಾಮಿ ಮಧ್ಯಪ್ರವೇಶ ಮಾಡಿದ್ದಾರೆ

ಸಂಸದ ಡಿ.ಕೆ ಸುರೇಶ್ ಮನೆಗೆ ಭೇಟಿ ನೀಡಿದ ಚಲುವರಾಯಸ್ವಾಮಿ ಜಮೀರ್ ವಿರುದ್ಧ ಹರಿಹಾಯ್ದಿದ್ದಾರೆ. ಒಕ್ಕಲಿಗರ ಬಗ್ಗೆ ಮಾತಾಡದಂತೆ ಚಲುವರಾಯಸ್ವಾಮಿ ತಾಕೀತು ಮಾಡಿದ್ದಾರೆ. ಒಂದೇ ನಾಣ್ಯಕ್ಕೆ ಎರಡು ಮುಖಗಳು(ಬ್ಯಾಂಕರ್ಸ್ ಡೈರಿ)

ಒಂದು ವೇಳೆ ಒಕ್ಕಲಿಗರ ಬಗ್ಗೆ ಹಗುರವಾಗಿ ಮಾತನಾಡಿದರೆ ಜಮೀರ್ ಈ ನಡೆಯಿಂದ ಜೆಡಿಎಸ್‍ಗೆ ಲಾಭವಾಗಬಹುದು. ಹೀಗಾಗಿ ಆರಂಭದಲ್ಲೇ ವಿವಾದವನ್ನು ತಣ್ಣಗಾಗಿಸಲು ಚಲುವರಾಯಸ್ವಾಮಿ ಮುಂದಾಗಿದ್ದಾರೆ.

ಜಮೀರ್ ಗೂ ಆಪ್ತರಾಗಿರುವ ಚಲುವರಾಯಸ್ವಾಮಿ ಖಾನ್ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ವಿವಾದಕ್ಕೆ ಅಂತ್ಯ ಹಾಡಲು ಸಿದ್ದರಾಮಯ್ಯ ಸಹ ಸೂಚಿಸಿದ್ದಾರೆ ಎನ್ನಲಾಗಿದೆ.

ಜಮೀರ್, ಸಿದ್ದರಾಮಯ್ಯ ಆಪ್ತರಾದ ಚಲುವರಾಯಸ್ವಾಮಿ ಖುದ್ದು ಫೀಲ್ಡ್‍ಗಿಳಿದಿದ್ದಾರೆ. ಕಟುನುಡಿಗಳ ಮೂಲಕ ಆಪ್ತನಿಗೆ ಸುಮ್ಮನಿರುವಂತೆ ಪರೋಕ್ಷವಾಗಿ ಸೂಚಿಸಿದ್ದಾರೆ. ಎರಡು ಪ್ರತ್ಯೇಕ ಭೀಕರ ರಸ್ತೆ ಅಪಘಾತ – ಇಬ್ಬರು ಪೋಲಿಸರು ಸೇರಿ 8 ಮಂದಿ ಸಾವು

ಜಮೀರ್ ಗೆ ಶೋಕಾಸ್ ನೋಟಿಸ್ ?

ಜಮೀರ್ ಗೆ ಶೋಕಾಸ್ ನೋಟಿಸ್ ನೀಡಿ ಶಿಸ್ತುಕ್ರಮ ಕೈಗೊಳ್ಳುವಂತೆ ಶಿಸ್ತುಪಾಲನ ಸಮಿತಿ ರೆಹಮಾನ್ ಖಾನ್‍ಗೆ ಖುದ್ದು ಡಿಕೆಶಿ ಸೂಚಿಸಿದ್ದಾರೆ. ಇದೆಲ್ಲದರ ಮಧ್ಯೆ ಸಿದ್ದರಾಮಯ್ಯ ಕಾಂಗ್ರೆಸ್‍ನಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ತುಟಿ ಬಿಚ್ಚಿಲ್ಲ.

ಕಾಂಗ್ರೆಸ್ ನಲ್ಲಿ ನಡೆದಿರುವ ಈ ಕಿತ್ತಾಟವನ್ನು ಜೆಡಿಎಸ್ ಹೇಗೆ ಲಾಭ ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ಲೆಕ್ಕಾಚಾರ ಹಾಕಲಾಗುತ್ತಿದೆ ಎಂಬ ವರದಿಗಳೂ ಇವೆ.

error: Content is protected !!