15 ವರ್ಷದ ಹುಡುಗನಿಗೆ 33 ಲಕ್ಷ ರು ಸಂಬಳದ ಆಫರ್ ಕೊಟ್ಟ ಅಮೇರಿಕಾ ಕಂಪನಿ !

Team Newsnap
1 Min Read

15 ವರ್ಷದ ಹುಡುಗನೊಬ್ಬ ಅಮೆರಿಕಾದ ಪ್ರತಿಷ್ಠಿತ ಜಾಹೀರಾತು ಕಂಪನಿಯನ್ನೇ ಇಂಪ್ರೆಸ್‌ ಮಾಡಿ , ವೆಬ್‌ಸೈಟ್‌ ಡೆವಲಪ್‌ಮೆಂಟ್‌ ಕಾಂಪಿಟೇಷನ್‌ನಲ್ಲಿ ವಿಶ್ವದ ಸಾವಿರಕ್ಕೂ ಅಧಿಕ ಸ್ಪರ್ಧಿಗಳನ್ನೇ ಹಿಂದಿಕ್ಕಿ ವಾರ್ಷಿಕ 33 ಲಕ್ಷ ಸಂಬಳ ಪಡೆಯುವ ಅವಕಾಶ ಗಿಟ್ಟಿಸಿಕೊಂಡಿದ್ದಾನೆ

ವೇದಾಂತ್‌ ದಿಯೋಕಟೆಗೆ ಇನ್ನೂ15 ವರ್ಷ . ಈ ಪೋರನಿಗೆ ಅಮೆರಿಕಾ ನ್ಯೂಜೆರ್ಸಿಯ ಜಾಹೀರಾತು ಕಂಪನಿ ವರ್ಷಕ್ಕೆ 33 ಲಕ್ಷ ರೂಪಾಯಿ ಪ್ಯಾಕೇಜ್‌ ನೀಡಿ ಜಾಬ್ ಆಫರ್‌ ಕೊಟ್ಟಿದೆ. ಒಂದೇ ನಾಣ್ಯಕ್ಕೆ ಎರಡು ಮುಖಗಳು(ಬ್ಯಾಂಕರ್ಸ್ ಡೈರಿ)

ನಾಗಪುರದ ಈ ಹುಡುಗ , ತನ್ನ ತಾಯಿಯ ಹಳೇ ಲ್ಯಾಪ್‌ಟಾಪ್‌ನಲ್ಲೇ ಇನ್ಸ್‌ಸ್ಟ ಬ್ರೋಸಿಂಗ್ ಮಾಡ್ತಾ ವೆಬ್‌ಸೈಟ್ ಡೆವಲಪ್‌ಮೆಂಟ್‌ ಕಾಂಪಿಟೇಷನ್‌ನಲ್ಲಿ ಪಾಲ್ಗೊಂಡಿದ್ದ.

2 ದಿನದಲ್ಲಿ 2066 ಕೋಡ್ ಲೈನ್‌ಗಳನ್ನ ಬರೆದಿದ್ದ. ಆ ಮೂಲಕ ತನ್ನ ಕನಸಿನ ಅಮೆರಿಕ ಕಂಪನಿಯ ಕೆಲಸ ಗಿಟ್ಟಿಸಿದ್ದ. ಡಿಕೆಶಿ – ಜಮೀರ್ ಕಿತ್ತಾಟ: ಒಕ್ಕಲಿಗರನ್ನು ಟಚ್ ಮಾಡಬೇಡ – ಚಲುವರಾಯಸ್ವಾಮಿ ಸಂಧಾನಕಾರ

ಇಡೀ ವಿಶ್ವದ 1000 ಸ್ಪರ್ಧಿಗಳಲ್ಲೇ ವೇದಾಂತ್‌ ಮೊದಲಿಗ. ವರ್ಷಕ್ಕೆ 33 ಲಕ್ಷ ಪ್ಯಾಕೇಜ್‌ ನೀಡಿ ನ್ಯೂಜೆರ್ಸಿಯ ಜಾಹೀರಾತು ಕಂಪನಿ ಕೆಲಸದ ಆಫರ್‌ ನೀಡಿತ್ತು.

ಆಮೇಲೆ ಈತನಿಗೆ ಕೇವಲ 15 ವರ್ಷವೆಂದು ತಿಳಿದು ಆಫರ್‌ನ ಹಿಂಪಡೆದಿದೆ. ಆದರೆ, ನಿಶಾಂತ್‌ ನಿರಾಶನಾಗಬೇಡ. ಮೊದಲು ಓದು ಕಂಪ್ಲೀಟ್‌ ಮಾಡು, ಆ ಮೇಲೆ ಕೆಲಸಕ್ಕೆ ಸಂಪರ್ಕಿಸು ಅಂತಾ ಕಂಪನಿ ವೇದಾಂತ್‌ಗೆ ಭರವಸೆ ನೀಡಿದೆ.

ವೇದಾಂತ್‌, animeeditor.com ಎಂಬ ವೆಬ್‌ಸೈಟ್‌ನ ಡೆವಲೆಪ್‌ ಮಾಡಿದ್ದಾನೆ. ಇದರಲ್ಲಿ ಯೂಟ್ಯೂಬ್‌ನಂತೆ ವಿಡಿಯೋಗಳನ್ನ ಅಪ್‌ಲೋಡ್‌ ಮಾಡಬಹುದು. blogs, vlogs, chatbot ಜತೆ ವಿಡಿಯೋ ನೋಡುವ ಫ್ಯೂಚರ್ಸ್‌ ಇದರಲ್ಲಿವೆ.

Share This Article
Leave a comment